Asianet Suvarna News Asianet Suvarna News

ದೆಹಲಿ ವಾಯು ಗುಣಮಟ್ಟ ತೀರಾ ಕುಸಿತ : ನಿನ್ನೆ ಈ ವರ್ಷದ ಅತಿ ಮಲಿನ ದಿನ

ಚಳಿಗಾಲದ ಈ ಸಂದರ್ಭದಲ್ಲಿ ದೆಹಲಿಯ ವಾಯುಗುಣಮಟ್ಟ ಕುಸಿದಿದ್ದು, ಶುಕ್ರವಾರ ಅತಿ ಗಂಭೀರ ವಾಯುಗುಣಮಟ್ಟ ದಾಖಲಾಗಿದೆ. ಇದು ಕಳೆದ ಜನವರಿ ನಂತರದ ಅತಿ ಮಲಿನ ದಿನವಾಗಿದೆ. ಮುಂದಿನ 3 ದಿನಗಳವರೆಗೆ ತುಂಬಾ ಕೆಟ್ಟದಾದ ಪರಿಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ಹವಾಮಾನ ವರದಿ ಹೇಳಿದೆ.

Air Polution increasing in Delh, Yesterday was the dirtiest day of this year akb
Author
First Published Oct 29, 2022, 9:05 AM IST

ನವದೆಹಲಿ: ಚಳಿಗಾಲದ ಈ ಸಂದರ್ಭದಲ್ಲಿ ದೆಹಲಿಯ ವಾಯುಗುಣಮಟ್ಟ ಕುಸಿದಿದ್ದು, ಶುಕ್ರವಾರ ಅತಿ ಗಂಭೀರ ವಾಯುಗುಣಮಟ್ಟ ದಾಖಲಾಗಿದೆ. ಇದು ಕಳೆದ ಜನವರಿ ನಂತರದ ಅತಿ ಮಲಿನ ದಿನವಾಗಿದೆ. ಮುಂದಿನ 3 ದಿನಗಳವರೆಗೆ ತುಂಬಾ ಕೆಟ್ಟದಾದ ಪರಿಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ಹವಾಮಾನ ವರದಿ ಹೇಳಿದೆ.

ವಾಯು ಗುಣಮಟ್ಟ ಸೂಚ್ಯಂಕ (Air quality index) 401 ರಿಂದ 500 ರೂಪಾಯಿ. ಇದ್ದರೆ ಅತಿ ಗಂಭೀರ ಎನ್ನಿಸಿಕೊಳ್ಳುತ್ತದೆ. ಶುಕ್ರವಾರ ಸಾಯಂಕಾಲ 4 ಗಂಟೆಯ ಸುಮಾರಿಗೆ ಆನಂದ ವಿಹಾರ ಪ್ರದೇಶದಲ್ಲಿ (Ananda Vihar area) ಗಾಳಿಯ ಗುಣಮಟ್ಟ 455 ಅಂಕಗಳಿಗೆ ಕುಸಿದಿದ್ದು, ಇದು ಅತ್ಯಂತ ಮಾಲಿನ್ಯ ಪ್ರದೇಶ ಎನಿಸಿಕೊಂಡಿದೆ. ದೆಹಲಿಯಲ್ಲಿ ಒಟ್ಟಾರೆ ಗುಣಮಟ್ಟ357, ಗಾಜಿಯಾಬಾದ್‌ನಲ್ಲಿ(Ghaziabad) 384, ನೋಯ್ಡಾದಲ್ಲಿ(Noida)  371, ಗ್ರೇಟರ್‌ ನೊಯ್ಡಾದಲ್ಲಿ 364 ಮತ್ತು ಫರೀದಾಬಾದ್‌ನಲ್ಲಿ (Faridabad) 346 ಅಂಕಗಳಷ್ಟು ದಾಖಲಾಗಿದೆ.

ಜಾಗೃತರಾಗಿರಿ…. ವಾಯುಮಾಲಿನ್ಯದಿಂದ ಕಾಡುತ್ತೆ ಶ್ವಾಸಕೋಶದ ಕ್ಯಾನ್ಸರ್

ಇದರಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ವರದಿ ಹೇಳಿದೆ. ದೆಹಲಿಯಷ್ಟೇ ಅಲ್ಲದೇ ಪಂಜಾಬ್‌(Punjab), ಉತ್ತರಪ್ರದೇಶ (Uttar Pradesh) ಮತ್ತು ಬಿಹಾರಗಳಲ್ಲೂ(Bihar) ಗಾಳಿಯ ಗುಣಮಟ್ಟ ಕುಸಿದಿದೆ.

ವಾಯುಮಾಲಿನ್ಯ ತಡೆಗೆ ಅರಳೀಮರ ಹೆಚ್ಚು ಸಹಕಾರಿ; ಕೋಟಾ ಶ್ರೀನಿವಾಸ ಪೂಜಾರಿ

Follow Us:
Download App:
  • android
  • ios