Asianet Suvarna News Asianet Suvarna News

ದೆಹಲಿ ಮಳೆಯಿಂದ ಖುಲಾಯಿಸಿದ ಕೇಜ್ರಿವಾಲ್ ಲಕ್, ಮೋದಿ ಡಿಗ್ರಿ ಪ್ರಕರಣದಲ್ಲಿ ಕೋರ್ಟ್ ಹಾಜರಾತಿಗೆ ವಿನಾಯಿತಿ!

ಮಳೆ, ಯಮುನಾ ನದಿ ಪ್ರವಾಹ, ಬಹುತೇಕ ಪ್ರದೇಶ ಮಳುಗಡೆಯಾಗಿ ದೆಹಲಿ ತೀವ್ರ ಸಂಕಷ್ಟದಲ್ಲಿದೆ. ಆದರೆ ದೆಹಲಿ ಮಳೆ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ನೆರವಾಗಿದೆ. ಮಳೆ ಕಾರಣದಿಂದ ಮೋದಿ ಡಿಗ್ರಿ ಅಣಕಿಸಿದ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ವಿನಾಯಿತಿ ಸಿಕ್ಕಿದೆ. 

Ahmedabad court allows exemption from appearance to Arvind Kejriwal Sanjay singh on PM Modi Degree case ckm
Author
First Published Jul 13, 2023, 3:58 PM IST | Last Updated Jul 13, 2023, 3:58 PM IST

ನವದೆಹಲಿ(ಜು.12) ದೆಹಳಿ ಹಾಗೂ ಸುತ್ತ ಮುತ್ತ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದೆ. ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ದೆಹಲಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಒಂದೆಡೆ ದೆಹಲಿ ನಿರ್ವಹಣೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ತಲೆನೋವಾಗಿದೆ. ಇತ್ತ ಇದೇ ದೆಹಲಿ ಮಳೆ ಕೋರ್ಟ್ ಪ್ರಕರಣದಲ್ಲಿ ನೆರವಾಗಿದೆ. ಪ್ರಧಾನಿ ಮೋದಿ ಪದವಿಯನ್ನು ಅಣಕಿಸಿದ್ದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್‌ಗೆ ಕೋರ್ಟ್ ವಿನಾಯಿತಿ ನೀಡಿದೆ. ಇಂದು(ಜು.13) ವಿಚಾರಣೆ ನಡೆಸಿದ ಅಹಮ್ಮದಾಬಾದ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಹಾಜರಾತಿ ದಿನಾಂಕವನ್ನು ಜುಲೈ 26ಕ್ಕೆ ಮುಂದೂಡಿದೆ. 

ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ತುರ್ತು ಸಭೆ ಹಾಗೂ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ತೊಡಗಿದ್ದಾರೆ. ದೆಹಲಿಯ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳು ಜಲಾವೃತಗೊಂಡಿದೆ. ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ದೆಹಲಿಯಲ್ಲಿ ತುರ್ತು ಅಗತ್ಯದ ಕಾರಣದ ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್‌ಗೆ ಕೋರ್ಟ್ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ವಕೀಲರು ವಾದಿಸಿದ್ದಾರೆ. ದೆಹಲಿ ಪರಿಸ್ಥಿತಿ ಕಾರಣದಿಂದ ಕೋರ್ಟ್, ದಿನಾಂಕ ಮುಂದೂಡಿತು. ಜುಲೈ 26ಕ್ಕೆ ಹಾಜರಾಗಲು ಸೂಚನೆ ನೀಡಿದೆ.

ಕಣ್ಮರೆಯಾಗುತ್ತಾ ಭಾರತದ ಪ್ರಮುಖ ನಗರ? ಕೇಜ್ರಿವಾಲ್ ಮನೆ ಆವರಣಕ್ಕೆ ನುಗ್ಗಿದ ಯಮುನಾ ನೀರು!

ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ನೀಡಿದ ಹೇಳಿಕೆ ಇದೀಗ ಸಂಕಷ್ಟಕ್ಕೆ ಹೆಚ್ಚಿಸಿದೆ. ಪ್ರಧಾನಿ ಮೋದಿ ತಮ್ಮ ನಕಲಿ ಡಿಗ್ರಿ ಸರ್ಟಿಫಿಕೇಟನ್ನು ಅಸಲಿಯಿಂದ ಸಾಬೀತು ಮಾಡುತ್ತಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದರು. ಮೋದಿ ಪದವಿ ಮಾಡಿದ್ದರೆ ಸರ್ಟಿಫಿಕೇಟ್ ಇರುತ್ತಿತ್ತು, ಮೋದಿ ತೋರಿಸುತ್ತಿರುವ ನಕಲಿ ಸರ್ಟಿಫಿಕೇಟನ್ನು ಗುಜರಾತ್ ವಿಶ್ವವಿದ್ಯಾಲಯ ಅಸಲಿಯೆಂದು ಸಾಬೀತು ಮಾಡುತ್ತಿದೆ ಎಂದಿದ್ದರು. ಇತ್ತ ಕೇಜ್ರಿವಾಲ್ ಪ್ರಧಾನಿ ಕಾರ್ಯಾಲಯ ಹಾಗೂ ಗುಜರಾತ್ ವಿಶ್ವವಿದ್ಯಾಲಯ ವಿರುದ್ದವೂ ಆರೋಪ ಮಾಡಿದ್ದರು. ಮೋದಿ ಡಿಗ್ರಿ ಮಾಹಿತಿಯನ್ನು ನೀಡುತ್ತಿಲ್ಲ. ಹೀಗಾಗಿ ಮೋದಿ ಡಿಗ್ರಿ ನಕಲಿ ಎಂದು ಲೇವಡಿ ಮಾಡಿದ್ದರು. ಟ್ವೀಟರ್ ಮೂಲಕವೂ ಈ ಕುರಿತು ಆಮ್ ಆದ್ಮಿ ಪಾರ್ಟಿ ಭಾರಿ ಪ್ರಚಾರ ಮಾಡಿತ್ತು.

ಇದರ ಬೆನ್ನಲ್ಲೇ ಗುಜರಾತ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ಅಹಮ್ಮದಾಬಾದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎಪ್ರಿಲ್ 15ರೊಳಗೆ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿತ್ತು. ಬಳಿಕ ದಿನಾಂಕವನ್ನು ಮೇ.23ಕ್ಕೆ ಮುಂದೂಡಿತ್ತು. ಬಳಿ ಜುಲೈ 13ರೊಳಗೆ ಹಾಜರಾಗುವಂತೆ ಸೂಚಿಸಿತ್ತು. ಇಂದು ಈ ಕುರಿತು ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ವಕೀಲರು ಕೋರ್ಟ್‌ಗೆ ಹಾಜರಾಗಿ ವಿನಾಯಿತಿ ಕೋರಿದ್ದರು. ಇದನ್ನು ಕೋರ್ಟ್ ಮಾನ್ಯ ಮಾಡಿದೆ. 

ನಮ್ಮ ಕಚೇರಿ ಮೇಲೆ ಕೇಂದ್ರದ ಬೇಹುಗಾರಿಕೆ: ಆಪ್‌ ಗಂಭೀರ ಆರೋಪ

ಇತ್ತೀಚೆಗೆ ಮೋದಿ ವಿದ್ಯಾಭ್ಯಾಸದ ಮಾಹಿತಿ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿತ್ತು. ಇಷ್ಟೇ ಅಲ್ಲ ವಿದ್ಯಾಭ್ಯಾಸ ಮಾಹಿತಿ ಬಹಿರಂಗ ಮಾಡುವಂತೆ ಮಾಹಿತಿ ಹಕ್ಕು ಅಡಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು.

Latest Videos
Follow Us:
Download App:
  • android
  • ios