ಅಹಮ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಸಾವಿನ ಸಂಖ್ಯೆ ಇದೀಗ 110ಕ್ಕೆ ಏರಿಕೆಯಾಗಿದೆ. 242 ಪ್ರಯಾಣಿಕರಿದ್ದ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಪತನಗೊಂಡಿದೆ. ಈ ಪೈಕಿ 132 ಮಂದಿಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಹಮ್ಮದಾಬಾದ್(ಜೂ.12) ಅಹಮ್ಮದಾಬಾದ್‌ನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಎ171 ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಪೈಲೆಟ್ಸ್, ಕ್ಯಾಬಿನ್ ಕ್ರೂ ಹಾಗೂ ಪ್ರಯಾಣಿಕರ ಸೇರಿದಂತೆ 242 ಮಂದಿಯನ್ನು ಹೊತ್ತು ಲಂಡನ್‌ಗೆ ಪ್ರಯಾಣ ಬೆಳೆಸಿದ ಏರ್ ಇಂಡಿಯಾ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಆರಂಭದಲ್ಲಿ 30 ಮಂದಿ ಸಾವು ಅನ್ನೋ ಮಾಹಿತಿ ಹೊರಬಿದ್ದಿತ್ತು. ಇದೀಗ ಸಾವಿನ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಈ ಪೈಕಿ 132 ಮಂದಿ ಆಸ್ಪತ್ರೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಪತನಗೊಂಡ ವಿಮಾನದಲ್ಲಿ 169 ಭಾರತೀಯರು
242 ಮಂದಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಜನನಿಬಿಡ ಪ್ರದೇಶದಲ್ಲೇ ಪತನಗೊಂಡಿದೆ. ಇದೀಗ ರಕ್ಷಾ ಕಾರ್ಯಗಳು ಮುಂದುವರಿದಿದೆ. 242 ಮಂದಿ ಪ್ರಯಾಣಿಕರ ಪೈಕಿ 169 ಭಾರತೀಯರಾಗಿದ್ದಾರೆ. ಇನ್ನು ಒಬ್ಬ ಕೆನಡಿಯನ್ ಪ್ರಜೆ, 7 ಪೋರ್ಚುಗೀಸ್ ಹಾಗೂ 53 ಬ್ರಿಟಿಷ್ ಪ್ರಜೆಗಳು ಈ ವಿಮಾನದಲ್ಲಿದ್ದರು.
ಇದೇ ವಿಮಾನದಲ್ಲಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ
ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಪ್ರಯಾಣಿಸಿದ್ದರು. ಬಿಸಿನೆಸ್ ಕ್ಲಾಸ್‌ನ 2ಡಿ ಆಸನದಲ್ಲಿ ಕುಳಿತು ವಿಜಯ್ ರೂಪಾನಿ ಪ್ರಯಾಣಿಸಿದ್ದರು.
ಟೇಕ್ ಆಫ್ ಆದ 18 ನಿಮಿಷಕ್ಕೆ ವಿಮಾನ ಪತನ
ಅಹಮ್ಮದಾಬಾದ್ ಅಂತಾರಾಷ್ಟ್ರೀಯ ವಿಮಾ ನಿಲ್ದಾಣದಿಂದ ಟೇಕ್ ಆಫ್ ಆದ 18 ನಿಮಿಷಕ್ಕೆ ವಿಮಾನ ಪತನಗೊಂಡಿದೆ. ಪೈಲೆಟ್ ಪತನಕ್ಕೂ ಮುನ್ನ ವಿಮಾನದಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷದ ಬಗ್ಗೆ ಅಲರ್ಟ್ ನೀಡಿದ್ದರು. ಬಳಿಕ ವಿಮಾನ ಸಂಪರ್ಕ ಕಡಿತಗೊಂಡಿದೆ. 18 ನಿಮಿಷದಲ್ಲಿ ವಿಮಾನ ಪತನಗೊಂಡಿದೆ.
ಅಹಮ್ಮದಾಬಾದ್‌ನತ್ತ ಅಮಿತ್ ಶಾ
ವಿಮಾನ ಪತನ ಮಾಹಿತಿ ಹೊರಬೀಳುತ್ತಿದ್ದಂತೆ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ನಾಗರೀಕ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು ಅಹಮ್ಮದಾಬಾದ್‌ನತ್ತ ಹೊರಟಿದ್ದಾರೆ. ಪ್ರಧಾನಿ ಮೋದಿಗೆ ಮಾಹಿತಿ ನೀಡಿರುವ ಸಚಿವ ನೇರವಾಗಿ ಅಹಮ್ಮದಾಬಾದ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ ಮೋದಿ, ಅಹಮ್ಮದಾಬಾದ್‌ಗೆ ತೆರಳುವಂತೆ ಸೂಚಿಸಿದ್ದಾರೆ. ಇದೀಗ ಅಮಿತ್ ಶಾ ಕೂಡ ಅಹಮ್ಮದಾಬಾದ್‌ಗೆ ತೆರಳಿದ್ದಾರೆ.
