Asianet Suvarna News Asianet Suvarna News

ಕೊರೋನಾ ಪೇಶಂಟ್ ಕಾಪಾಡಲು ಸುರಕ್ಷತಾ ಕವಚ ತೆಗೆದ ಡಾಕ್ಟರ್

ತನ್ನ ಪ್ರಾಣವನ್ನೇ ಒತ್ತೆ ಇಟ್ಟ ಡಾಕ್ಟರ್/ ಈ ವೈದ್ಯರಿಗೆ ಒಂದು ಅಭಿನಂದನೆ ಹೇಳಲೇಬೇಕು/ ದೆಹಲಿ ಏಮ್ಸ್ ವೈದ್ಯರ ಸಾಹಸ/ ವೈದ್ಯರಿಗೆ 14 ದಿನಗಳ ಕ್ವಾರಂಟೈನ್/

AIIMS Doctor Removes Protective Gear to Save Critical Covid 19 Patient
Author
Bengaluru, First Published May 11, 2020, 9:16 PM IST

ನವದೆಹಲಿ(ಮೇ 11) ಕೊರೋನಾ ವೈರಸ್ ವಿರುದ್ಧ ಹೋರಾಡುತ್ತ ಫ್ರಂಟ್ ಲೈನ್ ಲ್ಲಿರುವ ವೈದ್ಯರ ಬಗ್ಗೆ ಎಷ್ಟೂ ಹೇಳಿದರೂ ಸಾಲದು. ಕೊರೋನಾ ವಾರಿಯರ್ಸ್ ಗೆ ಸುಮ್ಮನೆ ಒಂದು ಮೆಚ್ಚುಗೆ ಸಾಕಾಗಲ್ಲ. ಈಗ ಮತ್ತೊಂದು  ವರದಿ ಬಂದಿದ್ದು ದೆಹಲಿಯ ವೈದ್ಯರು ತಮ್ಮ ಜೀವವನ್ನೇ ಪಣಕ್ಕೆ ಇಟ್ಟು ರೋಗಿಯನ್ನು ಕಾಪಾಡಲು ಸಾಹಸ ಮಾಡಿದ್ದಾರೆ.

ತಮ್ಮ ಸುರಕ್ಷಾ ಕವಚವನ್ನು ಅನಿವಾರ್ಯವಾಗಿ ತೆರೆದಿಟ್ಟ ವೈದ್ಯರಿಗೆ 14 ದಿನಗಳ ಕ್ವಾರಂಟೈನ್ ಹೇಳಲಾಗಿದೆ. ದೆಹಲಿ ಏಮ್ಸ್ ಈ ವೈದ್ಯರಿಗೆ ಒಂದು ಅಭಿನಂದನೆ ಹೇಳಿಬಿಡೋಣ

ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಜಹೀದ್ ಅಬ್ದುಲ್ ಮಜೀದ್ ಕೆಚ್ಚೆದೆ ತೋರಿದ ಡಾಕ್ಟರ್.  ಅಂಬುಲೆನ್ಸ್ ನಲ್ಲಿ ತರುವಾಗಲೇ  ರೋಗಿ ಗಂಭೀರ ಸ್ಥಿತಿಗೆ ತಲುಪಿದ್ದರು. ಮೇ 8 ರಂದು ಬೆಳಗಿನ ಜಾವ 2 ಗಂಟೆ ವೇಳೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಮಜೀದ್ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದರು ಎಂದು ಆಸ್ಪತ್ರೆಯ ಜನರಲ್ ಸಕ್ರೆಟರಿ ಶ್ರೀನಿವಾಸ್ ರಾಜ್ ಕುಮಾರ್ ಹೇಳುತ್ತಾರೆ.

9 ತಿಂಗಳ ಗರ್ಭಿಣಿಯಾಗಿದ್ದರೂ ಕೆಲಸ ಮಾಡುತ್ತಿರುವ ವಾರಿಯರ್  ಜತೆ ಸಿಎಂ ಮಾತುಕತೆ

ಪೇಶೇಂಟ್ ಸರಿಯಾಗಿ ಪರೀಕ್ಷೆ ಮಾಡಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ನನ್ನ ಪಿಪಿಇ ಕಿಟ್ ತೆಗೆದೆ.  ರೋಗಿ ಜೀವ ಕಾಪಾಡಲೇಬೇಕಾದ್ದರಿಂದ ಗ್ಲೌಸ್ ತೆಗೆಯಬೇಕಾದ ಸ್ಥಿತಿಯೂ ಎಂದು ವೈದ್ಯರು ಹೇಳಿದ್ದನ್ನು ರಾಜ್ ಕುಮಾರ್ ಘಟನೆ ಸಂದಿಗ್ಧತೆ ವಿವರಿಸುತ್ತ ಹೇಳುತ್ತಾರೆ.

ಕೊರೋನಾ ವಿರುದ್ಧ ದೇಶವೇ ಹೋರಾಡುತ್ತಿದೆ. ನಾವು ಹೋರಾಟ ಮಾಡಬೇಕಾದದ್ದು ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧ ಅಲ್ಲ ಎಂದು ಪದೇ ಪದೇ ಹೇಳುತ್ತ ಜಾಗೃತಿ ಮೂಡಿಸಲಾಗುತ್ತದೆ.

Follow Us:
Download App:
  • android
  • ios