ಪಹಲ್ಗಾಂ ದಾಳಿಯ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಮೇ 27 ರಿಂದ 4 ದಿನಗಳ ಫೇಮ್ ಟೂರ್ ಆಯೋಜಿಸಿದೆ. ಪ್ರವಾಸಿ ಪ್ಯಾಕೇಜ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಶ್ರೀನಗರ (ಮೇ.27): ಕಳೆದ ತಿಂಗಳ 22 ರಂದು ಕಣಿವೆ ರಾಜ್ಯ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಮೇ 27 ರಿಂದ 4 ದಿನಗಳ ಫೇಮ್ ಟೂರ್ ಆಯೋಜಿಸಿದೆ. ಇದರಲ್ಲಿ ಪ್ರವಾಸಿಗರಿಗೆ ಪ್ರವಾಸಿ ಪ್ಯಾಕೇಜ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ.
ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದ ಕಣಿವೆ ರಾಜ್ಯದಲ್ಲಿ ಪಹಲ್ಗಾಂ ದಾಳಿ ಬಳಿಕ ಎಲ್ಲವೂ ಬದಲಾಗಿದೆ. ಆ ವಲಯ ಅವಲಂಬಿತವಾಗಿದ್ದ 3 ಲಕ್ಷ ಕಾರ್ಮಿಕರ ಬದುಕು ಅತಂತ್ರವಾಗಿದೆ. ಮುಂಚಿತವಾಗಿ ಬುಕ್ಕಿಂಗ್ ಆಗಿದ್ದ ಶೇ.90ರಷ್ಟು ಪ್ರವಾಸಿ ಪ್ಯಾಕೇಜ್‌ಗಳು ರದ್ದುಗೊಂಡಿತ್ತು. ಹೀಗಾಗಿ ಮತ್ತೆ ಪುನಶ್ಚೇತನದ ನಿಟ್ಟಿನಲ್ಲಿ ಫೇಮ್ ಟೂರ್ ಆಯೋಜನೆಯಾಗಿದ್ದು, ಪ್ರವಾಸಿಗರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಫೇಮ್ ಟೂರ್ ನಡೆಯಲಿದ್ದು, ಮೇ 27 ರಿಂದ 30 ರ ತನಕ ಪಹಲ್ಗಾಮ್, ಶ್ರೀನಗರ, ಸೋನ್ಮಾರ್ಗ್, ಗುಲ್ಮಾರ್ಗ್‌ಗೆ ಪ್ರವಾಸ ಕೈಗೊಳ್ಳಲಿದೆ.
