ಏರ್ ಇಂಡಿಯಾ ಇಂದು ಟಾಟಾಗೆ ಅಧಿಕೃತ ಹಸ್ತಾಂತರ
- ಟಾಟಾ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರಗೊಳ್ಳಲಿರುವ ಏರ್ ಇಂಡಿಯಾ
- ಮರಳಿ ಗೂಡಿಗೆ ಬಂದ ಏರ್ ಇಂಡಿಯಾ
- 90 ವರ್ಷಗಳ ಹಿಂದೆ ಟಾಟಾ ಸಂಸ್ಥೆಯಿಂದಲೇ ಆರಂಭವಾಗಿದ್ದ Air India
ನವದೆಹಲಿ: 18000 ರು. ಪಾವತಿಸಿ ಬಿಡ್ಡಿಂಗ್‌ನಲ್ಲಿ ಖರೀದಿಸಿರುವ ಏರ್ ಇಂಡಿಯಾ ಸಂಸ್ಥೆ ಗುರುವಾರ ಅಧಿಕೃತವಾಗಿ ಟಾಟಾ ಸಮೂಹಕ್ಕೆ ಹಸ್ತಾಂತರವಾಗುವ ಸಾಧ್ಯತೆ ಇದೆ. ತನ್ಮೂಲಕ 69 ವರ್ಷಗಳ ಕಾಲ ಸರ್ಕಾರದ ತೆಕ್ಕೆಯಲ್ಲಿದ್ದ ಏರ್ ಇಂಡಿಯಾ ಮರಳಿ ಖಾಸಗಿ ಒಡೆತನದ ಭಾಗವಾಗಲಿದೆ. 90 ವರ್ಷಗಳ ಹಿಂದೆ ಟಾಟಾ ಸಂಸ್ಥೆಯಿಂದಲೇ ಆರಂಭವಾಗಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು 1953ರಲ್ಲಿ ರಾಷ್ಟ್ರೀಕರಣಗೊಳಿಸಲಾಗಿತ್ತು. ಆದರೆ ಇದೀಗ ಮತ್ತೆ ಟಾಟಾ ಗ್ರೂಪ್‌ಗೆ ಹಸ್ತಾಂತರವಾದಂತಾಗಲಿದೆ.
ಏರ್ ಇಂಡಿಯಾವನ್ನು ಇಂದು ಅಧಿಕೃತವಾಗಿ ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದ್ದು, ಮಾಲೀಕತ್ವ ಕೈ ಬದಲಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೂಲಗಳ ಪ್ರಕಾರ, ಭಾರತದ ಸರ್ಕಾರಿ ಸ್ವಾಮ್ಯದ ಫ್ಲ್ಯಾಗ್ ಕ್ಯಾರಿಯರ್‌ನ ಮಾಲೀಕತ್ವದ ಬದಲಾವಣೆಯನ್ನು ಗುರುತಿಸಲು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ (Chandrasekaran) ಈ ಸಂದರ್ಭದಲ್ಲಿ ಉಪಸ್ಥಿತರಿರುವ ಸಾಧ್ಯತೆಯಿದೆ.
ಮಾಲೀಕತ್ವದ ವರ್ಗಾವಣೆಯು ಗುರುವಾರ ನಡೆಯಲಿದೆ ಮತ್ತು ವಿಮಾನಯಾನವನ್ನು ವರ್ಗಾಯಿಸುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಮತ್ತು ಸಂಪೂರ್ಣ ಹಸ್ತಾಂತರಕ್ಕೆ ಸಮಯ ಹಿಡಿಯಬಹುದು ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಅನೇಕ ಷರತ್ತು, ನಷ್ಟದಲ್ಲಿದ್ದರೂ ಏರ್ ಇಂಡಿಯಾ ಖರೀದಿಸಿದ್ದೇಕೆ ಟಾಟಾ?
ಭಾರಿ ಸ್ಪರ್ಧೆಯಿಂದ ಕೂಡಿದ್ದ ಹರಾಜು ಪ್ರಕ್ರಿಯೆಯ ನಂತರ, ಸರ್ಕಾರವು ಕಳೆದ ವರ್ಷ ಅಕ್ಟೋಬರ್ 8 ರಂದು ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ ₹18,000 ಕೋಟಿಗೆ ಏರ್ ಇಂಡಿಯಾವನ್ನು ಮಾರಾಟ ಮಾಡಿತ್ತು. ಇದರಲ್ಲಿ ಸುಮಾರು 2,700 ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ಪಾವತಿಸಲಾಗಿದ್ದು, ಮತ್ತು ಉಳಿದ ಹಣವನ್ನು ಏರ್ ಇಂಡಿಯಾದ ಸಾಲದ ಮೂಲಕ ನೀಡಲಾಗುವುದು ಎಂದು ತಿಳಿದು ಬಂದಿದೆ.
ಈ ಸ್ವಾಧೀನದ ನಂತರ, ಹೊಸ ಆಡಳಿತ ಮಂಡಳಿಯೂ ಏರ್‌ಲೈನ್ ಅನ್ನು ನಡೆಸಲು ಮಧ್ಯಂತರ ಆಡಳಿತ ಮಂಡಳಿಯನ್ನು ಸ್ಥಾಪಿಸಲಿದೆ. ಜೊತೆಗೆ , ಇದು ಏರ್‌ಏಷ್ಯಾ ( AirAsia) ಇಂಡಿಯಾ, ಟಿಸಿಎಸ್ (TCS) ಮತ್ತು ಟಾಟಾ ಸ್ಟೀಲ್‌ನಿಂದ (TATA Steel) ಕಾರ್ಯನಿರ್ವಾಹಕರನ್ನು ತೆಗೆದುಕೊಳ್ಳಲಿದೆ.
ಏರ್‌ಏಷ್ಯಾ ಇಂಡಿಯಾ ಅಧಿಕಾರಿಗಳು ಏರ್ ಇಂಡಿಯಾಗೆ ವಾಯುಯಾನ ಪರಿಣತಿಯನ್ನು ನೀಡಲಿದ್ದಾರೆ. ಹಾಗೆಯೇ , TCS ಸಂಸ್ಥೆಯೂ ಮಾಹಿತಿ ತಂತ್ರಜ್ಞಾನದ (IT )ಪರಿಣತಿಯನ್ನು ತರಲಿದೆ. ಹಾಗೆಯೇ ಯೂನಿಯನ್‌ಗಳನ್ನು ನಿರ್ವಹಿಸುವ ಅನುಭವ ಹೊಂದಿರುವ ಟಾಟಾ ಸ್ಟೀಲ್, ಏರ್ ಇಂಡಿಯಾದಲ್ಲಿ ಮಾನವ ಸಂಪನ್ಮೂಲ ಸಮಸ್ಯೆಗಳನ್ನು ನಿರ್ವಹಿಸಲಿದೆ ಎಂದು ಅನಾಮಧೇಯ ಮೂಲವೊಂದು ತಿಳಿಸಿದೆ.
ಏರ್ ಇಂಡಿಯಾ ಗೆದ್ದ ಟಾಟಾಗೆ ಫ್ಲೈಟ್ ಶೇಪ್ ಕುಕೀಸ್ ಗಿಫ್ಟ್
ಏರ್ ಇಂಡಿಯಾ ಟಾಟಾ ಗ್ರೂಪ್‌ಗೆ ಹಸ್ತಾಂತರದ ನಂತರ, ಟಾಟಾ ಸಮೂಹವು ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಮತ್ತು ವಿಸ್ತಾರಾ ಎಂಬ ಮೂರು ಏರ್‌ಲೈನ್‌ಗಳನ್ನು ಟಾಟಾ ಗ್ರೂಪ್ ನಿರ್ವಹಿಸುವ ಸಾಧ್ಯತೆಯಿದೆ .
ಆದರೆ AI ಒಪ್ಪಂದದಲ್ಲಿ SIA ಇಲ್ಲದ ಕಾರಣ ಗುಂಪು, ಸದ್ಯಕ್ಕೆ ವಿಸ್ತಾರಾವನ್ನು ಪ್ರತ್ಯೇಕ ಘಟಕವಾಗಿ ಮುಂದುವರಿಸಲು ಯೋಜಿಸಿದೆ. ವಿಸ್ತಾರಾ ಟಾಟಾ ಗ್ರೂಪ್ ಮತ್ತು SIA ನಡುವಿನ 51:49 ಷೇರಿನ ಜಂಟಿ ಉದ್ಯಮವಾಗಿದೆ. ಆದಾಗ್ಯೂ, SIA, ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯ ಭಾಗವಾಗಲು ಒಪ್ಪಿಕೊಂಡಿದೆ. ಆದರೆ ಕೋವಿಡ್ ಅವರ ವ್ಯವಹಾರದ ಮೇಲೆ ಪ್ರಭಾವ ಬೀರಿದ ನಂತರ ಮತ್ತು ಹಣವು ಬತ್ತಿಹೋದ ನಂತರ ಅದು ಮುಂದುವರೆಯಲು ಬಯಸಲಿಲ್ಲ ಎಂದು ತಿಳಿದು ಬಂದಿದೆ.
ನವೀಕರಣದ ಯೋಜನೆಯ ಭಾಗವಾಗಿ, ಟಾಟಾ ಸಮೂಹವು ಏರ್‌ಲೈನ್‌ನ ಕಾರ್ಯಾಚರಣೆಯ ಮತ್ತು ಸೇವಾ ಗುಣಮಟ್ಟವನ್ನು ಸುಧಾರಿಸಲು 100-ದಿನದ ಯೋಜನೆಯನ್ನು ಒಳಗೊಂಡ ನೀಲನಕಾಶೆಯನ್ನು ಸಿದ್ಧಪಡಿಸಿದೆ. ಸಮಯೋಚಿತ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರ ದೂರುಗಳು ಮತ್ತು ಕಾಲ್ ಸೆಂಟರ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸಲು ಈ ಯೋಜನೆ ಸಿದ್ಧವಾಗಿದೆ.