ಮೋದಿ ಚಹಾ ಮಾರಬೇಕಿರಲಿಲ್ಲ: ಮೋದಿ ಫಂಕ್ಚರ್ ಹೇಳಿಕೆಗೆ ಓವೈಸಿ ಕಿಡಿಕಿಡಿ

Synopsis
ವಕ್ಫ್ ಭೂಮಿ ಸದ್ಬಳಕೆ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸಂಘದ ಆಸ್ತಿ ಸದ್ಬಳಕೆಯಾಗಿದ್ದರೆ ಮೋದಿ ಚಹಾ ಮಾರುತ್ತಿರಲಿಲ್ಲ ಎಂದು ಓವೈಸಿ ಹೇಳಿದ್ದಾರೆ.
ನವದೆಹಲಿ: ವಕ್ಫ್ ಭೂಮಿ ಸದ್ಬಳಕೆ ಮಾಡದ್ದಕ್ಕೇ ಮುಸ್ಲಿಮರು ಪಂಕ್ಚರ್ ಹಾಕುವ ಕೆಲಸ ಮಾಡುವಂತಾಗಿದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕರು ಕಿಡಿ ಕಾರಿದ್ದು, ಸಂಘ ಪರಿವಾರದ ಚಿಂತನೆ ಮತ್ತು ಆಸ್ತಿಯನ್ನು ದೇಶದ ಹಿತಕ್ಕಾಗಿ ಬಳಸಿದ್ದರೆ ಮೋದಿ ಚಹಾ ಮಾರಬೇಕಾಗಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಮೋದಿ ಸೋಮವಾರ , ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಸಿಕೊಂಡಿದ್ದರೆ ಮುಸ್ಲಿಂ ಯುವಕರು ಸೈಕಲ್‌ಗಳ ಪಂಕ್ಚರ್ ಸರಿ ಮಾಡುತ್ತಿರಬೇಕಾಗಿ ಬರುತ್ತಿರಲಿಲ್ಲ ಎಂದಿದ್ದರು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿ ಚಹಾ ಮಾರಬೇಕಿರಲಿಲ್ಲ:
ಮೋದಿ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ವಕ್ಫ್ ಆಸ್ತಿ ಸದ್ಬಳಕೆ ಆಗಿದ್ದರೆ ಮುಸ್ಲಿಂ ಯುವಕರು ಪಂಕ್ಚರ್ ಹಾಕುವ ಕೆಲಸ ಮಾಡುತ್ತಿರಲಿಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ ಸಂಘ ಪರಿವಾರದ ಚಿಂತನೆ ಮತ್ತು ಆಸ್ತಿಯನ್ನು ದೇಶದ ಹಿತಕ್ಕಾಗಿ ಬಳಸಿದ್ದರೆ ಮೋದಿ ಚಹಾ ಮಾರಬೇಕಾಗಿರಲಿಲ್ಲ. ದೇಶದ ಬಡ ಮುಸ್ಲಿಂ ಅಥವಾ ಹಿಂದೂಗಳಿಗೆ ಮೋದಿ ಈ 11 ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪಗಢಿ ಪ್ರತಿಕ್ರಿಯಿಸಿದ್ದು, ನೀವು ದೇಶದ ಯುವಕರನ್ನು ಈ ಹಂತಕ್ಕೆ ತಂದಿದ್ದೀರಿ. ಉದ್ಯೋಗಗಳಿಲ್ಲದಿದ್ದಾಗ ಪಂಕ್ಚರ್ ಕೆಲಸ ಬಿಟ್ಟು ಬೇರೆ ಆಯ್ಕೆಯಿಲ್ಲ ಎಂದಿದ್ದಾರೆ.
ಬಾಡಿಗೆ ಕಟ್ಟಿ ಇಲ್ಲ ಜಾಗ ಖಾಲಿ ಮಾಡಿ: ತಮಿಳುನಾಡಿನ ಒಂದೇ ಗ್ರಾಮದ 150 ಕುಟುಂಬಗಳಿಗೆ ವಕ್ಫ್ ನೋಟಿಸ್
ಕುಡಿದು ಬಂದು ಗಲಾಟೆ : ಮಾಲೀಕರಿಗೆ ಹೇಳಿದ್ದಕ್ಕೆ ಮಹಿಳೆಗೆ ಬೆಂಕಿ ಇಟ್ಟ ಪಾಪಿ
ಕಾಸರಗೋಡು: ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕನೋರ್ವ ಪಕ್ಕದ ಅಂಗಡಿಯವರ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕಾಸರಗೋಡಿನ ಬೆದಡುಕದಲ್ಲಿ ನಡೆದಿದೆ. ಮೃತ ಮಹಿಳೆಯನ್ನು 32 ವರ್ಷದ ರಮಿತಾ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ರಾಮಾಮೃತಮ್ ಪರಾರಿಯಾಗಲು ಯತ್ನಿಸಿದ್ದು, ಆದರೆ ಸ್ಥಳೀಯ ನಿವಾಸಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದ ಅಂಗಡಿಯವರಾಗಿದ್ದಾರೆ. ಮಹಿಳೆ ರಮಿತಾ ದಿನಸಿ ಅಂಗಡಿ ಇಟ್ಟುಕೊಂಡಿದ್ದರೆ, ಆರೋಪಿ ಸಮೀಪದಲ್ಲೇ ಫರ್ನಿಚರ್ ಅಂಗಡಿ ಹಾಕಿಕೊಂಡಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ರಾಮಾಮೃತಮ್ ಹಗಲಿನಲ್ಲಿಯೇ ಕುಡಿದು ಬಂದು ಪಕ್ಕದ ಅಂಗಡಿಯವರಾದ ರಮಿತಾ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ರಮಿತಾ ಈ ವಿಚಾರವನ್ನು ಕಟ್ಟಡದ ಮಾಲೀಕರಿಗೆ ತಿಳಿಸಿದ್ದರು. ಹೀಗಾಗಿ ಕಟ್ಟಡ ಮಾಲೀಕರು ರಾಮಾಮೃತಮ್‌ಗೆ ತಮ್ಮ ಅಂಗಡಿಯನ್ನು ಬೇರೆಡೆ ಸ್ಥಳಾಂತರಿಸಿ ತಮ್ಮ ಕಟ್ಟಡ ಖಾಲಿ ಮಾಡುವಂತೆ ಸೂಚಿಸಿದ್ದರು. ಇದರಿಂದ ಕುಪಿತಗೊಂಡ ರಾಮಾಮೃತಮ್ ಕುಡಿದು ಬಂದು ರಮಿತಾ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಏಪ್ರಿಲ್ 8 ರಂದು ಮಧ್ಯಾಹ್ನ 3.30ರ ವೇಳೆಗೆ ರಮಿತಾ ಅಂಗಡಿಯಲ್ಲಿ ಇದ್ದ ವೇಳೆ ಅಲ್ಲಿಗೆ ಥಿನ್ನರ್ ಹಾಗೂ ಬೆಂಕಿ ಕಡ್ಡಿ ಪೆಟ್ಟಿಗೆಯೊಂದಿಗೆ ಬಂದ ಆರೋಪಿ ಆಕೆ ಏನಾಗುತ್ತಿದೆ ಎಂದು ಊಹಿಸುವ ಮೊದಲೇ ಆಕೆಯ ಮೇಲೆ ಥಿನ್ನರ್ ಸುರಿದು ಬೆಂಕಿ ಕಡ್ಡಿ ಗಿರಿ ಎಸೆದು ಅಲ್ಲಿಂದ ಓಡಿದ್ದಾನೆ.
ಮುರ್ಷಿದಾಬಾದ್ ಹಿಂಸಾಚಾರದಲ್ಲಿ ಬಾಂಗ್ಲಾ ಒಳನುಸುಳುಕೋರರ ಕೈವಾಡ: ಗೃಹ ಇಲಾಖೆ
ಅಲ್ಲೇ ಇದ್ದ ರಮಿತಾ ಅವರ ನೆರೆಮನೆಯವರಾದ ಸಜಿತಾ ಪುರುಷೋತಮ್ ಸೇರಿದಂತೆ ಅಕ್ಕಪಕ್ಕದ ನಿವಾಸಿಗಳು ಕೂಡಲೇ ರಮಿತಾ ಸಹಾಯಕ್ಕೆ ಧಾವಿಸಿ ಬಂದಿದ್ದು, ಬೆಂಕಿ ನಂದಿಸಿ ಸಮೀಪದ ಕಾಂಞಂಗಾಡ್‌ನ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಲ್ಲಿಂದ ಸೀದಾ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದೊದ್ದಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಮಿತಾ ಇಂದು ಸಾವನ್ನಪ್ಪಿದ್ದಾರೆ. ಥಿನ್ನರ್ ಎರಚಿ ಬೆಂಕಿ ಹಚ್ಚಿದ್ದರಿಂದಾಗಿ ರಮಿತಾ ಅವರಿಗೆ ಶೇಕಡಾ 50ರಷ್ಟು ಸುಟ್ಟಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊಲೆ ಆರೋಪಿ ರಾಮಾಮೃತಮ್ ಮೂಲತಃ ತಮಿಳುನಾಡಿನವನಾಗಿದ್ದು, ಘಟನೆಯ ನಂತರ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಕೂಡಲೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.