ಹೈದರಾಬಾದ್(ಆ.16)‌: ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ ಮಾತ್ರ ಇಟ್ಟುಕೊಂಡು ವಿಶಾಖಪಟ್ಟಣಕ್ಕೆ ಕಾರ್ಯಾಂಗ ರಾಜಧಾನಿಯನ್ನು ಸ್ಥಳಾಂತರಿಸುವ ಜಗನ್ಮೋಹನ ರೆಡ್ಡಿ ಸರ್ಕಾರದ ನಿರ್ಧಾರದ ವಿರುದ್ಧ ಯಥಾಸ್ಥಿತಿ ಮುಂದುವರಿಸುವಂತೆ ಆಂಧ್ರಪ್ರದೇಶ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ. ಇದರ ಬೆನ್ನಲ್ಲೇ ಕಳೆದ 14 ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಅಮರಾವತಿ ಅಭಿವೃದ್ಧಿ ಯೋಜನೆಗೆ ಮರುಚಾಲನೆ ನೀಡಲು ಜಗನ್‌ ತೀರ್ಮಾನಿಸಿದ್ದಾರೆ.

ಜನಮೆಚ್ಚಿದ ಸಿಎಂ ಜಗನ್‌ ದೇಗುಲ ನಿರ್ಮಾಣಕ್ಕೆ ಸಿದ್ಧತೆ!

2019ರ ಮೇನಲ್ಲಿ ಜಗನ್‌ ಅಧಿಕಾರ ವಹಿಸಿಕೊಂಡ ನಂತರ ಅಮರಾವತಿಯನ್ನು ಕೇವಲ ಶಾಸಕಾಂಗ ರಾಜಧಾನಿಯನ್ನಾಗಿ ಮಾತ್ರ ಮಾಡಿ ಕರ್ನೂಲನ್ನು ನ್ಯಾಯಾಂಗ ರಾಜಧಾನಿ ಎಂದು ಹಾಗೂ ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿ ಮಾಡಲು ಜಗನ್‌ ತೀರ್ಮಾನಿಸಿದ್ದರು. ಈ ಕಾರಣಕ್ಕೆ ಅಮರಾವತಿಯಲ್ಲಿನ ಸಾವಿರಾರು ಕೋಟಿ ರು. ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದ್ದರು.

ಏನಿದು ಯೋಜನೆ?

ರಾಜಧಾನಿ ಹಾಗೂ ಮೆಟ್ರೋ ನಗರದ ರೀತಿ ಅಮರಾವತಿಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವ ಯೋಜನೆ ಅದಾಗಿತ್ತು.

ಜಗನ್ ಮಾಸ್ಟರ್ ಪ್ಲಾನ್‌ಗೆ ಒಪ್ಪಿಗೆ, ಆಂಧ್ರಕ್ಕಿನ್ನು ಮೂರು ಮೂರು ರಾಜಧಾನಿ

ಆದರೆ ಶಾಸಕಾಂಗ ರಾಜಧಾನಿ ಸ್ಥಳಾಂತರ ವಿಚಾರದಲ್ಲಿ ಆ.27ರವರೆಗೆ ಹೈಕೋರ್ಟ್‌ ಯಥಾಸ್ಥಿತಿಗೆ ಆದೇಶಿಸುತ್ತಿದ್ದಂತೆಯೇ ಜಗನ್‌ ಸಭೆ ನಡೆಸಿದ್ದಾರೆ. ನಿಂತಿರುವ ಎಲ್ಲ ನಿರ್ಮಾಣ ಕಾಮಗಾರಿ ಪುನಾರಂಭಿಸಬೇಕು ಎಂದು ಸೂಚಿಸಿದ್ದಾರೆ. ಅಭಿವೃದ್ಧಿ ಕಾಮಗಾರಿ ಮುಗಿಯಲು ಇನ್ನೂ 15 ಸಾವಿರ ಕೋಟಿ ರು. ಅಗತ್ಯವಿದೆ.

1088 ಆ್ಯಂಬುಲೆನ್ಸ್‌ಗಳಿಗೆ ಒಂದೇ ದಿನ ಜಗನ್‌ ಚಾಲನೆ

‘ನಾವು ಅಮರಾವತಿಯನ್ನು ರಾಜಧಾನಿಯನ್ನಾಗಿಸಲು 34 ಸಾವಿರ ಎಕರೆ ಭೂಮಿ ನೀಡಿದ್ದೇವೆ. ಈಗಾಗಲೇ 10 ಸಾವಿರ ಕೋಟಿ ರು.ಗಳನ್ನು ಅಭಿವೃದ್ಧಿಗೆ ವ್ಯಯಿಸಲಾಗಿದೆ. ಈಗ ಇದನ್ನು ಪೂರ್ಣ ಪ್ರಮಾಣದ ರಾಜಧಾನಿ ಮಾಡದಿದ್ದರೆ ಹೇಗೆ?’ ಎಂದು ಅಮರಾವತಿ ರೈತರು ಹೈಕೋರ್ಟ್‌ ಮೊರೆ ಹೋಗಿದ್ದರು.