- Home
- Karnataka Districts
- Bengaluru Urban
- ಸೂರ್ಯನ ಸುತ್ತ ಬಣ್ಣದುಂಗುರ: ಆಕಾಶದತ್ತ ಬೆಂಗಳೂರಿಗರ ಕಣ್ಣು: ಪೋಟೋಸ್ ವೈರಲ್
ಸೂರ್ಯನ ಸುತ್ತ ಬಣ್ಣದುಂಗುರ: ಆಕಾಶದತ್ತ ಬೆಂಗಳೂರಿಗರ ಕಣ್ಣು: ಪೋಟೋಸ್ ವೈರಲ್
ಕಳೆದ ಕೆಲ ದಿನಗಳಿಂದ ಜಿಟಿ ಜಿಟಿ ಮಳೆ ಕಂಡಿದ್ದ ಬೆಂಗಳೂರಿಗರು ಇದು ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಹೌದು ಬೆಂಗಳೂರಿನಲ್ಲಿ ಇಂದು, ಸೋಮವಾರ ಸೂರ್ಯನ ಸುತ್ತ ಮೂಡಿದ್ದ ಉಂಗುರದಂತಹ ಕಾಮನಬಿಲ್ಲು ಗೋಚರಿಸಿದೆ. ಸದ್ಯ ಇದರ ಫೋಟೋಗಳು ವೈರಲ್ ಆಗಿವೆ.

ಬೆಂಗಳೂರಿನ ಹಲವೆಡೆ ಇಂದು ಜನರು ಆಕಾಶದತ್ತ ನೋಡಿ, ಸೂರ್ಯನ ಫೋಟೋ ತೆಗೆದು ಸೋಶಿಯಲ್ ಮೀಡಿಯಾಗೆ ಹಾಕಿ ಸಂಭ್ರಮಿಸುತ್ತಿದ್ದಾರೆ.

ಇದಕ್ಕೆ ಕಾರಣವೆಂದರೆ, ಸೂರ್ಯನ ಸುತ್ತ ವಿಶೇಷವಾಗಿ ಕಾಣಿಸಿಕೊಂಡಿರುವ ಹೊಳೆಯುವ ಉಂಗುರ.

ಈ ವೃತ್ತಾಕಾರದ ಕಾಮನಬಿಲ್ಲಿಗೆ ಕಾರಣವೇನು ? ಇದು ಶುಭಸೂಚನೆಯೇ ? ಅಶುಭ ಸೂಚನೆಯೇ ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಅಸಲಿಗೆ ಇದು ಸೂರ್ಯನ ಸುತ್ತ ಕಂಡು ಬರುವ ಅಪರೂಪದ 22° ಹ್ಯಾಲೋ. ಇದು ಇಂದು ಬೆಳಗ್ಗಿನಿಂದ ಗೋಚರವಾಗಿದ್ದು, ವೃತ್ತಾಕಾರದಲ್ಲಿ ಕಾಮನ ಬಿಲ್ಲು ಕೂಡ ಗಮನ ಸೆಳೆಯಿತು

ವೈಜ್ಞಾನಿಕವಾಗಿ ವಾತಾವರಣದಲ್ಲಿ ನೀರಿನ ಹನಿಗಳು ಜಾಸ್ತಿ ಇದ್ದರೆ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಆಗುವುದೇ ಕಾಮನಬಿಲ್ಲಿಗೆ ಕಾರಣವಾಗುತ್ತದೆಂದು ಹೇಳಲಾಗುತ್ತಿದೆ.

ಸೂರ್ಯನ ಪ್ರಭಾ ವಲಯದಿಂದ ಕಿರಣಗಳು ಮಳೆ ಮೋಡವನ್ನು ಭೇದಿಸಿಕೊಂಡು ಭೂಮಿಗೆ ಬರುವಾಗ ಏಳು ಬಣ್ಣಗಳ ವೃತ್ತಾಕಾರ ಮೂಡುತ್ತದೆ.

ಈ ಅಪರೂಪದ 22° ಹ್ಯಾಲೋ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೋಡಗಳಲ್ಲಿರುವ ಮಂಜುಗಡ್ಡೆ ಹರಳುಗಳು ಸೂರ್ಯನಿಗೆ 22 ಡಿಗ್ರಿ ಅಥವಾ ಹೆಚ್ಚಿನ ಕೋನದಲ್ಲಿ ವಕ್ರೀಭವನಕ್ಕೀಡಾಗುತ್ತವೆ ಮತ್ತು ಸೂರ್ಯನ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುತ್ತವೆ.

ಈ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ಬಿಳಿಯ ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ. ಇದು ತೀರಾ ಅಪರೂಪವೇನಲ್ಲ ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು.

ಇದು ಸೂರ್ಯನ ಬೆಳಕು, ಮೋಡದಲ್ಲಿರುವ ಮಂಜುಗಡ್ಡೆಯ ಹರಳುಗಳೊಂದಿಗಿನ ಸಂವಹನದ ವೇಳೆ ಸಂಭವಿಸುವ ಬೆಳಕಿನ ಪ್ರತಿಫಲನಾತ್ಮಕ ಪ್ರಕ್ರಿಯೆ.

ಮಳೆಯ ವಾತಾವರಣವಿದ್ದಾಗ, ಭೂಮಿಯ ಮೇಲ್ಮೈಯಿಂದ 5ರಿಂದ 8 ಕಿ.ಮೀ. ಎತ್ತರದಲ್ಲಿರುವ ಹವಾಗೋಲದಲ್ಲಿ ಸಿರಸ್ ಅಥವಾ ಸಿರೋಸ್ಟ್ರೇಟಸ್ ಮೋಡಗಳು ರೂಪುಗೊಂಡಾಗ ಈ ದೃಶ್ಯ ವೈವಿಧ್ಯ ನಡೆಯುತ್ತದೆ.

ಕೆಲವರು ಇದು ಶುಭ ಅಶುಭ ಎಂಬ ರೀತಿಯಲ್ಲೂ ಚರ್ಚೆ ಮಾಡುತ್ತಿದ್ದಾರೆ.

ಕೊರೋನಾ ಸಂಕಷ್ಟ ಕಾಲದಲ್ಲೇ ಈ ವಿದ್ಯಾಮಾನ ನಡೆದಿರುವುದರಿಂದ ಜೋತಿಷ್ಯ ಶಾಸ್ತ್ರದಲ್ಲಿ ಇದರ ಉಲ್ಲೇಖಗಳೇನು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.

ಇದು ಸೂರ್ಯನ ಸುತ್ತಾ ಮಾತ್ರ ಕಾಣುವುದೇ?: ಇಲ್ಲ, ಸೂರ್ಯ, ಚಂದ್ರ ಎರಡರ ಸುತ್ತ ಈ ರೀತಿ ಉಂಗುರವನ್ನು ಕಾಣಬಹುದು. ಇದನ್ನು ಉಂಗುರ ಅನ್ನುವುದರ ಬದಲು halo ಎಂದು ಕರೆಯಲಾಗುತ್ತದೆ.