* 18,000 ರು. ಟಿಕೆಟ್‌ನಲ್ಲಿ ಮುಂಬೈನಿಂದ- ದುಬೈಗೆ ಏಕಾಂಗಿ ವಿಮಾನ ಪ್ರಯಾಣ* ಗೋಲ್ಡನ್ ವಿಸಾ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿದ್ದರಿಂದ ಒಲಿದ ಅದೃಷ್ಟ* 360 ಆಸನದ ಬೋಯಿಂಗ್ ವಿಮಾನ
ಮುಂಬೈ(ಮೇ.27): 360 ಆಸನದ ಬೋಯಿಂಗ್ ವಿಮಾನದಲ್ಲಿ ಮುಂಬೈನಿಂದ ದುಬೈಗೆ ಕೇವಲ 18 ಸಾವಿರ ರು.ಗೆ ವ್ಯಕ್ತಿಯೊಬ್ಬ ಏಕಾಂಗಿಯಾಗಿ ಪ್ರಯಾಣಿಸಿರುವ ಅಪರೂಪದ ಘಟನೆಯೊಂದು ನಡೆದಿದೆ. ಸ್ಟಾರ್ಗೆಮ್ಸ್ ಗ್ರೂಪ್‌ನ ಸಿಇಒ ಭಾವೇಶ್ ಜವೇರಿ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ ಅದೃಷ್ಟವಂತ ವ್ಯಕ್ತಿ.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!
ಕಳೆದ 20 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಜವೇರಿ ಭಾರತ ಮತ್ತು ದುಬೈ ಮಧ್ಯೆ 240ಕ್ಕೂ ಹೆಚ್ಚು ಬಾರಿ ಸಂಚರಿಸಿದ್ದಾರೆ. ಸಾಮಾನ್ಯವಾಗಿ ಬಿಸಿನೆಸ್ ಕ್ಲಾಸ್ನಲ್ಲೇ ಪ್ರಯಾಣಿಸುತ್ತಿದ್ದ ಅವರು ಮೇ. 19ರಂದು ಎಮಿರೇಟ್ಸ್ ವಿಮಾನದಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್ ಅನ್ನು ಕಾಯ್ದಿರಿಸಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಬೇರೆ ಪ್ರಯಾಣಿಕರು ಪ್ರಯಾಣ ರದ್ದು ಮಾಡಿದ್ದರು. ಹೀಗಾಗಿ ಜವೇರಿ ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ಇಸ್ಲಾಂ ಪ್ರಕಾರ ಹಿಂದು ವ್ಯಕ್ತಿ ಶವ ಸಮಾಧಿ; ಕುಟುಂಬದ ಮನವಿಗೆ ಸೌದಿಯಿಂದ ಭಾರತಕ್ಕೆ ಅವಶೇಷ!
ದುಬಾರಿ ಹಾರಾಟ: 180 ಟನ್ ತೂಕದ ಬೋಯಿಂಗ್ ವಿಮಾನ ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಲು 17 ಟನ್ ಇಂಧನವನ್ನು ದಹಿಸಬೇಕು. ಈ ಪ್ರಯಾಣಕ್ಕೆ ಏನಿಲ್ಲವೆಂದರೂ 8 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಆದರೆ, ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಗೋಲ್ಡನ್ ವೀಸಾ ಹೊಂದಿರುವ ಯುಎಇ ನಾಗರಿಕರಿಗೆ ಮಾತ್ರವೇ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
