ಬೆಂಗಳೂರು ನಂತರ ಹೈದರಾಬಾದ್‌ನಲ್ಲೂ ಸೂರ್ಯನ ಸುತ್ತ ಬಣ್ಣದುಂಗುರ
- ಸೂರ್ಯನ ಸುತ್ತ ಬಣ್ಣದುಂಗುರ
- ಹೈದರಾಬಾದ್ ಜನ ಬಾನಲ್ಲಿ ಕಂಡರು ಚಂದದ ವೃತ್ತ
ಹೈದರಾಬಾದ್ ನಿವಾಸಿಗಳು ಆಕಾಶದಲ್ಲಿ ಅಪರೂಪದ ಸೂರ್ಯನ ಪ್ರಭಾವಲಯವನ್ನು ಕಂಡು ಖುಷಿಪಟ್ಟಿದ್ದಾರೆ. ಆಹ್ಲಾದಕರ ಅದ್ಭುತವನ್ನು ನೋಡಿ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. "22-ಡಿಗ್ರಿ ವೃತ್ತಾಕಾರದ ಹ್ಯಾಲೊ" ಎಂದೂ ಕರೆಯಲ್ಪಡುವ ಇದು ಅಸಾಮಾನ್ಯ ಆಪ್ಟಿಕಲ್ ಸೌರ ಚಮತ್ಕಾರವಾಗಿದೆ.
ಸೂರ್ಯನ ಅಥವಾ ಚಂದ್ರನ ಕಿರಣಗಳು ಸಿರಸ್ ಮೋಡದಲ್ಲಿನ ಷಡ್ಭುಜೀಯ ಐಸ್ ಹರಳುಗಳ ಮೂಲಕ ವಕ್ರೀಭವನಗೊಂಡಾಗ ಇದು ಸಂಭವಿಸುತ್ತದೆ. ಇದನ್ನು ಕೆಲಿಡೋಸ್ಕೋಪಿಕ್ ಪರಿಣಾಮ ಎಂದೂ ಕರೆಯುತ್ತಾರೆ. ಚಂದ್ರನ ಸುತ್ತಲೂ ಗೋಚರಿಸಿದಾಗ, ಇದನ್ನು ಚಂದ್ರನ ಉಂಗುರ ಎಂದು ಕರೆಯಲಾಗುತ್ತದೆ.
ಸೂರ್ಯನ ಸುತ್ತ ಬಣ್ಣದುಂಗುರ: ಆಕಾಶದತ್ತ ಬೆಂಗಳೂರಿಗರ ಕಣ್ಣು: ಪೋಟೋಸ್ ವೈರಲ್
ಕಳೆದ ತಿಂಗಳು ಬೆಂಗಳೂರು ಮೇ 24 ರಂದು ಈ ಅಪರೂಪದ ಸನ್ ಹ್ಯಾಲೊ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಸೂರ್ಯನ ಸುತ್ತ ಮಳೆಬಿಲ್ಲು ಬಣ್ಣದ ಹಾಲೋ ಕಾಣಿಸಿಕೊಂಡಿದೆ. ವೈಜ್ಞಾನಿಕವಾಗಿ ವಾತಾವರಣದಲ್ಲಿ ನೀರಿನ ಹನಿಗಳು ಜಾಸ್ತಿ ಇದ್ದರೆ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಆಗುವುದೇ ಕಾಮನಬಿಲ್ಲಿಗೆ ಕಾರಣ.