ತಿರುವನಂತಪುರದಿಂದ ಅಬುಧಾಬಿಗೆ ಹೊರಟ ಏರ್ ಅರೇಬಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ವಾಪಸ್ಸಾಗಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ೧೭೧ ಪ್ರಯಾಣಿಕರಿದ್ದ ವಿಮಾನದ ಹಿಂಬದಿ ಚಕ್ರದ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿತ್ತು. ಹೆಚ್ಚುವರಿ ಇಂಧನ ಖಾಲಿ ಮಾಡಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ತಿರುವನಂತಪುರಂ: ತಿರುವನಂತಪುರದಿಂದ ಅಬುಧಾಬಿಗೆ ಹೊರಟಿದ್ದ ಏರ್ ಅರೇಬಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಶುಕ್ರವಾರ ರಾತ್ರಿ 7.54 ಕ್ಕೆ ಹೊರಟ ವಿಮಾನ ತಾಂತ್ರಿಕ ದೋಷದಿಂದಾಗಿ ವಾಪಸ್ ಬಂದಿದೆ. ವಿಮಾನದಲ್ಲಿ 171 ಪ್ರಯಾಣಿಕರಿದ್ದರು. ಹಾರಾಟದ ನಂತರ ಹಿಂಬದಿಯ ಚಕ್ರಗಳ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದೆ ಎಂದು ಪೈಲಟ್ ಗಮನಿಸಿದ್ದಾರೆ. ತಕ್ಷಣವೇ ವಿಮಾನವನ್ನು ವಾಪಸ್ ತರಲು ಅನುಮತಿ ಪಡೆದು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ವಿಮಾನದಲ್ಲಿ ಅಬುಧಾಬಿಗೆ ಹೋಗಲು ಸಾಕಷ್ಟು ಇಂಧನವಿತ್ತು. ಹೆಚ್ಚುವರಿ ಇಂಧನವನ್ನು ಖಾಲಿ ಮಾಡಿ, ಅಗತ್ಯ ಇಂಧನದೊಂದಿಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಪೈಲಟ್ ಗೆ ಸೂಚಿಸಲಾಯ್ತು. ರಾತ್ರಿ 8.30 ರ ಸುಮಾರಿಗೆ ವಿಮಾನ ಲ್ಯಾಂಡ್ ಆಗಿದೆ.
ವಿಮಾನ ನಿಲ್ದಾಣದ ಅಗ್ನಿಶಾಮಕ ದಳ, ವೈದ್ಯಕೀಯ ವ್ಯವಸ್ಥೆ, ಸಿಐಎಸ್ಇಎಫ್‌ನ ಕ್ಯುಆರ್ಟಿ ಕಮಾಂಡೋಗಳು, ವಿಮಾನಕಂಬನಿ ನೌಕರರು ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡಿದ್ದರು. ವಿಮಾನಕಂಪನಿಯ ತಾಂತ್ರಿಕ ತಂಡ ದೋಷವನ್ನು ಸರಿಪಡಿಸುತ್ತಿದೆ. ಮತ್ತೆ ವಿಮಾನ ಯಾವಾಗ ಹಾರಾಡಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿದೆ.


