ಮುಂಬೈನಲ್ಲಿ 'ಪ್ರೀಮಿಯರ್ ಪದ್ಮಿನಿ' ಯುಗಾಂತ್ಯ
ಡಬ್ಬಲ್ ಡೆಕ್ಕರ್ ಡೀಸೆಲ್ ಬಸ್‌ಗಳ ಓಡಾಟ ಅಂತ್ಯಗೊಂಡ ಬೆನ್ನಲ್ಲೇ ಮುಂಬೈ ನಗರದ ಜೊತೆ ಗುರುತಿಸಿಕೊಂಡಿದ್ದ ‘ಪ್ರೀಮಿಯರ್ ಪದ್ಮಿನಿ’ ಟ್ಯಾಕ್ಸಿ ಸೇವೆಯೂ ಸಹ ಅಂತ್ಯಗೊಂಡಿದೆ.
ಮುಂಬೈ: ಡಬ್ಬಲ್ ಡೆಕ್ಕರ್ ಡೀಸೆಲ್ ಬಸ್‌ಗಳ ಓಡಾಟ ಅಂತ್ಯಗೊಂಡ ಬೆನ್ನಲ್ಲೇ ಮುಂಬೈ ನಗರದ ಜೊತೆ ಗುರುತಿಸಿಕೊಂಡಿದ್ದ ‘ಪ್ರೀಮಿಯರ್ ಪದ್ಮಿನಿ’ ಟ್ಯಾಕ್ಸಿ ಸೇವೆಯೂ ಸಹ ಅಂತ್ಯಗೊಂಡಿದೆ. ಕಪ್ಪು ಹಾಗೂ ಹಳದಿ ಬಣ್ಣದ ಈ ಕಾರುಗಳು ಸೋಮವಾರದಿಂದ ರಸ್ತಗಿಳಿಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕಾಲಿ ಪೀಲಿ’ ಎಂಬ ಹೆಸರಿನೊಂದಿಗೆ ಮುಂಬೈ ಜನರ ಜೊತೆಗಾರರಾಗಿದ್ದ ಈ ಟ್ಯಾಕ್ಸಿ ಭಾನುವಾರ ಕೊನೆಯದಾಗಿ ರಸ್ತೆಗಳಿಯಲಿದೆ. 2003ರಲ್ಲಿ ಕೊನೆಯ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ ನೋಂದಣಿಗೊಂಡಿತ್ತು. ಈ ವಾಹನಗಳಿಗೆ 20 ವರ್ಷಗಳ ಕಾಲ ಮಿತಿ ಇರುವುದರಿಂದ ಅವಧಿ ಮುಕ್ತಾಯವಾದ ಕಾರು ಸೇವೆಯನ್ನು ನಿಲ್ಲಿಸಲಿದೆ. ‘ಇದೀಗ ಆ್ಯಪ್‌ಗಳ ಮುಖಾಂತರ ಸೇವೆ ಒದಗಿಸುವ ಕಾರುಗಳು ಮುಂಬೈ ರಸ್ತೆಯನ್ನು ಆಕ್ರಮಿಸಿದ್ದು, ಈ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದು ಮುಂಬೈನ ಗೌರವವಾಗಿತ್ತು. ನಮಗೆ ಜೀವನವಾಗಿತ್ತು’ ಎಂದು ಕೊನೆಯ ಕಾರು ಹೊಂದಿದ್ದ ಕಾರಿನ ಮಾಲಿಕ ಹೇಳಿದ್ದಾರೆ.
ಹಮಾಸ್ ಉಗ್ರರ ಸುರಂಗ ಧ್ವಂಸಕ್ಕೆ 'ಸ್ಪಾಂಜ್ ಬಾಂಬ್' ಬಳಕೆಗೆ ಇಸ್ರೇಲ್ ಸಿದ್ಧತೆ: ಏನಿದು ಸ್ಪಾಂಜ್ ಬಾಂಬ್?
ಈ ಕಾರುಗಳು ಸುಮಾರು 50 ವರ್ಷಗಳ ಸೇವೆ ನೀಡಿದ್ದು, ಇವುಗಳನ್ನು ಸಹ ಸ್ಮಾರಕವಾಗಿ ಸಂರಕ್ಷಿಸಬೇಕು ಎಂದು ಜನ ಬೇಡಿಕೆ ಸಲ್ಲಿಸಿದ್ದಾರೆ.
₹2 ಕೋಟಿಯ ಮನೆ ಖರೀದಿಗೆ ರಾತ್ರಿ 8 ತಾಸು ರಸ್ತೇಲಿ ಕಾದು ನಿಂತ ಜನ!
ಪುಣೆ: ದೇಶದ ಪ್ರಮುಖ ಐಟಿ ನಗರಗಳ ಪೈಕಿ ಒಂದಾದ ಮಹಾರಾಷ್ಟ್ರದ ಪುಣೆಯಲ್ಲಿ ಜನರು 2 ಕೋಟಿ ರು.ಗೆ ಐಶಾರಾಮಿ ಫ್ಲಾಟ್ (Luxurious Flat) ಖರೀದಿಸಲು ಬರೋಬ್ಬರಿ ರಾತ್ರಿಯಿಡೀ ಕಾದು ಸಾಲಿನಲ್ಲಿ ನಿಂತ ಪ್ರಸಂಗ ನಡೆದಿದೆ. ವಿಕಾಸ್ ಜಾವಡೇಕರ್ (Vikas Javadekar) ಎಂಬ ಬಿಲ್ಡರ್ ಈ ವಸತಿ ಸಮುಚ್ಚಯ ಮಾಲೀಕರು ಪುಣೆಯಿಂದ 15 ಕಿಲೋಮೀಟರ್ ದೂರದ ವಾಕಡ್‌ನಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿದ್ದಾರೆ. ಇದನ್ನು ಖರೀದಿ ಮಾಡಲು ಜನರು ಮುಗಿಬಿದ್ದು, 8 ತಾಸು ಸಾಲಿನಲ್ಲಿ ಕಾದು ನಿಂತಿದ್ದರು. ಈ ವಿಡಿಯೋ ವೈರಲ್ ಆಗಿದೆ.
ಇಸ್ರೇಲ್ ಹಮಾಸ್ ಯುದ್ಧದ ಮೊದಲು ಹಾಗೂ ನಂತರ: ಗಾಜಾಪಟ್ಟಿಯ ಸ್ಯಾಟಲೈಟ್ ಫೋಟೋ ಬಿಡುಗಡೆ