Asianet Suvarna News Asianet Suvarna News

5 ಹಂತದಲ್ಲಿ ಮಹಾ ಅನ್‌ಲಾಕ್ : ಲಾಕ್‌ಡೌನ್ ತೆರವು ಹೇಗೆ..?

  • ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿದ್ದ ಕೊರೋನಾವನ್ನು ಮಣಿಸಿದ ಮಹಾರಾಷ್ಟ್ರ
  • 5 ಹಂತದಲ್ಲಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್
  •  ಶೇ.25ಕ್ಕಿಂತ ಕಡಿಮೆ ಇರುವ ಜಿಲ್ಲೆ​ಗ​ಳಲ್ಲಿ ಲಾಕ್‌​ಡೌನ್‌ ಪೂರ್ತಿ ತೆರ​ವು
After Covid effect  Maharashtra to unlock in 5 phases snr
Author
Bengaluru, First Published Jun 4, 2021, 8:04 AM IST

ಮುಂಬೈ (ಜೂ.04): ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿದ್ದ ಕೊರೋನಾವನ್ನು ಮಣಿಸಿ ಇದೀಗ ಕಡಿಮೆ ಸೋಂಕಿನ  ಪ್ರಮಾಣ ದಾಖಲಿಸಿರುವ ಮಹಾರಾಷ್ಟ್ರದಲ್ಲಿ ಹಂತ ಹಂತವಾಗಿ ಅನ್‌ಲಾಕ್‌ ನಿರ್ಧಾರ ಮಾಡಲಾಗಿದೆ. 

ಮೊದಲ ಹಂತ

ಶೇ.5ಕ್ಕಿಂತ ಕಡಿಮೆ ಪಾಸಿ​ಟಿ​ವಿಟಿ ದರ ಹಾಗೂ ಆಮ್ಲ​ಜ​ನಕ ವ್ಯವ​ಸ್ಥೆಯ ಹಾಸಿ​ಗೆ​ಗಳ ಬೇಡಿಕೆ ಶೇ.25ಕ್ಕಿಂತ ಕಡಿಮೆ ಇರುವ ಜಿಲ್ಲೆ​ಗ​ಳಲ್ಲಿ ಲಾಕ್‌​ಡೌನ್‌ ಪೂರ್ತಿ ತೆರ​ವು. ಇಲ್ಲಿ ರೆಸ್ಟೋ​ರೆಂಟ್‌​, ಮಾಲ್‌​, ಸ್ಥಳೀಯ ರೈಲು, ಸಾರ್ವ​ಜ​ನಿಕ ಸ್ಥಳ​, ಪ್ರವಾಸಿ ತಾಣ​, ​ಥಿ​ಯೇ​ಟ​ರ್‌​, ಶೂಟಿಂಗ್‌, ಸಾಮಾ​ಜಿಕ ಮನೋ​ರಂಜನೆ, ಮದುವೆ, ಜಿಮ್‌, ಸಲೂನ್‌, ಬ್ಯೂಟಿ ಪಾರ್ಲ​ರ್‌​ಗ​ಳಿಗೆ ಅನುಮತಿ.

ಕೊರೋನಾ ಗೆದ್ದ ಗ್ರಾಮಕ್ಕೆ 50 ಲಕ್ಷ ಬಹುಮಾನ: ಸೋಂಕು ತಡೆಗೆ ಸರ್ಕಾರದ ಪ್ಲಾನ್!

ಎರಡನೇ ಹಂತ

ಸಾಮಾನ್ಯ ಪ್ರಮಾ​ಣ​ದ​ಲ್ಲಿ ಸೋಂಕು ಇರುವ ಜಿಲ್ಲೆ​ಗ​ಳಲ್ಲಿ ಅಥವಾ ನಗ​ರ​ಗ​ಳಲ್ಲಿ ಜಿಮ್‌, ಸಲೂನ್‌, ಬ್ಯೂಟಿ ಪಾರ್ಲ​ರ್‌​ಗಳ ಕಾರಾರ‍ಯ​ರಂಭಕ್ಕೆ ಅನು​ಮತಿ. ಆದರೆ ಶೇ.50ರಷ್ಟುಜನರ ಪ್ರವೇ​ಶಕ್ಕೆ ಮಾತ್ರ ಅವ​ಕಾಶ. ಮದುವೆ ಸೇರಿ ಇನ್ನಿ​ತರ ಕಾರ್ಯ​ಕ್ರ​ಮ​ಗ​ಳಲ್ಲಿ ಇಂತಿಷ್ಟೇ ಜನ ಭಾಗಿ​ಯಾ​ಗಿ​ರ​ಬೇ​ಕೆಂಬ ನಿಯಮ. ಸೆಕ್ಷನ್‌ 144ರಡಿ ನಿಷೇ​ಧಾಜ್ಞೆ ಜಾರಿ​ಯ​ಲ್ಲಿ​ರ​ಲಿದೆ.

ಮಹಾರಾಷ್ಟ್ರ, ದೆಹಲಿಯಲ್ಲಿ ಸೋಂಕು ಇಳಿಕೆ! ...

ಮೂರನೇ ಹಂತ

ಸಾಮಾ​ನ್ಯ​ಕ್ಕಿಂತ ಹೆಚ್ಚಿನ ಪ್ರಕರಣ ಇರುವ ಜಿಲ್ಲೆ​ಗ​ಳಲ್ಲಿ ಈ ಅನ್‌​ಲಾಕ್‌ ಪ್ರಕ್ರಿಯೆ ಜಾರಿ​ಯಾ​ಗು​ತ್ತದೆ. ಈ ಹಂತ​ದ ವ್ಯಾಪ್ತಿಯ ಜಿಲ್ಲೆ​ಗ​ಳಲ್ಲಿ ಕೆಲವು ನಿರ್ಬಂಧ​ಗಳು ಮುಂದು​ವ​ರಿ​ಯ​ಲಿವೆ.

ನಾಲ್ಕನೇ ಹಂತ

ಪುಣೆ ಮತ್ತು ರಾಯ್‌​ಗಢ ಜಿಲ್ಲೆ​ಗ​ಳಲ್ಲಿ 4ನೇ ಹಂತದ ಅನ್‌​ಲಾಕ್‌ ಕ್ರಮ ಜಾರಿ​ಗೊ​ಳಿ​ಸ​ಲಾ​ಗು​ತ್ತದೆ.

ಐದನೇ ಹಂತ 

ಈ ಹಂತದ ವ್ಯಾಪ್ತಿಗೆ ಬರುವ ನಗರ ಮತ್ತು ಜಿಲ್ಲೆ​ಗ​ಳಲ್ಲಿ ಹೆಚ್ಚು ಸೋಂಕು ಇರುವ ಕಾರಣ ಈ ಭಾಗ​ದ ಜನರ ಪ್ರಯಾ​ಣಕ್ಕೆ ಇ-ಪಾಸ್‌​ಗಳ ಅಗ​ತ್ಯ​ವಿ​ರ​ಲಿದೆ. ಆದರೆ ಅಂತ​ರ್‌​ರಾಜ್ಯ ಪ್ರಯಾ​ಣಕ್ಕೆ ಆರ್‌​ಟಿ​ಪಿ​ಸಿ​ಆರ್‌ ಪರೀ​ಕ್ಷೆಯ ಅಗ​ತ್ಯ​ವಿ​ರು​ವು​ದಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios