ಶಬರಿಮಲೆ (ಡಿ.04) : ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರೂ ಪ್ರವೇಶಿಸಬಹುದೆಂದು ಕಳೆದ ವರ್ಷವೇ ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಆದರೆ ಪ್ರಸಕ್ತ ವರ್ಷ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ದೇಗುಲಕ್ಕೆ ಪ್ರವೇಶವಿಲ್ಲ ಎಂದು ಕೇರಳ ಪೊಲೀಸರು ಮಾರ್ಗಸೂಚಿ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

 ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮುಂಗಡವಾಗಿ ಆನ್‌ಲೈನ್‌ ಟಿಕೆಟ್‌ ಬುಕ್‌ ಮಾಡುವ ‘ಶಬರಿಮಲೆ ಆನ್‌ಲೈನ್‌ ಸವೀರ್‍ಸ್‌’ ವೆಬ್‌ಸೈಟ್‌ನ ಮಾರ್ಗಸೂಚಿಯಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟಮಹಿಳೆಯರಿಗೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ.

ಶಬರಿಮಲೆ ದೇಗುಲಕ್ಕೆ ಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ! ...

ಕಳೆದ ವರ್ಷ ನ.14ರಂದು ಮಹಿಳೆಯರೂ ಶಬರಿಮಲೆ ದರ್ಶನ ಪಡೆಯಬಹುದೆಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ನಂತರ ಬಿಂದು ಮತ್ತು ಕನಕ ದುರ್ಗಾ ಎಂಬ ಇಬ್ಬರು ಮಹಿಳೆಯರು ಭಾರೀ ಪೊಲೀಸ್‌ ಭದ್ರತೆಯಲ್ಲಿ ಶಬರಿಮಲೆ ದರ್ಶನ ಪಡೆದಿದ್ದರು.