ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ದೇಶಾದ್ಯಂತದ ರೈತರು ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಹರಿಯಾಣ ಪೊಲೀಸರು ಪಂಜಾಬ್-ಹರಿಯಾಣದ ಶಂಭು ಗಡಿಯನ್ನು ಮುಚ್ಚಿದ್ದು, ರೈತ ನಾಯಕರನ್ನು ಬಂಧಿಸಿದ್ದಾರೆ.
ದೇಶಾದ್ಯಂತ ರೈತರು ಇಂದು (ಮಂಗಳವಾರ, ಜುಲೈ 21) ದೆಹಲಿಯ ಕಿಸಾನ್ ಘಾಟ್‌ನಲ್ಲಿ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಭಟಿಸಲು ಇಂದು ದೆಹಲಿ ಪ್ರವೇಶಿಸಲು ನಿರ್ಧರಿಸಲಾಗಿದೆ. ಹೀಗಾಗಿ ರೈತರು ದೆಹಲಿಯ ಕಿಸಾನ್ ಘಾಟ್‌ನಲ್ಲಿ ಜಮಾವಣೆ ಆಗುವಂತೆ ಕರೆ ನೀಡಿದ್ದಾರೆ. ಸಿಜೆಪಿ ಪ್ರತಿಭಟನೆ ಗಲಭೆ ಅವಕಾಶ ಬಳಸಿಕೊಂಡು ಪಂಜಾಬ್ ರೈತ ಸಂಘಟನೆಗಳು ದೆಹಲಿ ಚಲೋ ಮುನ್ಸೂಚನೆ ಸಿಗುತ್ತಿದ್ದಂತೆ ನಿನ್ನೆ, ಹರಿಯಾಣದ ಪೊಲೀಸರು ಹಲವು ರೈತ ನಾಯಕರನ್ನು ಬಂಧಿಸಿದರು. ಈ ನಡುವೆ ಪಂಜಾಬ್‌ನಿಂದ ರೈತರ ದೊಡ್ಡ ಮಟ್ಟದಲ್ಲಿ ಇಂದು ಬೆಳಿಗ್ಗೆ 5:00 ಗಂಟೆಗೆ ಫತೇಘರ್ ಸಾಹಿಬ್‌ನಿಂದ ಆಗಮಿಸಿತು.
ಶಂಭು ಗಡಿ ಬಂದ್:
ಭದ್ರತಾ ಕಾರಣಗಳಿಗಾಗಿ ಪೊಲೀಸರು ಪಂಜಾಬ್ ಮತ್ತು ಹರಿಯಾಣವನ್ನು ಸಂಪರ್ಕಿಸುವ ಶಂಭು ಗಡಿಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಬೆಳಿಗ್ಗೆ 5:30 ರ ಸುಮಾರಿಗೆ, ಪೊಲೀಸರು ಎರಡೂ ಮಾರ್ಗಗಳನ್ನು ಮುಚ್ಚಿದರು. ನಿನ್ನೆ ರಾತ್ರಿಯಿಂದಲೇ ರಸ್ತೆ ತಡೆಗೆ ಸಿದ್ಧತೆಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ. ರೈತರ ಮನವೊಲಿಸಲು ಪ್ರಯತ್ನಿಸಲಾಯಿತು, ಆದರೆ ಯಾವುದೇ ಒಮ್ಮತಕ್ಕೆ ಬರದಿದ್ದಾಗ, ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಯಿತು. ಏತನ್ಮಧ್ಯೆ, ಫತೇಘರ್ ಸಾಹಿಬ್‌ನಿಂದ ರೈತರನ್ನ ತುಂಬಿಕೊಂಡ ಬಸ್ ಲಾರಿಗಳು ಹೊರಟಿವೆ. ವರದಿಯ ಪ್ರಕಾರ ರೈತರು ದೆಹಲಿಯತ್ತ ತೆರಳಲು ಪ್ರಾರಂಭಿಸಿದ್ದಾರೆ ಮತ್ತು ಶಂಭು ಗಡಿಯಲ್ಲಿ ರೈತರನ್ನು ತಡೆಯಲು ಹರಿಯಾಣ ಪೊಲೀಸರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಸರ್ಕಾರ ಮಾತುಕತೆ ಬದಲು ಸವಾಲು ಹಾಕುತ್ತಿದೆ
ಭಾರತ-ಅಮೆರಿಕ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಹೇಳುತ್ತಾರೆ. ಶಂಭು ಗಡಿಯನ್ನು ಮುಚ್ಚಲಾಗಿದೆ ಎಂಬ ವರದಿಗಳು ನಮಗೆ ಬರುತ್ತಿವೆ. ರೈತರೊಂದಿಗೆ ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸುವ ಬದಲು ಸರ್ಕಾರವು ದಮನದ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ಆ ಮೂಲಕ ದೇಶದ ರೈತರ, ಯುವಕರ ಧ್ವನಿ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ರೈತ ವಿರೋಧಿ
ಭಾರತ-ಅಮೆರಿಕ ವ್ಯಾಪಾರ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ಪಿಯೂಷ್ ಗೋಯಲ್ ಅವರು ಡೈರಿ ಮತ್ತು ಕೃಷಿ ವಲಯಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ, ಆದರೆ ಪಿಯೂಷ್ ಗೋಯಲ್, ನೀವು ಈಗಾಗಲೇ ರಾಜಿ ಮಾಡಿಕೊಂಡಿದ್ದೀರಿ ಎಂದು ಆರೋಪಿಸಿದ್ದಾರೆ.
ರೈತರು ಸಂಘರ್ಷ ಮಾಡುವುದಿಲ್ಲ:
ಹತ್ತಿ, ಸೋಯಾಬೀನ್, ಜೋಳ ಮತ್ತು ಒಣ ಹಣ್ಣುಗಳ ಕುರಿತು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಪಿಯೂಷ್ ಗೋಯಲ್ ದೇಶಕ್ಕೆ, ರೈತರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಯಾವುದೇ ರೈತರು ಸಂಘರ್ಷದ ಪರಿಸ್ಥಿತಿ ಸೃಷ್ಟಿಸಲು ಬಯಸುವುದಿಲ್ಲ ಎಂದು ರೈತ ನಾಯಕ ಹೇಳಿದ್ದಾರೆ.


