'ನೆಕ್ಕೋಕೆ ಹೇಮಾ ಮಾಲಿನಿಯನ್ನ ಎಂಪಿ ಮಾಡಿದ್ದಾರೆ..' ಎಂದ ಸುರ್ಜೇವಾಲಾ, 'ಸೆಕ್ಸಿಸ್ಟ್' ಹೇಳಿಕೆಗೆ ಬಿಜೆಪಿ ಟೀಕೆ!
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಕಂಗನಾ ರಣಾವತ್ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ ಬಳಿಕ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ವಿವಾದಿತ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ (ಏ.4): ಕಂಗನಾ ರಣಾವತ್ ರೇಟ್ ಎಷ್ಟು ಎಂದು ಪೋಸ್ಟ್ ಮಾಡುವ ಮೂಲಕ ವಿವಾದಕ್ಕೆ ಕಾರಣಕ್ಕಾಗಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆಗೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರಿದ ಬಳಿಕ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಕೂಡ ಇಂಥದ್ದೇ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಮಥುರಾದ ಬಿಜೆಪಿ ಸಂಸದೆ ಹಾಗೂ ಹಿರಿಯ ನಟಿ ಹೇಮಾ ಮಾಲಿನಿ ಕುರಿತಾಗಿ ಕೆಟ್ಟ ಹಾಗೂ ಅಶ್ಲೀಲ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ರಣದೀಪ್ ಸುರ್ಜೆವಾಲಾ ಅವರ ಸ್ತ್ರೀ ದ್ವೇಷಿ ಹೇಳಿಕೆಯ ವಿರುದ್ಧ ಬಿಜೆಪಿ ಕಿಡಿಕಾರಿದೆ. ಬಿಜೆಪಿ ಐಟಿ ಸೆಲ್‌ನ `ಮಾಜಿ ಮುಖ್ಯಸ್ಥೆ ಅಮಿತ್ ಮಾಳವಿಯಾ ಈ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದರು. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಮಾತನಾಡಿದ ವಿಡಿಯೋ ಇದಾಗಿದ್ದು, ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರನ್ನು ಅವರ ಸೌಂದರ್ಯದ ಕಾರಣಕ್ಕಾಗಿಯೇ ಸಂಸದೆಯನ್ನಾಗಿ ಆಯ್ಕೆ ಮಾಡಲಾಗಿದೆ. ಲೋಕಸಭೆಯನ್ನೂ ಸಂಸದರು ಆಕೆಯನ್ನೇ ದುರುಗುಟ್ಟಿಕೊಂಡು ನೋಡುತ್ತಿರುತ್ತಾರೆ ಎಂದು ಹೇಳಿದ್ದರು.
'ನಾವು ಶಾಸಕರು/ಸಂಸದರನ್ನು ಯಾಕೆ ಆಯ್ಕೆ ಮಾಡುತ್ತೇವೆ? ಅವರು ನಮ್ಮ ದನಿಯನ್ನು ಅಲ್ಲಿ ಕೇಳಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ನಮ್ಮ ಮನವಿಗಳು ಅಲ್ಲಿ ಸಲ್ಲಿಕೆಯಾಗಬೇಕು. ಇವರು ಹೇಮಾ ಮಾಲಿನಿ ರೀತಿಯಲ್ಲ. ಹೇಮಾ ಮಾಲಿನಿ ಅವರನ್ನು ನೆಕ್ಕೋಕೆ ಸಂಸದರನ್ನಾಗಿ ಮಾಡಿದ್ದಾರೆ' ಎಂದು ಸುರ್ಜೆವಾಲಾ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಜೆಪಿಯ ಅಮಿತ್ ಮಾಳವಿಯಾ ಅವರು ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಸುರ್ಜೇವಾಲಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಮಹಿಳೆಯರನ್ನು ನೆಕ್ಕುವ ಬಗ್ಗೆ ಯಾರು ಯೋಚನೆ ಮಾಡ್ತಾರೆ. ಮಹಿಳೆಯರ ಬಗ್ಗೆ ಮಾಡಿರುವ ಅತ್ಯಂತ ಅಸಹ್ಯಕರ ವಿವರಣೆ ಇದಾಗಿದೆ. ಇತ್ತೀಚೆಗಷ್ಟೇ ಸುರ್ಜೇವಾಲಾ ಪಕ್ಷದ ಸದಸ್ಯರೊಬ್ಬರು ಬಿಜೆಪಿಯ ಮಹಿಳಾ ನಾಯಕಿಯ ರೇಟ್ ಎಷ್ಟು ಎಂದು ಕೇಳಿದ್ದರು. ಈಗ ಈ ಹೇಳಿಕೆ. ಇದು ರಾಹುಲ್ ಗಾಂಧಿಯವರ ಕಾಂಗ್ರೆಸ್. ಇದು ಸ್ತ್ರೀದ್ವೇಷದ ಹೇಳಿಕೆ ಮಾತ್ರವಲ್ಲ, ಮಹಿಳೆಯರನ್ನು ಅಸಹ್ಯಕರವಾಗಿ ತೋರಿಸುವ ಯೋಚನೆ' ಎಂದು ಹೇಳಿದ್ದಾರೆ.
ಮಥುರಾದ ಬಿಜೆಪಿ ಸಂಸದೆಯಾಗಿರುವ ನಟಿ ಹೇಮಾ ಮಾಲಿನಿ ಈ ಬಾರಿಯೂ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ಗುರುವಾರ ಮಥುರಾದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಸುರ್ಜೆವಾಲಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 'ಇದು ಅವರ ಕೆಲಸ. ಇದು ಅವರ ಅಭಿಪ್ರಾಯ. ಅವರು ಅದರ ಬಗ್ಗೆ ಚೆನ್ನಾಗಿ ಮಾತನಾಡುವುದಿಲ್ಲ, ನಾವು ಕೌಂಟರ್ ಅಟ್ಯಾಕ್ ಮಾಡುತ್ತೇವೆ. ಮಥುರಾದ ಜನರು ನನ್ನೊಂದಿಗಿದ್ದಾರೆ ಮತ್ತು ಅವರೆಲ್ಲರೂ ತುಂಬಾ ಸಂತೋಷವಾಗಿದ್ದಾರೆ. ನನಗೆ ಪ್ರಧಾನಿ ಮೋದಿಯವರ ಆಶೀರ್ವಾದವಿದೆ" ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಣದೀಪ್ ಸುರ್ಜೆವಾಲಾ, ಬಿಜೆಪಿಯ ಐಟಿ ಸೆಲ್ ಮೂಲ ಕ್ಲಿಪ್‌ಅನ್ನು ವಿರೂಪಗೊಳಿಸಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಆಯ್ದ ಬಿಟ್‌ಗಳನ್ನು ಅಪ್‌ಲೋಡ್ ಮಾಡಿದೆ ಎಂದು ತಿಳಿಸಿದ್ದಾರೆ. ಮೋದಿ ಸರ್ಕಾರ ಜನ ವಿರೋಧಿ ನೀತಿಗಳು ಹಾಗೂ ದೇಶದ ಸಂವಿಧಾನವನ್ನು ಕೊನೆ ಮಾಡುವ ಗುರಿಯ ಕುರಿತಾದ ಚರ್ಚೆಯಿಂದ ಜನರನ್ನು ವಿಮುಖ ಮಾಡಲು ಈ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
'ಇದರ ಪೂರ್ಣ ಕ್ಲಿಪ್ ನೋಡಿ. ನಾವು ಹೇಮಾ ಮಾಲಿನಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ. ಅವರು ಧರ್ಮೇಂದ್ರ ಅವರನ್ನು ವಿವಾಹವಾಗಿದ್ದಾರೆ. ಹಾಗಾಗಿ ಅವರು ನಮ್ಮೂರ ಸೊಸೆ ಎಂದು ಸುರ್ಜೆವಾಲಾ ಬರೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಮಹಿಳಾ ನಾಯಕಿಯರ ಬಗ್ಗೆ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ‘ಬಿಜೆಪಿ ಪ್ಯಾದೆಗಳು’ ಏಕೆ ಪ್ರಶ್ನಿಸಲಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್ ನಾಯಕ!
“ಸಾರ್ವಜನಿಕ ಜೀವನದಲ್ಲಿ ಎಲ್ಲರೂ (ಸಾರ್ವಜನಿಕ ಪ್ರತಿನಿಧಿಗಳು) ಜನರಿಗೆ ಜವಾಬ್ದಾರರಾಗಿರಬೇಕು ಎಂದು ನಾನು ಹೇಳಿದ್ದೇನೆ ... ಅದು (ಹರಿಯಾಣ ಸಿಎಂ) ನಯಾಬ್ ಸಿಂಗ್ ಸೈನಿ ಅಥವಾ (ಮಾಜಿ ಸಿಎಂ) ಮನೋಹರ್ ಲಾಲ್ ಖಟ್ಟರ್ ಅಥವಾ ನಾನೇ ಆಗಿರಬಹುದು. ನಾನು ಹೇಮಾ ಮಾಲಿನಿ ಜೀ ಅವರನ್ನು ಅವಮಾನಿಸುವ ಉದ್ದೇಶವನ್ನು ಹೊಂದಿರಲಿಲ್ಲ, ಅಥವಾ ಯಾರನ್ನೂ ಅಪರಾಧ ಮಾಡಲಿಲ್ಲ. ಬಿಜೆಪಿಯೇ ಮಹಿಳಾ ವಿರೋಧಿಯಾಗಿದ್ದು, ಸುಳ್ಳನ್ನು ಅನುಕೂಲಕರವಾಗಿ ಹರಡುತ್ತದೆ ಎಂದು ಕಾಂಗ್ರೆಸ್ ನಾಯಕ ಪೋಸ್ಟ್ ಮಾಡಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಹಣ ಹಾಕಿರುವ ರಾಹುಲ್, ಐದು ವರ್ಷದಲ್ಲಿ ಆಸ್ತಿ 5 ಕೋಟಿ ಏರಿಕೆ!