ಬೆಂಗಳೂರು, (ಮೇ.10):  9 ತಿಂಗಳು ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ಶಿವಮೊಗ್ಗದ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ರೂಪಾ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

 ಶಿವಮೊಗ್ಗದ ಗಾಜನೂರು ಗ್ರಾಮದಿಂದ 60 ಕಿಮೀ ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್‍ನಲ್ಲೇ ಪಯಣಿಸಿ ಜನರ ಆರೋಗ್ಯ ಸೇವೆ ಮಾಡುತ್ತಿದ್ದಾರೆ. ಈಸ ಸುದ್ದಿಯನ್ನು ತಿಳಿದ ಸಿಎಂ, ನರ್ಸ್‌ ರೂಪ ಅವರಿಗೆ ದೂರಾವಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.  ಇದರ ಜತೆಗೆ ಕೂಡಲೇ ರಜೆ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದರು.

ಹ್ಯಾಟ್ಸಾಫ್ ಕೊರೋನಾ ವಾರಿಯರ್..!9 ತಿಂಗ್ಳು ತುಂಬು ಗರ್ಭಿಣಿಯಾಗಿದ್ದರೂ ಆರೋಗ್ಯ ಸೇವೆ..!

9 ತಿಂಗಳು ಗರ್ಭಿಣಿಯಾಗಿದ್ದರೂ ಪ್ರತಿದಿನ ಸುಮಾರು 120 ಕಿಮೀ ಪ್ರಯಾಣ ಮಾಡುವ ಇವರು ಕೊರೋನಾ ವಾರಿಯರ್ಸ್ ಏನು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ನರ್ಸ್ ಅವರ ಈ ಸೇವೆಯನ್ನು ಮೆಚ್ಚಿ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಪ್ರಶಂಸೆ ವ್ಯಕ್ತಪಡಿಸಿರುವುದು ಕೊರೋನಾ ವಾರಿಯರ್ಸ್‌ಗೆ ಮತ್ತಷ್ಟು ಉತ್ಸಹ ತುಂಬಿದಂತಾಗಿದೆ.