Storm Eunice: ಬಿರುಗಾಳಿಯಲ್ಲೂ ವಿಮಾನ ಲ್ಯಾಂಡಿಂಗ್, ಭಾರತೀಯ ಪೈಲಟ್‌ಗಳ ಸಾಹಸಕ್ಕೆ ಪ್ರಶಂಸೆ!
* ಯುನೈಸ್ ಚಂಡಮಾರುತಕ್ಕೆ ಯೂರೋಪ್, ಬ್ರಿಟನ್ ತತ್ತರ
* ವಿಷಮ ಸ್ಥಿತಿಯಲ್ಲೂ ವಿಮಾನ ಲ್ಯಾಂಡ್ ಮಾಡಿ ಭಾರತೀಯ ಪೈಲಟ್‌ಗಳ ಸಾಹಸ
* ವೈರಲ್ ಅಯ್ತು ವಿಡಿಯೋ
ಲಂಡನ್(ಫೆ.20): ಯುನೈಸ್ ಚಂಡಮಾರುತವು ಯುರೋಪ್ ಮತ್ತು ಬ್ರಿಟನ್‌ನಲ್ಲಿ ಹಾನಿಯನ್ನುಂಟು ಮಾಡಿದೆ. ಬ್ರಿಟನ್‌ನಲ್ಲಿ ಜನರು ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಜನರೇ ನಿಯಂತ್ರಣ ಕಳೆದುಕೊಂಡು ಬೀಳುತ್ತಿದ್ದರು. ಬಿರುಗಾಳಿಗೆ ಮರಗಳು ನೆಲಕ್ಕುರುಳಿದ್ದು, ಮನೆಗಳಿಗೆ ಹಾನಿಯಾಗಿದೆ. ಇಂತಹ ಭೀಕರ ಗಾಳಿಯಲ್ಲಿ ಇರಲು ಯಾರಾದರೂ ಹೇಗೆ ಧೈರ್ಯ ಮಾಡುತ್ತಾರೆ? ಆದ್ದರಿಂದ ಯುಕೆಯಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
Russia Ukraine Crisis ಉಕ್ರೇನ್‌ನಿಂದ ಭಾರತೀಯರ ಏರ್‌ಲಿಫ್ಟ್‌ಗೆ ಪ್ಲಾನ್, 3 ಏರ್‌ಇಂಡಿಯಾ ವಿಮಾನ ನಿಯೋಜನೆ!
ಆದರೀಗ ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಾರತೀಯ ಪೈಲಟ್‌ಗಳು ಎರಡು ವಿಮಾನಗಳನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬ್ರಿಟನ್‌ನ ರಾಜಧಾನಿ ಲಂಡನ್‌ನಲ್ಲಿರುವ ಹೀಥ್ರೂ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿ ವಿಮಾನಗಳು ಲ್ಯಾಂಡ್ ಹಾಗೂ ಟೇಕ್‌ಆಫ್ ಆಗುತ್ತಲೇ ಇರುತ್ತವೆ, ಆದರೆ ಚಂಡಮಾರುತದ ಕಾರಣ, ಹೀಥ್ರೂ ವಿಮಾನ ನಿಲ್ದಾಣವು ಫೆಬ್ರವರಿ 18 ರಂದು ನಿರ್ಜನವಾಗಿತ್ತು. ಗಾಳಿಯು ಎಷ್ಟು ಪ್ರಬಲವಾಗಿತ್ತೆಂದರೆ ಯಾವುದೇ ಪೈಲಟ್‌ಗೆ ಇಲ್ಲಿ ವಿಮಾನ ಇಳಿಸುವ ಅಥವಾ ಟೇಕ್ ಆಫ್ ಮಾಡುವ ಧೈರ್ಯವೇ ಇರಲಿಲ್ಲ. ವಿಮಾನಗಳಿಲ್ಲದೇ ಆಗಸವೂ ಖಾಲಿಯಾಗಿತ್ತು. ಅಂತಹ ಸಮಯದಲ್ಲಿ ಭಾರತದ ಎರಡು ವಿಮಾನಗಳು ಲಂಡನ್ ತಲುಪಿವೆ.
ಭಾರತೀಯ ಪೈಲಟ್‌ಗಳ ಸಾಹಸಕ್ಕೆ ಪ್ರಶಂಸೆ
ಅಂಚಿತ್ ಭಾರದ್ವಾಜ್ ಅವರು ಹೈದರಾಬಾದ್‌ನಿಂದ ಹಾರಿದ ಏರ್ ಇಂಡಿಯಾ ವಿಮಾನದ (AI-147) ಪೈಲಟ್ ಆಗಿದ್ದರು. ಅದೇ ಸಮಯದಲ್ಲಿ, ಆದಿತ್ಯ ರಾವ್ ಅವರು ಗೋವಾದಿಂದ ಟೇಕ್ ಆಫ್ ಆಗಿದ್ದ ಏರ್ ಇಂಡಿಯಾ ವಿಮಾನದ (AI-145) ಪೈಲಟ್ ಆಗಿದ್ದರು. ಇಬ್ಬರೂ ಪೈಲಟ್‌ಗಳು ಬಿರುಗಾಳಿ ಮಧ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ, ಸುರಕ್ಷಿತವಾಗಿ ವಿಮಾನಗಳನ್ನು ಲ್ಯಾಂಡಿಂಗ್ ಮಾಡಿದರು. ಭಾರತೀಯ ಪೈಲಟ್‌ಗಳ ಈ ಸಾಹಸಕ್ಕೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಮಾನದ ಲ್ಯಾಂಡಿಂಗ್ ಅನ್ನು ಬಿಗ್ ಜೆಟ್ ಟಿವಿ ಹೆಸರಿನ ಯೂಟ್ಯೂಬ್ ಚಾನೆಲ್ ಲೈವ್ ಸ್ಟ್ರೀಮ್ ಮಾಡಿದೆ.
Singapore Airshow 2022ರಲ್ಲಿ ಹೀರೋ ಆದ 'ಮೇಡ್ ಇನ್ ಇಂಡಿಯಾ'ದ ತೇಜಸ್!
ವಿಮಾನವೊಂದು ಲ್ಯಾಂಡಿಂಗ್‌ಗಾಗಿ ವಿಮಾನ ನಿಲ್ದಾಣದ ಕಡೆಗೆ ಚಲಿಸುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಬಲವಾದ ಗಾಳಿಯಿಂದಾಗಿ ತತ್ತರಿಸಿದರೂ, ಪೈಲಟ್ ಅತ್ಯಂತ ಪರಿಣಾಮಕಾರಿಯಾಗಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಪೈಲಟ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇಬ್ಬರೂ ಪೈಲಟ್‌ಗಳನ್ನು ಶ್ಲಾಘಿಸಿರುವ ಏರ್ ಇಂಡಿಯಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ನಮ್ಮ ನುರಿತ ಪೈಲಟ್‌ಗಳು ತಮ್ಮ ವಿಮಾನಗಳನ್ನು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ, ಇತರ ಅನೇಕ ವಿಮಾನಯಾನ ಸಂಸ್ಥೆಗಳು ಇದನ್ನು ಮಾಡಲು ಹಿಂದೇಟು ಹಾಕಿದ ಸಂದರ್ಭದಲ್ಲಿ ಸಾಹಸ ತೋರಿದ್ದಾರೆ ಎಂದಿದ್ದಾರೆ.
ಉಕ್ರೇನ್‌ನಿಂದ ಭಾರತೀಯರ ಏರ್‌ಲಿಫ್ಟ್‌ಗೆ ಪ್ಲಾನ್, 3 ಏರ್‌ಇಂಡಿಯಾ ವಿಮಾನ ನಿಯೋಜನೆ!
ರಷ್ಯಾ-ಉಕ್ರೇನ್ ನಡುವೆ ಯುದ್ಧ(Russia Ukraine Crisis) ಭೀತಿ ಉಂಟಾಗಿದೆ. ಈ ನಡುವೆ ಉಕ್ರೇನ್‌ನಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ವಂದೇ ಭಾರತ ಮಿಷನ್(Vande Bharat Mission) ಅಡಿಯಲ್ಲಿ ಮೂರು ವಿಮಾನಗಳನ್ನು ನಿಯೋಜಿಸಲಾಗುತ್ತದೆ. ಫೆ.22, 24 ಮತ್ತು 26ರಂದು ಏರ್‌ಲಿಫ್ಟ್‌ಗೆ ವೇಳಾಪಟ್ಟಿಸಿದ್ಧಪಡಿಸಲಾಗಿದೆ ಎಂದು ಏರ್ ಇಂಡಿಯಾ ಘೋಷಿಸಿದೆ. ಏರ್‌ಇಂಡಿಯಾ(AirIndia) ಕಚೇರಿ, ವೆಬ್‌ಸೈಟ್, ಕಾಲ್ ಸೆಂಟರ್ ಅಧಿಕೃತ ಟ್ರಾವೆಲ್ ಏಜೆನ್ಸಿಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು ಎಂದು ತಿಳಿಸಿದೆ.
ಉಕ್ರೇನ್‌ನ ಅತಿ ದೊಡ್ಡ ವಿಮಾನ ನಿಲ್ದಾಣ ಬೋರಿಸ್ಪಿಲ್ ಅಂತಾರಾಷ್ಟ್ರೀಯ ವಿಮಾನದಿಂದ ಏರ್‌ಇಂಡಿಯಾ ಕಾರಾರಯಚರಣೆ ಆರಂಭಿಸಲಿದೆ. ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ಉಕ್ರೇನ್ ದೇಶಕ್ಕೆ ತೆರಳುವ ಮತ್ತು ವಾಪಸ್ ಬರುವ ವಿಮಾನಗಳ ಸಂಖ್ಯೆಯ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಭಾರತ ಸರ್ಕಾರ ತೆರವುಗೊಳಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.
Russia Ukraine Crisis: ಉಕ್ರೇನ್ ಗಡಿಯಲ್ಲಿ 1.30 ಲಕ್ಷ ರಷ್ಯಾ ಸೈನಿಕರ ನಿಯೋಜನೆ
ರಷ್ಯಾ ದಾಳಿ: ಅಮೆರಿಕ ಆರೋಪ
ಯುದ್ಧಭೀತಿ ಆವರಿಸಿರುವ ನಡುವೆಯೇ ಉಕ್ರೇನ್‌ನ ಡಾನ್‌ಬಾಸ್ ಪ್ರಾಂತ್ಯದ ಶಿಶುವಿಹಾರದ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ದಾಳಿಯಲ್ಲಿ ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ ಹಾಗೂ ಇಡೀ ಗ್ರಾಮ ಕಾರ್ಗತ್ತಲಲ್ಲಿ ಮುಳುಗಿದೆ. ಇದು ಮಿನ್ಸ್$್ಕ ಒಪ್ಪಂದದ ಉಲ್ಲಂಘನೆ ಎಂದು ಉಕ್ರೇನ್‌ನ ಅಮೆರಿಕ ದೂತಾವಾಸ ಹೇಳಿದೆ. ಈ ನಡುವೆ, ಅಮೆರಿಕ-ರಷ್ಯಾ ಸಂಬಂಧ ಹಳಸುತ್ತಿರುವ ದ್ಯೋತಕವಾಗಿ ಮಾಸ್ಕೋದಲ್ಲಿನ ಅಮೆರಿಕ ರಾಯಭಾರ ಕಚೇರಿ ಉಪಮುಖ್ಯಸ್ಥ ಬಾರ್ಟ್ ಗಾರ್ಮನ್‌ರನ್ನು ರಷ್ಯಾ ಉಚ್ಚಾಟನೆ ಮಾಡಿದೆ.
ರಾಜತಾಂತ್ರಿಕ ಮಾತುಕತೆಯಿಂದಾಗಿ ಅಚ್ಚರಿಯ ಬೆಳವಣಿಗೆ
ಪಾಶ್ಚಾತ್ಯ ರಾಷ್ಟ್ರಗಳ ಸಂಗಡ ಸೇರಿರುವ ಉಕ್ರೇನ್‌ಗೆ ಪಾಠ ಕಲಿಸಲು ಆ ದೇಶದ ಮೇಲೆ ಬಲಾಢ್ಯ ರಷ್ಯಾ ಯಾವುದೇ ಕ್ಷಣದಲ್ಲಿಯಾದರೂ ಯುದ್ಧ ಸಾರಬಹುದು ಎಂಬ ಆತಂಕ ಸೃಷ್ಟಿಯಾಗಿರುವಾಗಲೇ ಅನಿರೀಕ್ಷಿತ ಬೆಳವಣಿಗೆಯೊಂದು ಮಂಗಳವಾರ ನಡೆದಿದೆ. ಉಕ್ರೇನ್ ಗಡಿಯಲ್ಲಿ ನಿಯೋಜನೆಗೊಂಡಿದ್ದ ತನ್ನ ಒಂದು ಲಕ್ಷಕ್ಕೂ ಹೆಚ್ಚು ಯೋಧರ ಪೈಕಿ ಒಂದಷ್ಟುಮಂದಿಯನ್ನು ರಷ್ಯಾ ವಾಪಸ್ ಕರೆಸಿಕೊಂಡಿದೆ. ರಾಜತಾಂತ್ರಿಕ ಮಾರ್ಗದಲ್ಲಿ ನಡೆದ ಸಂಧಾನ ಪ್ರಕ್ರಿಯೆಗಳ ಫಲ ಇದಾಗಿದ್ದು, ರಷ್ಯಾ ಮತ್ತಷ್ಟುಯೋಧನ್ನು ಹಿಂಪಡೆದುಕೊಂಡರೆ ಯುದ್ಧ ಸಾಧ್ಯತೆ ಕ್ಷೀಣಿಸಲಿದೆ.