ನವದೆಹಲಿ(ಏ.23):  ಕೊರೋನಾ 2ನೇ ಅಲೆ ಭಾರತದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಸೋಂಕಿತರ ಚಿಕಿತ್ಸೆ ಇದೀಗ ಸರ್ಕಾರಕ್ಕೆ ಸವಾಲಾಗಿದೆ. ಜೊತೆಗೆ ಕೆಲ ಅಹಿತರ ಘಟನೆಗಳು ಸರ್ಕಾರದ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಇದೀಗ ಸರ್ಕಾರ ವಿದೇಶಗಳಿಂದ  ಆಕ್ಸಿಜನ್ ಸೇರಿದಂತೆ ವೈದ್ಯಕೀಯ ನೆರವು ಕೋರಿದೆ. ಇದರ ಬೆನ್ನಲ್ಲೇ ಚೀನಾ, ಭಾರತದ ನೆರವಿಗೆ ಸಿದ್ದ ಎಂದಿದೆ.

ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ; ಆಕ್ಸಿಜನ್, ಲಸಿಕೆ ಕೊರತೆ ಸಮಸ್ಯೆಗೆ ಮೋದಿ ಸೂತ್ರ!

ಭಾರತದಲ್ಲಿ ಕೊರೋನಾ ವೈರಸ್ ಅಲೆ ಅತಿಯಾಗಿದೆ. ಸರ್ಕಾರ ಅಮೇರಿಕ, ಗಲ್ಫ್ ರಾಷ್ಟ್ರ ಸೇರಿದಂತೆ ಕೆಲ ದೇಶಗಳಿಂದ ಆಕ್ಸಿಜನ್ , ವೈದ್ಯಕೀಯ ಸಲಕರಣೆ ಆಮದು ಮಾಡಿಕೊಳ್ಳುತ್ತಿದೆ. ಭಾರತ ಬಯಸಿದರೆ ಎಲ್ಲಾ ನೆರವು ನೀಡಲು ಸಿದ್ದ ಎಂದು ಚೀನಾ ಹೇಳಿದೆ. ಭಾರತದ ಆಕ್ಸಿಜಿನ್ ಆಮದು ಮಾಡಿಕೊಳ್ಳುವ ದೇಶದಲ್ಲಿ ಚೀನಾ ಹೆಸರಿಲ್ಲ. ಆದರೆ ಭಾರತ ಬಯಸಿದರೆ ಕೊರೋನಾ ಸಮಸ್ಯೆಗೆ ನೆರವು ನೀಡಲು ಸಿದ್ಧ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.

ಕೊರೋನಾ ಸಂಕಷ್ಟ; ಬಡವರಿಗೆ 2 ತಿಂಗಳು ಉಚಿತ ಆಹಾರ ಧಾನ್ಯ ಘೋಷಿಸಿದ ಕೇಂದ್ರ ಸರ್ಕಾರ!

ಗಡಿಯಲ್ಲಿ ಭಾರತದ ಸತತ ಮಾತುಕತೆಯಿಂದ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ. ಜೊತೆಗೆ ಉದ್ಧಟತನವನ್ನು ಕಡಿಮೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಭಾರತಕ್ಕೆ ನೆರವು ನೀಡಲು ಚೀನಾ ಸಿದ್ಧ ಎಂದಿದೆ. ಈ ಮೂಲಕ ಭಾರತದ ಜೊತೆಗಿನ ಸಂಬಂಧ ಉತ್ತಮಗೊಳಿಸಲು ಚೀನಾ ಯತ್ನಿಸುತ್ತಿದೆ.

ಭಾರತದಲ್ಲಿ ಒಂದೇ ದಿನ 3 ಲಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ಒಂದು ದಿನ ಕಾಣಿಸಿಕೊಂಡ ಗರಿಷ್ಠ ಪ್ರಕರಣಗಳು ಇದೀಗ ಭಾರತದಲ್ಲಿ ದಾಖಲಾಗಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.