Asianet Suvarna News Asianet Suvarna News

ಶಬರಿಮಲೆ ದೇಗುಲಕ್ಕೆ ಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ!

 ಕೊರೋನಾ ನಿಯಂತ್ರಣ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ| ಶಬರಿಮಲೆ ದೇಗುಲಕ್ಕೆಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ

Travancore Devaswom Board Permits More Devotees to Visit Sabarimala Temple pod
Author
Bangalore, First Published Dec 3, 2020, 9:18 AM IST

ಶಬರಿಮಲೆ(ಡಿ.03): ಕೊರೋನಾ ನಿಯಂತ್ರಣ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯವನ್ನು ಹೆಚ್ಚಿನ ಭಕ್ತಾದಿಗಳಿಗೆ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ಸೋಮವಾರದಿಂದ ಶುಕ್ರವಾರದವರೆಗೆ ನಿತ್ಯ 2 ಸಾವಿರ ಮತ್ತು ಶನಿವಾರ ಹಾಗೂ ಭಾನುವಾರದ ದಿನಗಳಲ್ಲಿ ಗರಿಷ್ಠ 3000 ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರ್ಕಾರ ಮುಂದಾಗಿದೆ. ಇದಕ್ಕೂ ಮುನ್ನ ಸಾಮಾನ್ಯ ದಿನಗಳಲ್ಲಿ ಗರಿಷ್ಠ ಒಂದು ಸಾವಿರ ಮತ್ತು ಶನಿವಾರ ಹಾಗೂ ಭಾನುವಾರಗಳಲ್ಲಿ 2 ಸಾವಿರ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿತ್ತು.

ದರ್ಶನಕ್ಕೆ ಇಚ್ಚಿಸುವ ಭಕ್ತರು ಸಂಬಂಧಿತ ವೆಬ್‌ಸೈಟ್‌ಗಳ ಮೂಲಕ ಬುಕ್‌ ಮಾಡಿಕೊಳ್ಳಬಹುದು ಹಾಗೂ ಭಕ್ತರು ನೀಲಕ್ಕಲ್‌ ತಲುಪುವ 24 ಗಂಟೆಗಳ ಮುಂಚಿತವಾಗಿ ತಮ್ಮ ಕೊರೋನಾ ನೆಗೆಟಿವ್‌ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಹೇಳಿದ್ದಾರೆ.

 

Follow Us:
Download App:
  • android
  • ios