ದೆಹಲಿಯಿಂದ ಅಮೆರಿಕ ನೆವಾರ್ಕ್‌ಗೆ ಹೊರಟ್ಟಿದ್ದ ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆಯಲ್ಲಿ ವಿಮಾನದೊಳಗೆ ಬಾವಲಿ ಹಾರಾಟ ಅಪಾಯ ತಪ್ಪಿಸಲು ವಿಮಾನ ವಾಪಸ್ ದೆಹಲಿಯಲ್ಲಿ ಲ್ಯಾಂಡಿಂಗ್

ನವದೆಹಲಿ(ಮೇ.29): ತಾಂತ್ರಿಕ ಸೇರಿದಂತೆ ಹಲವು ಕಾರಣಗಳಿಂದ ಟೇಕ್ ಆಫ್ ಆದ ವಿಮಾನ ಮತ್ತೆ ಲ್ಯಾಂಡಿಂಗ್ ಆದ ಊದಾಹರಣೆಗಳಿವೆ. ಆದರೆ ಟೇಕ್ ಆಫ್ ಆದ ವಿಮಾನದೊಳಗೆ ಬಾವಲಿ ಪ್ರತ್ಯಕ್ಷವಾಗಿದೆ. ವಿಮಾನದೊಳಗೆ ಹಾರಾಟ ನಡೆಸಿದ ಬಾವಲಿ ಕಾರಣ ಪೈಲೆಟ್ ಅಮೆರಿಕ ನೆವಾರ್ಕ್‌ಗೆ ಹೊರಟಿದ್ದ ವಿಮಾನವನ್ನು ಮತ್ತೆ ವಾಪಸ್ ತಿರುಗಿಸಿ ದೆಹಲಿಯಲ್ಲಿ ಲ್ಯಾಂಡ್ ಮಾಡಿದ್ದಾರೆ. 

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಏರ್ ಇಂಡಿಯಾದ B 777-300ER ವಿಮಾನ VT-MLM ಆಪರೇಟಿಂಗ್ ಫ್ಲೈಟ್ AI - 105 (ದೆಹಲಿ- ನೆವಾರ್ಕ್) ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಜಾನೆ 2.20ಕ್ಕೆ ಟೇಕ್ ಆಫ್ ಆಗಿದೆ. ಟೇಕ್ ಆಫ್ ಆದ ಅರ್ಧಗಂಟೆಯಲ್ಲಿ ವಿಮಾನದೊಳಗೆ ಬಾವಲಿ ಪ್ರತ್ಯಕ್ಷವಾಗಿದೆ. ತಕ್ಷಣವೇ ಪೈಲೆಟ್ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದಾರೆ.

"

ಮಾಹಿತಿ ಪಡೆದ ಕಂಟ್ರೋಲ್ ರೂಂ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ವಾಪಸ್ ದೆಹಲಿಯಲ್ಲಿ ಲ್ಯಾಂಡ್ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ನ್ಯೂಜರ್ಸಿಯತ್ತ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ಆಗಸದಲ್ಲಿ ಯೂ ಟರ್ನ್ ಹೊಡೆದು ಮತ್ತೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.

18,000 ರು. ಟಿಕೆಟ್‌ನಲ್ಲಿ ಮುಂಬೈ​ನಿಂದ- ದುಬೈಗೆ ಏಕಾಂಗಿ ವಿಮಾನ ಪ್ರಯಾಣ!

ಮುಂಜಾನೆ 3.55ರ ವೇಳೆಗೆ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ಸುರಕ್ಷತಿವಾಗಿ ಲ್ಯಾಂಡ್ ಆಗಿದೆ. ವನ್ಯಜೀವಿ ಸಿಬ್ಬಂದಿಯನ್ನು ಬಾವಲಿ ಹಿಡಿಯಲು ಆಗಮಿಸಿದ್ದಾರೆ. ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಕಾರ್ಯಚರಣೆ ಬಾವಲಿ ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​DGCA) ಅಧಿಕಾರಿಗಳು ತಿಳಿಸಿದ್ದಾರೆ.

1 ಗಂಟೆಗೂ ಹೆಚ್ಚು ಕಾಲ ವಿಮಾನದೊಳಗೆ ಹಾರಾಡಿದ್ದ ಬಾವಲಿಗೆ ಸತ್ತುಬಿದ್ದಿದೆ. ಘಟನೆ ಕರಿತು ವಿವರವಾದ ತನಿಖೆಗೆ ವಿಮಾನಯಾನ ಸುರಕ್ಷತಾ ವಿಭಾಗಕ್ಕೆ ಸೂಚನೆ ನೀಡಲಾಗಿದೆ. ಇತ್ತ ಏರ್ ಇಂಡಿಯಾ ವಿವರವಾದ ವರದಿಯನ್ನು ಸುರಕ್ಷತಾ ವಿಭಾಗಕ್ಕೆ ಸಲ್ಲಿಸಿದೆ.