ಲೋಕಸಭೆ ಚುನಾವಣೆ ಟೈಮ್‌ನಲ್ಲಿ ಯಾವುದು ಮಿಸ್‌ ಆದ್ರೂ, ಮಥುರಾದ ಬಿಜೆಪಿ ಎಂಪಿ ನಟಿ ಹೇಮಾ ಮಾಲಿನಿ ಅವರು ಗೋಧಿ ಗದ್ದೆಯಲ್ಲಿ ನಿಂತು ಕಟಾವು ಮಾಡುವ ಪೋಸ್‌ ಮಾತ್ರ ಮಿಸ್‌ ಆಗೋದೇ ಇಲ್ಲ. ಈ ಬಾರಿಯೂ ಕೂಡ ಅವರು ಗೋಧಿ ಗದ್ದೆಯ ಪೋಸ್‌ ನೀಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗಿದೆ.


ನವದೆಹಲಿ (ಏ.12): ಲೋಕಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಹಾಗೂ ಅಭ್ಯರ್ಥಿ ನಟಿ ಹೇಮಾ ಮಾಲಿನಿ ಸೋಶಿಯಲ್‌ ಮೀಡಿಯಾದಲ್ಲಿ ಟೀಕೆಗೆ ತುತ್ತಾಗಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ ಮಥುರಾದಲ್ಲಿ ಗೋಧಿ ಗದ್ದೆಗೆ ಇಳಿದಿದ್ದ ಹೇಮಾ ಮಾಲಿನಿ ತಮ್ಮ ಎಂದಿನ ಪೋಸ್‌ಗಳನ್ನು ನೀಡಿದ್ದರು. ಈ ಚಿತ್ರಗಳನ್ನು ಅವರು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳನ್ನೂ ಹಂಚಿಕೊಂಡಿದ್ದರು. 2019ರ ಚುನಾವಣೆಯ ಸಮಯದಲ್ಲೂ ಕೂಡ ಹೇಮಾ ಮಾಲಿನಿ ಇದೇ ರೀತಿಯ ಪ್ರಚಾರ ಮಾಡಿದ್ದರು. ಆ ವೇಳೆಯಲ್ಲೂ ಗೋಧಿ ಗದ್ದೆಗೆ ಇಳಿದು ಕಟಾವು ಮಾಡಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದರು. ಈಗ ಇದೇ ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೋಲ್‌ಗೆ ಕಾರಣವಾಗಿದೆ. 2019ರಲ್ಲಿ ನೀವೇ ಬಂದು ಕಟಾವು ಮಾಡಿ ಹೋಗಿದ್ದೀರಿ. ಈಗ ಮತ್ತೆ ಕಟಾವಿಗೆ ಬಂದಿದ್ದೀರಿ. ಈ ದೇಶದಲ್ಲಿ ಐದು ವರ್ಷಕ್ಕೆ ಕಟಾವಿಗೆ ಬರೋ ಬೆಳೆ ಯಾವ್ದು ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಂಡಿದ್ದ ಹೇಮಾ ಮಾಲಿನಿ, 'ಈ 10 ವರ್ಷಗಳಿಂದ ನಾನು ನಿಯಮಿತವಾಗಿ ಭೇಟಿಯಾಗುತ್ತಿರುವ ರೈತರೊಂದಿಗೆ ಸಂವಾದ ನಡೆಸಲು ಇಂದು ನಾನು ಜಮೀನಿಗೆ ಹೋಗಿದ್ದೆ. ನಾನು ಅವರೊಂದಿಗೆ ಇರುವುದನ್ನು ನೋಡಿ ರೈತು ಖುಷಿಪಟ್ಟಿದ್ದಾರೆ. ಕೊನೆಗೆ ನಾನು ಅವರೊಂದಿಗೆ ಚಿತ್ರಕ್ಕೆ ಫೋಸ್‌ ನೀಡಬೇಕು ಎಂದೂ ಒತ್ತಾಯಿಸಿದರು' ಎಂದು ಬರೆದುಕೊಂಡಿದ್ದಾರೆ. ಆದರೆ, ಹೇಮಾ ಮಾಲಿನಿ ಅವರ ಈ ಪೋಸ್ಟ್‌ ಸಾಕಷ್ಟು ಮೀಮ್ಸ್‌ಗಳು ಹಾಗೂ ಜೋಕ್‌ಗೆ ಕಾರಣವಾಗಿದೆ. ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ಯೂಸರ್‌ ಒಬ್ಬರು, ಬಹುಶಃ ನಿಮಗೆ ಶೋಲೆ ಚಿತ್ರದ ರಾಮಗಢ ನೆನಪಾಗಿರಬಹುದು ಎಂದು ಬರೆದಿದ್ದಾರೆ.

'ಕಾಂಜೀವರಂ ರೇಷ್ಮೆ ಸೀರೆ, ಏಪ್ರಿಲ್‌ ಮಧ್ಯದಲ್ಲಿ ಓಪನ್‌ ಹೇರ್‌? ನಿಮ್ಮ ಪಿಆರ್‌ ಏಜೆನ್ಸಿಯನ್ನು ಯಾಕೆ ನೀವು ಒದ್ದೋಡಿಸಬಾರದು' ಎಂದು ಹೇಮಾ ಮಾಲಿನಿಗೆ ಸಲಹೆ ನೀಡಿದ್ದಾರೆ. 'ಇದೆಂತಾ ಟೈಮ್‌ ಪಾಸ್‌ ನಿಮ್ಮದು. ಚಾಪರ್ ಇಲ್ಲದೆ ನೀವು ಎಷ್ಟು ಬಾರಿ ಅಲ್ಲಿಗೆ ಹೋಗಿದ್ದೀರಿ? ಸ್ವಲ್ಪ ಮರ್ಯಾದೆ ಇರಲಿದೆ. ನೀವು ಚುನಾವಣೆಗೆ ಸ್ಪರ್ಧೆ ಮಾಡಲು ಕೂಡ ಅರ್ಹರಲ್ಲ' ಎಂದು ಟೀಕಿಸಿದ್ದಾರೆ.

ಹೇಮಾ ಜೀ ಅವರು ಚುನಾವಣೆಯ ಪಿಕ್‌ನಿಕ್‌ನಲ್ಲಿದ್ದಾರೆ ಅನ್ನೋದು ಗೊತ್ತಾಗ್ತಿದೆ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬ ವ್ಯಕ್ತಿ, ಮೇಡಮ್‌ ಮೊದಲಿಗೆ ಒಂದು ಉತ್ತರ ನೀಡಿ. ನಿಮ್ಮ ಕೈಯಲ್ಲಿರುವುದು ಪುದೀನಾ ಕಟ್ಟೋ ಅಥವಾ ಕೊತ್ತಂಬರಿಯ ಕಟ್ಟೋ? ಎಂದು ಪ್ರಶ್ನಿಸಿದ್ದಾರೆ. ಗೋಧಿ ಗದ್ದೆಯಲ್ಲಿಕುಡಗೋಲು ಹಿಡಿದುಕೊಂಡು ಹೊಲದಲ್ಲಿ ಛಾಯಾಚಿತ್ರ ತೆಗೆದಿರುವುದು ಇದು ಮೊದಲಲ್ಲ. ಈ ಹಿಂದೆ, 2019 ರಲ್ಲಿ, ಇದೇ ರೀತಿಯ ಚಿತ್ರಗಳನ್ನು ಹೇಮಾ ಮಾಲಿನಿ ತೆಗೆಸಿಕೊಂಡಿದ್ದರು. ಇದನ್ನು ವಿಪಕ್ಷಗಳು ಎಲೆಕ್ಷನ್‌ ಡ್ರಾಮಾ ಎಂದು ಕರೆದಿದ್ದವು.

'ನೆಕ್ಕೋಕೆ ಹೇಮಾ ಮಾಲಿನಿಯನ್ನ ಎಂಪಿ ಮಾಡಿದ್ದಾರೆ..' ಎಂದ ಸುರ್ಜೇವಾಲಾ, 'ಸೆಕ್ಸಿಸ್ಟ್‌' ಹೇಳಿಕೆಗೆ ಬಿಜೆಪಿ ಟೀಕೆ!

ಇನ್ನೂ ಕೆಲವರು 2019ರ ಚುನಾವಣಾ ಪ್ರಚಾರದ ಹೇಮಾ ಮಾಲಿನಿ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದು 2019ರ ಚುನಾವಣೆಗೂ ಮುನ್ನದ ಫೋಟೋ. ಎಷ್ಟೇ ಆಗಲಿ, ನಮ್ಮವರು ನಮ್ಮವರೇ ಅಲ್ಲವೇ. ಹೇಮಾ ಮಾಲಿನಿ ಅವರ ಈ ಚಿತ್ರ ನನ್ನನ್ನು ಭಾವುಕರನ್ನಾಗಿ ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಮಥುರಾ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಹೇಮಾ ಮಾಲಿನಿ ಕಣಕ್ಕಿಳಿದಿದ್ದಾರೆ.

ಡ್ರೀಮ್ ಗರ್ಲ್ ಜತೆ ರೊಮಾನ್ಸ್ ಮಾಡಲು ಹಿಂದೇಟು ಹಾಕಿದ ಕನ್ನಡದ ಸ್ಟಾರ್ ನಟನಿಗೆ ಧಮೇಂದ್ರ ಮಾಡಿದ್ದೇನು?

ಸಂಸತ್ತಿಗೆ ಅತಿ ಹೆಚ್ಚು ಸಂಸದರನ್ನು (80) ನೀಡುವ ಉತ್ತರ ಪ್ರದೇಶವು ಎಲ್ಲಾ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.ಒಂದು ಮತ್ತು ಎರಡು ಹಂತಗಳನ್ನು ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ನಿಗದಿಪಡಿಸಲಾಗಿದೆ, ನಂತರ ಮೂರು ಮತ್ತು ನಾಲ್ಕು ಹಂತಗಳನ್ನು ಮೇ 7 ಮತ್ತು ಮೇ 13 ರಂದು ನಿಗದಿಪಡಿಸಲಾಗಿದೆ. ನಂತರ ರಾಜ್ಯವು ಮೇ 20, ಮೇ 23 ಮತ್ತು ಜೂನ್ 1 ರಂದು ಐದು, ಆರು ಮತ್ತು ಏಳನೇ ಹಂತದ ಚುನಾವಣೆ ನಡೆಯಲಿದೆ.

Scroll to load tweet…