ಚೆನ್ನೈ(ಡಿ.07): ಮುಂದಿನ ದಿನಗಳಲ್ಲಿ ಹಿಂದು ಮಹಾಸಾಗರದಲ್ಲಿ ಏಳಲಿರುವ ಚಂಡಮಾರುಗಳ ಪಟ್ಟಿಯಲ್ಲಿ ‘ಅರ್ನಬ್‌’ ಎಂಬ ಚಂಡಮಾರುತವೂ ಇದೆ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಇದಕ್ಕೂ ಪ್ರಸಿದ್ಧ ನ್ಯೂಸ್‌ ಚಾನಲ್‌ ಆ್ಯಂಕರ್‌ಗೂ ಸಂಬಂಧವಿಲ್ಲ. ಬಾಂಗ್ಲಾದೇಶ ಈ ಹೆಸರು ಸೂಚಿಸಿದ್ದು, ಹಿಂದು ಮಹಾಸಾಗರದ ಸುತ್ತ ಬರುವ ದೇಶಗಳು ಇದನ್ನು ಒಪ್ಪಿಕೊಂಡಿವೆ.

ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!

ಹಿಂದು ಮಹಾಸಾಗರದ ಪ್ರದೇಶದಲ್ಲಿರುವ 13 ದೇಶಗಳು ಈ ವರ್ಷ ಒಟ್ಟು 169 ಚಂಡಮಾರುತಗಳ ಹೆಸರನ್ನು ಅಂಗೀಕರಿಸಿವೆ. ಫನಿ, ವಾಯು, ಬುಲ್‌ಬುಲ್‌ ಹಾಗೂ ಹಿಕ್ಕಾ ಚಂಡಮಾರುತಗಳ ನಂತರ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಪಟ್ಟಿಬಿಡುಗಡೆ ಮಾಡಿದೆ. ಅದರಲ್ಲಿ ‘ಅರ್ನ್‌ಬ್‌’ ಎಂಬ ಹೆಸರೂ ಸೇರಿದೆ.

ಈ ಚಂಡಮಾರುತ ಯಾವಾಗ ಅಪ್ಪಳಿಸುತ್ತದೆ ಎಂಬುದು ತಿಳಿದಿಲ್ಲ. ‘ಬುರೆವಿ’ ನಂತರ ಕೆಲ ಚಂಡಮಾರುತಗಳು ಅಪ್ಪಳಿಸಿದ ನಂತರ ಬರುವ ಚಂಡಮಾರುತಕ್ಕೆ ಈ ಹೆಸರು ಇರಲಿದೆ.

ಬಿಗ್‌ಬಾಸ್ ಮನೆಗೂ ತಟ್ಟಿದ 'ನಿವಾರ್' ಚಂಡಮಾರುತ ಎಫೆಕ್ಟ್; ಸ್ಪರ್ಧಿಗಳು ಬೇರೆಡೆ ಶಿಫ್ಟ್?

ಚಂಡಮಾರುತ ಏಳುವ ಸಮುದ್ರದ ಅಕ್ಕಪಕ್ಕದ ದೇಶಗಳು ಸಾಕಷ್ಟುಮೊದಲೇ ಭವಿಷ್ಯದ ಚಂಡಮಾರುತಗಳಿಗೆ ಒಂದಷ್ಟುಹೆಸರನ್ನು ಆಯ್ಕೆ ಮಾಡಿರುತ್ತವೆ.