Viral Video: ಹೃದಯಾಘಾತದಿಂದ 8 ವರ್ಷದ ಮತ್ತೊಬ್ಬ ಶಾಲಾ ಬಾಲಕಿ ಸಾವು!
ಅಹಮದಾಬಾದ್‌ನ ಖಾಸಗಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ಶಾಲೆಯ ಲಾಬಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಪ್ರಾಥಮಿಕ ವರದಿಗಳ ಪ್ರಕಾರ ಕಾರ್ಡಿಯಾಕ್ ಅರೆಸ್ಟ್ ಸಾವಿಗೆ ಕಾರಣ ಎಂದು ಸೂಚಿಸುತ್ತವೆ.
ಅಹಮದಾಬಾದ್(ಜ.10): ಕೆಲ ದಿನಗಳ ಹಿಂದೆ ಚಾಮರಜನಗರದಲ್ಲಿ 3ನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ಹೃದಯಾಘಾತದಿಂದದರುವಾಗಿ ಮತಪಟ್ಟ ಘಟನೆ ನಡೆದಿತ್ತು. ಇದಾದ ನಾಲ್ಕು ದಿನಗಳ ಬಳಿಕ ಅಹಮದಾಬಾದ್‌ನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಶುಕ್ರವಾರ ಬೆಳಗ್ಗೆ ಅಹಮದಾಬಾದ್‌ನ ಖಾಸಗಿ ಶಾಲೆಯ ಲಾಬಿಯಲ್ಲಿ 3ನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಇಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಗು ಪ್ರಾಣಬಿಡುತ್ತಿರುವ ದೃಶ್ಯ ಅತ್ಯಂತ ದಾರುಣವಾಗಿದೆ.
ಅಹಮದಾಬಾದ್‌ನ ಜೆಬಾರ್ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ರನ್‌ಪರಾ ಶಾಲೆಯ ಲಾಬಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕೆಯ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ನೋವಿನಲ್ಲಿಯೇ ಆಕೆ ಬೆಂಚ್ ಮೇಲೆ ಕುಳಿತುಕೊಂಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬೆಂಚ್ ಮೇಲೆ ಕುಳಿತುಕೊಳ್ಳುವ ಮುನ್ನ ಆಕೆ ತನ್ನ ಎದೆಯ ಮೇಲೆ ಕೈ ಇಟ್ಟುಕೊಳ್ಳುತ್ತಲೇ ಕೂರುವುದನ್ನೂ ಕಾಣಬಹುದಾಗಿದೆ.
ಅದಾದ ಕೆಲ ಕ್ಷಣಕ್ಕೆ ಆಕೆ ಕುಳಿತಿದ್ದ ಬೆಂಚ್‌ನಿಂದ ಕುಸಿದು ಬೀಳುತ್ತಾಳೆ. ಆಕೆಯ ಹೆಗಲಿಗೆ ಇದ್ದ ಬ್ಯಾಗ್ ಹಾಗೇಯೇ ಇರುತ್ತದೆ. ಕೆಲ ಕ್ಷಣದ ಬಳಿಕ ಸಮೀಪದಲ್ಲಿದ್ದ ಕೆಲವು ಶಿಕ್ಷಕರು ಆಕೆಯ ಸಹಾಯಕ್ಕೆ ಬಂದಿದ್ದಾರೆ. ಟೀಚರ್‌ಗಳು ಬಾಲಕಿಗೆ ಸಿಪಿಆರ್ ನೀಡಲು ಪ್ರಯತ್ನಿಸಿ ಬಳಿಕ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ ಮಗು ಸಾವು ಕಂಡಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
Heart attack: 8 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಪೋಷಕರೇ ನಿಮ್ಮ ಮಗುವಿನ ಹೃದಯ ಜೋಪಾನ!
ಶಾಲೆಯ ಪ್ರಾಂಶುಪಾಲರಾಗಿರುವ ಶರ್ಮಿಷ್ಟಾ ಸಿನ್ಹಾ ಹೇಳುವ ಪ್ರಕಾರ, ಮಗುವಿಗೆ ಹಿಂದೆ ಎಂದೂ ಆರೋಗ್ಯದ ಸಮಸ್ಯೆ ಇರುವುದು ಕಂಡು ಬಂದಿರಲಿಲ್ಲ. ಆದರೆ, ಶುಕ್ರವಾರ ಆಕೆಯ ಆರೋಗ್ಯ ಸರಿ ಇಲ್ಲದೇ ಇರುವುದು ಕಂಡು ಬಂದಿದೆ. ಶಾಲೆಯ ಲಾಬಿಯಲ್ಲಿರುವ ಬೆಂಚ್‌ನಲ್ಲಿ ಕುಳಿತುಕೊಂಡಿದ್ದಾಗಲೇ ಆಕೆ ಕುಸಿದುಬಿದ್ದಿದ್ದಾಳೆ. ಬಾಲಕಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ನಂತರ ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು ಎಂದು ಸಿನ್ಹಾ ಹೇಳಿದರು.
Mangaluru: ಲವ್, ಸೆಕ್ಸ್, ದೋಖಾ ಕೇಸ್; ಅಪ್ರಾಪ್ತ ಯುವತಿ ಸಾವು
ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಕಾರ್ಡಿಯಾಕ್ ಅರೆಸ್ಟ್ ಸಾವಿಗೆ ಕಾರಣ ಎಂದು ಸೂಚಿಸುತ್ತವೆ. ಬಾಲಕಿಯ ಪೋಷಕರು ಮುಂಬೈನಲ್ಲಿ ವಾಸಿಸುತ್ತಿದ್ದರು ಮತ್ತು ಅವಳು ಅಹಮದಾಬಾದ್‌ನಲ್ಲಿ ತನ್ನ ಅಜ್ಜಿಯರೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ.