* ಮಹಾರಾಷ್ಟ್ರದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಕೊರೋನಾ ಇಳಿಕೆ* ಮಹಾರಾಷ್ಟ್ರದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆ* ದಿಲ್ಲೀಲಿ 42 ದಿನ ಬಳಿಕ 5000ಕ್ಕಿಂತ ಕೆಳಗಿಳಿದ ನಿತ್ಯದ ಕೊರೋನಾ ಕೇಸ್‌

ನವದೆಹಲಿ/ಮುಂಬೈ(ಮೇ.18): ಕಳೆದ ಹಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಸೋಂಕು ದಾಖಲಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸೋಮವಾರ 26,616 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಮಾ.30ರ ಬಳಿಕ ಅಂದರೆ 48 ದಿನಗಳ ಬಳಿಕ ಇದೇ ಮೊಟ್ಟಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆ ದಾಖಲಾದಂತಾಗಿದೆ.

ಇದೇ ವೇಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನಿನ್ನೆ ಕೇವಲ 4526 ಮಂದಿ(ಪಾಸಿಟಿವಿಟಿ ದರ ಶೇ.8.42ಕ್ಕೆ ಕುಸಿತ)ಗೆ ಸೋಂಕು ದೃಢಪಟ್ಟಿದೆ. ಇದು ಏ.5ರ ಬಳಿಕ ಅಂದರೆ 42 ದಿನಗಳ ಬಳಿಕ ದಾಖಲಾದ ಅತಿ ಕನಿಷ್ಠ ದೈನಂದಿನ ಕೇಸ್‌ಗಳ ಸಂಖ್ಯೆ ಆಗಿದೆ.

"

ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳು ಕೈಗೊಂಡ ಲಾಕ್‌ಡೌನ್‌ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳಿಂದಾಗಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ. ಆದರೆ ದೆಹಲಿ ಕೊರೋನಾ ವೈರಸ್‌ಗೆ ಬಲಿಯಾಗುವವರ ಸಂಖ್ಯೆ ಮಾತ್ರ ಸುಧಾರಣೆಯಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ನಿನ್ನೆ ಮತ್ತೆ 340 ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ.

ದಿಲ್ಲೀಲಿ 42 ದಿನ ಬಳಿಕ 5000ಕ್ಕಿಂತ ಕೆಳಗಿಳಿದ ನಿತ್ಯದ ಕೊರೋನಾ ಕೇಸ್‌

 ರಾಷ್ಟ್ರ ರಾಜಧಾನಿ ದೆಹಲಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಲಾಕ್‌ಡೌನ್‌ ಸೇರಿದಂತೆ ಇನ್ನಿತರ ಕ್ರಮಗಳಿಂದಾಗಿ ದೈನಂದಿನ ಕೊರೋನಾ ಕೇಸ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸೋಮವಾರ ಹೊಸದಾಗಿ ಕೇವಲ 4526 ಮಂದಿ (ಪಾಸಿಟಿವಿಟಿ ದರ ಶೇ.8.42ಕ್ಕೆ ಕುಸಿತ)ಗೆ ಸೋಂಕು ಪತ್ತೆಯಾಗಿದ್ದು, ಇದು ಏ.5ರ ಬಳಿಕ ಅಂದರೆ ಕಳೆದ 42 ದಿನಗಳಲ್ಲಿ ದಾಖಲಾದ ಅತೀ ಕನಿಷ್ಠ ದೈನಂದಿನ ಕೇಸ್‌ಗಳ ಸಂಖ್ಯೆಯಾಗಿದೆ.

ಆದರೆ ಕೊರೋನಾ ಮಹಾಮಾರಿಗೆ ಬಲಿಯಾಗುವವರ ಸಂಖ್ಯೆಯಲ್ಲಿ ಮಾತ್ರ ಸುಧಾರಣೆಯಾಗುವ ಸಾಧ್ಯತೆಯೇ ಕಂಡುಬರುತ್ತಿಲ್ಲ. ನಿನ್ನೆ ಮತ್ತೆ 340 ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona