ಅಮರಾವತಿ(ಆ.06):  ವೈಎಸ್‌ಆರ್‌ ಜಗನ್‌ ಮೋಹನ್ ರೆಡ್ಡಿ , ಹೈದರಾಬಾದ್ ಸಿಎಂ ಆಗಿರುವ ಇವರು ಜನರ ಪ್ರೀತಿಯ ನಾಯಕ. ಜನ ಪರ ಯೋಜನೆಗಳಿಂದಲೇ ಗುರುತಿಸಿಕೊಂಡಿರುವ ಜಗನ್, ಜನರ ಭಾವನೆಗಳಿಗೆ ಸ್ಪಂದಿಸಿ ಅವರ ಕಷ್ಟಕ್ಕೆ ಮಿಡಿಯುತ್ತಾರೆ. ಸದ್ಯ ಜಗನ್‌ರವರ ಕಾರ್ಯ ವೈಖರಿಯನ್ನು ಮೆಚ್ಷಿಕೊಂಡಿರುವ ಜನ ಅವರ ಹೆಸರಲ್ಲಿ ದೇಗುಲವೊಂದನ್ನು ನಿರ್ಮಿಸಲು ಸಜ್ಜಾಗಿದ್ದಾರೆ. 

ಜಗನ್ ಮಾಸ್ಟರ್ ಪ್ಲಾನ್‌ಗೆ ಒಪ್ಪಿಗೆ, ಆಂಧ್ರಕ್ಕಿನ್ನು ಮೂರು ಮೂರು ರಾಜಧಾನಿ

ಹೌದು ಪಿಎಂ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ಅಭಿಮಾನಿಗಳು ಅವರಿಗೊಂದು ದೇಗುಲ ನಿರ್ಮಿಸಿ ನಿತ್ಯವೂ ಪೂಜೆ ಸಲ್ಲಿಸುತ್ತಿರುವ ವಿಚಾರ ಕೆಲ ತಿಂಗಳ ಹಿಂದಷ್ಟೇ ಸದ್ದು ಮಾಡಿತ್ತು. ಆದರೀಗ ಹೈದರಾಬಾದ್‌ನ ಪಶ್ಚಿಮ ಗೋದಾವರಿ ಜಿಲ್ಲೆಯ ಸಿಎಂ ಜಗನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗಾಗಿ ದೇಗುಲವೊಂದನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಇಲ್ಲಿನ ಗೋಪಾಲಪುರಂ ಮಂಡಲದ ರಾಜಂಪಾಳೆನಲ್ಲಿ ದೇಗುಲ ನಿರ್ಮಿಸಲು ಜಾಗ ಗುರುತಿಸಿದ್ದಾರೆ. 

1088 ಆ್ಯಂಬುಲೆನ್ಸ್‌ಗಳಿಗೆ ಒಂದೇ ದಿನ ಜಗನ್‌ ಚಾಲನೆ

ಇನ್ನು ಭೂಮಿ ಪೂಜೆ ನಡೆದ ಬೆನ್ನಲೇ ದೇಗುಲ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಸ್ಥಳೀಯ ವೈಸಿಪಿ ನಾಯಕ ಕುರುಕುರಿ ನಾಗೇಶ್ವರ ರಾವ್ ತಿಳಿಸಿದ್ದಾರೆ. ಮುಂದಿನ ತಿಂಗಳು ಸಪ್ಟೆಂರ್‌ನಲ್ಲಿ ಗೋಪಾಲಪುರಂನ ಶಾಸಕ ತಲಾರಿ ವೆಂಕಟರಾವ್‌ ಇಲ್ಲಿನ ಭೂಮಿ ಪೂಜೆ ನಡೆಸಲಿದ್ದಾರೆ. ಇನ್ನು ದೇಗುಲ ನಿರ್ಮಾಣದ ಬಳಿಕ ಸಿಎಂ ಜಗನ್ ಮೂರ್ತಿಯನ್ನು ಇಲ್ಲಿ ಪ್ರತಿಷ್ಟಾಪಿಸಲು ನಿರ್ಧರಿಸಲಾಗಿದೆ. ಇನ್ನು ಜಗನ್ ಮೋಹನ್ ರೆಡ್ಡಿ ಕ್ರಿಶ್ಚಿಯನ್ ಆಗಿದ್ದರೂ ಇಲ್ಲಿನ ಪೂಜಾ  ವಿಧಿ ವಿಧಾನಗಳೆಲ್ಲವೂ ಹಿಂದೂ ಸಂಪ್ರದಾಯದಂತೆ ನಡೆಯಲಿವೆ ಎನ್ನಲಾಗಿದೆ. 

ಈ ಹಿಂದೆ ವಿಶಾಖಪಟ್ಟಣಂನ ರಾಜಗೋಪಾಲಪುರಂನಲ್ಲೂ ದಿವಂಗತ ವೈಎಸ್‌ಆರ್‌ಗಾಗಿ ದೇಗುಲವೊಂದನ್ನು ನಿರ್ಮಿಸಲಾಗಿತ್ತು.