ಫ್ಲೈದುಬೈ ವಿಮಾನದಲ್ಲಿ ಉಗ್ರನಾಗಿದ್ದ ಕೋ-ಪೈಲಟ್‌ನಿಂದ 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತ ಮೂಲದ ಸ್ಮಿತ್ ಮಚ್ಚಾರ್‌ಗೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಭಾರತದ ಕೆಲವು ನಾಯಕರು ಈ ಬಗ್ಗೆ ಮೌನ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಸ್ಮಿತ್ ಅವರ ಜಾತಿ ಮತ್ತು ಗುಜರಾತ್‌ನ ಸೌರಾಷ್ಟ್ರ ಬ್ರಾಹ್ಮಣ ಹಿನ್ನೆಲೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.
ದೆಹಲಿ: ಭಾರತ ಮೂಲದ ಸಂಜಾತ ಫ್ಲೈದುಬೈ ವಿಮಾನದಲ್ಲಿ 180 ಪ್ರಯಾಣಿಕರ ಜೀವ ಕಾಪಾಡಿದ ಸ್ಮಿತ್ ಮಚ್ಚಾರ್‌ಗೆ ಇಡೀ ವಿಶ್ವವೇ ಕೊಂಡಾಡುತ್ತಿದೆ. ಧರ್ಮ, ಜಾತಿ, ದೇಶದ ಎಲ್ಲೆಯನ್ನು ಮೀರಿ ಇವರನ್ನು ಕೊಂಡಾಡುವವರ ಸಂಖ್ಯೆ ಪ್ರಪಂಚದಾದ್ಯಂತ ಏರುತ್ತಲೇ ಇದೆ. ಆದರೆ ಭಾರತದಲ್ಲಿನ ಕೆಲವು ನಾಯಕರು ಮಾತ್ರ ಈ ವಿಷ್ಯ ಗೊತ್ತೇ ಇಲ್ಲ ಎನ್ನುವಂತೆ ಸೈಲೆಂಟ್ ಆಗಿರುವ ಹಿಂದಿರುವ ಉದ್ದೇಶದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಯುಎಇ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಕೂಡ ಸ್ಮಿತ್ ಅವರಿಗೆ ಶುಭಾಶಯ ಕೋರುತ್ತಿದ್ದರೆ, ಭಾರತದ ಕೆಲವು ನಾಯಕರು ಶುಭಾಶಯ ಕೋರುವುದು ದೂರದ ಮಾತು, 180 ಮಂದಿಯ ಪ್ರಾಣ ಉಳಿಸಿದ ಸ್ಮಿತ್ ಹೆಸರೇ ಬಾಯಿಯಿಂದ ಬರುತ್ತಿಲ್ಲ. ಇದರ ಹಿಂದಿರುವ ಔಚಿತ್ಯದ ಬಗ್ಗೆ ಬಿಜೆಪಿಗಳು ಇದಾಗಲೇ ಕೆಂಡಾಮಂಡಲ ಆಗಿರುವುದು ಇದೆ.
ಒಟ್ಟಿನಲ್ಲಿ ಏನೇ ಆದರೂ, ಅದಕ್ಕೊಂದು ಧರ್ಮ, ಜಾತಿಯ ನಂಟು ಕಟ್ಟುವುದು ಭಾರತದಲ್ಲಿಯಂತೂ ಇದ್ದೇ ಇದೆ. ಇದೀಗ ಸ್ಮಿತ್ ಮಚ್ಚಾರ್ ವಿಚಾರದಲ್ಲಿಯೂ ಅದೇ ರೀತಿ ಆಗುತ್ತಿದೆ. ಇದಾಗಲೇ ಉಗ್ರ ಕೃತ್ಯಕ್ಕೆ ಕೈಹಾಕಿ 180 ಪ್ರಯಾಣಿಕರ ಸಾವನ್ನು ಬಯಸಿದ್ದ ಕೋ-ಪೈಲಟ್ ಹೆಸರು ಬಹಿರಂಗಗೊಂಡಿದೆ. ಈಗ ಓಮಾನ್ ದೇಶದಿಂದಲೇ ನಿಷೇಧಕ್ಕೆ ಒಳಗಾಗಿದ್ದ ಹಮಾಮ್ ಅಲ್ಹಮ್ಮಮಿ ಎಂದು ತಿಳಿದುಬಂದಿದೆ. ಈತನಿಗೆ ಅಲ್-ಕೈದಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯುಎಇನಲ್ಲಿ ಜನಿಸಿದ ಈತನ ತಂದೆ ಒಮಾನ್ ಹಾಗೂ ತಾಯಿ ಸಿರಿಯಾ ಮೂಲದವರಾಗಿದ್ದಾರೆ. ಈತ ಈ ಹಿಂದೆ ತೀವ್ರಗಾಮಿ ಇಸ್ಲಾಮಿಕ್ ಸಿದ್ಧಾಂತ ಹಾಗೂ ಅಲ್-ಖೈದಾ ಉಗ್ರಗಾಮಿ ಸಂಘಟನೆಯನ್ನು ಬೆಂಬಲಿಸುವ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಹಿನ್ನೆಲೆಯಲ್ಲಿ ಒಮಾನ್‌ನಲ್ಲಿ ಈತನಿಗೆ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಲಾಗಿತ್ತು ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಆತನ ಹಿನ್ನೆಲೆ ಮತ್ತು ಈ ದಾಳಿಯ ಹಿಂದಿನ ಭಯೋತ್ಪಾದನಾ ಕೋನಗಳ ಕುರಿತು ವಿವಿಧ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಮಚ್ಚರ್ ಬಗ್ಗೆ ಸಾಕಷ್ಟು ಚರ್ಚೆ
ಉಗ್ರ ಕೃತ್ಯ ನಡೆಸಿದವನ ಹೆಸರು ಬಯಲಾಗುತ್ತಿದ್ದಂತೆಯೇ, ಸಹಜವಾಗಿ ಹೀರೋ ಎನ್ನಿಸಿಕೊಂಡ ಸ್ಮಿತ್ ಮಚ್ಚಾರ್ ಬಗ್ಗೆ ಜನರಿಗೆ ಕುತೂಹಲ ಹೆಚ್ಚಾಗಿದ್ದು, ಅವರ ಸರ್ನೇಮ್ನಿಂದ ಜಾತಿ ಯಾವುದು ಎಂದು ತಿಳಿದುಕೊಳ್ಳುವ ಹಂಬಲ ಹೆಚ್ಚುತ್ತಿದೆ. ಇದಾಗಲೇ ಕೆಲವರಿಗೆ ಸ್ಮಿತ್ ಮಚ್ಚಾರ್ ಅವರ ಮೂಲ ಯಾವುದು, ಅವರು ಯಾವ ಜಾತಿ ಎನ್ನುವುದು ತಿಳಿದಿದೆ.
ನಿಜಕ್ಕೂ ಯಾವ ಜಾತಿ ಇವರದ್ದು?
ಅಂದಹಾಗೆ, ಸ್ಮಿತ್ ಮಚ್ಚಾರ್, ಗುಜರಾತ್ ರಾಜ್ಯದವರು. ಮಚ್ಚಾರ್ ಎನ್ನುವ ಬಗ್ಗೆ ಹಲವರು ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್‌ನಲ್ಲಿ, ಇದು ಹಾಥಿ, ಮಂಕ್ಡಿ, ಬಕ್ರಿ ಮತ್ತು ಪೋಪಟ್‌ನಂತಹ ಉಪನಾಮಗಳ ಜೊತೆಗೆ ಇರುತ್ತದೆ. ಆದರೆ ನಿಜವಾಗಿಯೂ ಸ್ಮಿತ್ ಮಚ್ಚಾರ್ ಅವರು, ಸೌರಾಷ್ಟ್ರದ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎನ್ನುವುದು ತಿಳಿದು ಬಂದಿದೆ. 1960 ರ ದಶಕದಲ್ಲಿ, ಮಾಜಿ ಸಂಸತ್ ಸದಸ್ಯ ಜೈಸುಖ್‌ಲಾಲ್ ಲಾಲ್ಶಂಕರ್ ಹಾಥಿ ಅವರನ್ನು ಮಚ್ಚಾರ್ ಎಂಬುವವರನ್ನು ಸನ್ಮಾನಿಸಿದ್ದರು. ಆ ಸಂದರ್ಭದಲ್ಲಿಯೇ ಇದು ಚರ್ಚೆಗೆ ಬಂದಿತ್ತು ಎನ್ನುವುದು ವಿಶೇಷವಾಗಿದ್ದು, ಇವರು ಗುಜರಾತಿನ ಸೌರಾಷ್ಟ್ರದ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಸರ್ನೇಮ್ ಎನ್ನುವುದು ತಿಳಿದುಬಂದಿದೆ.


