ಬೊಚ್ಚು ಬಾಯಿ ತುಂಬಾ ನಗುವಿನೊಂದಿಗೆ 2.50 ರೂ.ಗೆ ಸಮೋಸ ನೀಡುವ 80ರ ಹರೆಯದ ಅಜ್ಜಿ

ಇಲ್ಲೊಬ್ಬರು ಅಜ್ಜಿ ಇಳಿವಯಸ್ಸಿನಲ್ಲೂ ಸ್ವಾಭಿಮಾನದ ಜೀವನ ನಡೆಸುತ್ತಾರೆ. 80ರ ಹಣ್ಣು ಹಣ್ಣು ಮುದುಕಿಯಾದರೂ ಇವರ ಜೀವನೋತ್ಸಾಹವೇನು ಕಡಿಮೆ ಆಗಿಲ್ಲ. ಎರಡೂವರೆ ರೂಪಾಯಿಗೆ ಸಮೋಸ ಮಾಡಿ ಮಾರುವ ಅವರು ಅದರಿಂದಲೇ ತಮ್ಮ ಬದುಕು ಮುನ್ನಡೆಸುತ್ತಿದ್ದಾರೆ. 

age is just a number, west bengal grand ma serves Samosa just for Rs 2.5 with great smile akb

ಬಹುತೇಕರು ಮಧ್ಯವಯಸ್ಸಿನಲ್ಲೇ ಬದುಕಿನ ಜೀವನೋತ್ಸಾಹವನ್ನು ಕಳೆದುಕೊಂಡು ನಿರಾಸೆಗೆ ಜಾರುತ್ತಾರೆ. ತಮಗೆ ವಯಸ್ಸಾಯ್ತು ಮುಂದೆ ಹೇಗೋ ಎಂದು ಚಿಂತೆಯಿಂದಲೇ ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬರು ಅಜ್ಜಿ ಇಳಿವಯಸ್ಸಿನಲ್ಲೂ ಸ್ವಾಭಿಮಾನದ ಜೀವನ ನಡೆಸುತ್ತಾರೆ. 80ರ ಹಣ್ಣು ಹಣ್ಣು ಮುದುಕಿಯಾದರೂ ಇವರ ಜೀವನೋತ್ಸಾಹವೇನು ಕಡಿಮೆ ಆಗಿಲ್ಲ. ಎರಡೂವರೆ ರೂಪಾಯಿಗೆ ಸಮೋಸ ಮಾಡಿ ಮಾರುವ ಅವರು ಅದರಿಂದಲೇ ತಮ್ಮ ಬದುಕು ಮುನ್ನಡೆಸುತ್ತಿದ್ದಾರೆ. 

ಅಂದಹಾಗೆ ಈ ಬೊಚ್ಚು ಬಾಯಿಯ ಸ್ವಾಭಿಮಾನಿ ಅಜ್ಜಿ ಕಾಣ ಸಿಗುವುದು ಪಶ್ಚಿಮ ಬಂಗಾಳದ (West Bengal) ತೂಫಾನ್‌ಗಂಜ್‌ನಲ್ಲಿ. ಹೆಸರು ಸುರಬಾಲಾ, ಇವರು ಅಲ್ಲಿನ ಜನಪ್ರಿಯ ತಿನಿಸಾದ ಸಿಂಗಾರ ಸಮೋಸದ ಜೊತೆ ಅವರು ಹಲವು ಬಗೆಯ ತಿನಿಸುಗಳನ್ನು ಕೈಗೆಟುಕುವ ದರದಲ್ಲಿ ಜನರಿಗೆ ಉಣಬಡಿಸುತ್ತಾರೆ. ಅವರು ನೀಡುವ ಈ ಸಮೋಸಾದ ಬೆಲೆ ಕೇವಲ ಎರಡೂವರೆ ರೂಪಾಯಿಗಳು. ಇವರು ಮಾಡುವ ಸಮೋಸಾಗಳು ಬಹಳ ರುಚ್ಚಿಕಟ್ಟಾಗಿದ್ದು, ತಯಾರಾದಷ್ಟೇ ಬೇಗ ಖಾಲಿಯೂ ಆಗುತ್ತದೆ. ಸುಮಾರು 35 ವರ್ಷಗಳಿಂದ ಅಜ್ಜಿ ಸುರಬಾಲ(Surabhala) ಈ ತಿನಿಸಿನ ಅಂಗಡಿಯನ್ನು ನಡೆಸುತ್ತಿದ್ದಾರೆ. 

ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ

ಇಳಿವಯಸ್ಸಿನಲ್ಲೂ ಕಷ್ಟಪಟ್ಟು ದುಡಿಯುವ ಈ ಸ್ವಾಭಿಮಾನಿ ಅಜ್ಜಿಯನ್ನು ಮಾಧ್ಯಮಗಳು ಮಾತನಾಡಿಸಿದಾಗ ಅಜ್ಜಿ ಪ್ರತಿಕ್ರಿಯಿಸುವುದು ಹೀಗೆ. ಈ ತಿನಿಸಿನ ಅಂಗಡಿಯಲ್ಲಿ ಕೆಲಸ ಮಾಡಿ ನನಗೆ ಯಾವತ್ತೂ ಸುಸ್ತಾಗಿದ್ದೇ ಇಲ್ಲ. ಸುಸ್ತಾಗುವ ಬದಲು ನಾನು ಅದನ್ನು ಸಂತೋಷದಿಂದ ಇಷ್ಟಪಟ್ಟು ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ ಅಜ್ಜಿ ಸುರಬಾಲಾ. ಸಂಜೆಯ ಸಮಯದಲ್ಲಿ ಇವರ ಈ ತಿನಿಸಿನ ಅಂಗಡಿ ಕಾಲಿಡಲು ಜಾಗವಿಲ್ಲದಷ್ಟು ನೂಕುನುಗ್ಗಲಿನಿಂದ ಕೂಡಿರುತ್ತದೆ. ಜನ ಸಮೋಸಾ ಹಾಗೂ ಅಲ್ಲಿ ತಯಾರಿಸುವ ಇತರ ತಿನಿಸು ಖರೀದಿಸಲು ಅಲ್ಲಿಗೆ ದಾಂಗುಡಿ ಇಡುತ್ತಾರೆ. 

ಈ ಇಳಿವಯಸ್ಸಿನಲ್ಲೂ ವೃದ್ಧರೊಬ್ಬರು ಹೀಗೆ ಅಂಗಡಿಯೊಂದನ್ನು ನಡೆಸುತ್ತಿರುವುದು ಸಂತೋಷದ ವಿಚಾರ. ಅದಕ್ಕಿಂತಲೂ ಖುಷಿಯ ವಿಚಾರವೆಂದರೆ ಇಲ್ಲಿ ಅವರೇ ಸ್ವತಃ ಅವರ ಕೈಯಿಂದ ಸಮೋಸಾ ಸಿದ್ಧಪಡಿಸುತ್ತಾರೆ. ಬೆಲೆಯೂ ತೀರಾ ಕಡಿಮೆ. ಕೇವಲ ಎರಡೂವರೆ ರೂಪಾಯಿಗೆ ಶುಚಿರುಚಿಯಾದ ಸಮೋಸಾವನ್ನು ಅವರು ಜನಸಾಮಾನ್ಯರಿಗೆ ನೀಡುತ್ತಾರೆ. ರುಚಿಯಂತೂ ಮತ್ತೆ ಮತ್ತೆ ತಿನ್ನಬೇಕೆನಿಸುವಂತಿರುತ್ತದೆ ಎಂದು ಸ್ಥಳೀಯ ನಿವಾಸಿ ರೂಪಕ್ ಮಂಡಲ್ (RupaK mandal) ಹೇಳುತ್ತಾರೆ. 

ವೃದ್ಧೆಯೊಬ್ಬರು ತಮ್ಮ ಉದಾರ ಕಾರ್ಯದಿಂದ ಸುತ್ತಮುತ್ತಲ ಜನರ ಹೃದಯವನ್ನು ಗೆದ್ದಿದ್ದಾರೆ. ಅಜ್ಜಿ ಮಾಡುವ ಈ ರುಚಿಯಾದ ಸಮೋಸಾ ತಿನ್ನಲು ತೂಫಾನ್ ಗಂಜ್‌ನ (Tufanganj) ಜನ ಮಾತ್ರವಲ್ಲದೇ ತುಂಬಾ ದೂರ ದೂರದ ಪ್ರದೇಶಗಳಿಂದಲೂ ಇಲ್ಲಿಗೆ ಜನ ಆಗಮಿಸುತ್ತಾರೆ. ಅಲ್ಲದೇ ಅಜ್ಜಿ ತಮ್ಮ ಸೊಗಸಾದ ನಗುವಿನಿಂದ ನಿಮ್ಮನ್ನು ಸ್ವಾಗತಿಸುತ್ತಾರೆ. ಈ ಇಳಿವಯಸ್ಸಿನಲ್ಲಿ ಯಾಕೆ ನೀವು ಈ ಕೆಲಸ ಮಾಡುತ್ತೀರಿ ಎಂದು ಕೇಳಿದರೆ, ಸುಮ್ಮನೇ ಕೆಲಸ ಮಾಡದೇ ಮನೆಯಲ್ಲಿ ಕುಳಿತರೆ ನನ್ನ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಅಲ್ಲದೇ ನಾನು ಸುಮ್ಮನೆ ಕುಳಿತು ಹೆಚ್ಚು ಕಾಲ ಬಳಲು ಸಾಧ್ಯವಿಲ್ಲ ಎಂದು ಅಜ್ಜಿ ಸುರಬಾಲ ಹೇಳಿಕೊಂಡಿದ್ದಾರೆ. 

ಒಟ್ಟಿನಲ್ಲಿ ಸ್ಥಳೀಯವಾಗಿ ಸಿಂಗಾರ ದೀಡ ಎಂದು ಕರೆಯಲ್ಪಡುವ ಈ ಅಜ್ಜಿ ತಮಿಳುನಾಡಿನ ಇಡ್ಲಿ ಅಮ್ಮನನ್ನು (Idli Amma) ನೆನಪು ಮಾಡುತ್ತಿದ್ದಾರೆ. ಅವರು ಒಂದು ರೂಪಾಯಿಗೆ ಜನರಿಗೆ ಇಡ್ಲಿ ನೀಡುತ್ತಿದ್ದರು. ಇವರ ವಿಚಾರ ತಿಳಿದ ಉದ್ಯಮಿ (industrialist) ಆನಂದ್ ಮಹೀಂದ್ರ (Anand Mahindra) ಅವರು, ಅವರಿಗೆ ಮನೆಯನ್ನು ಕೊಡುಗೆಯಾಗಿ ನೀಡಿದ್ದರು. 80 ವರ್ಷದ ಕಮಲತಲ್ (Kamalathal) ಎಂಬ ಹೆಸರಿನ ಅವರು ತಮಿಳುನಾಡಿನ ವಡಿವೇಲಂಪಲಯಂನಲ್ಲಿ (Vadivelampalayam) ನೆಲೆಸಿದ್ದರು.

ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ

Latest Videos
Follow Us:
Download App:
  • android
  • ios