Asianet Suvarna News Asianet Suvarna News

1088 ಆ್ಯಂಬುಲೆನ್ಸ್‌ಗಳಿಗೆ ಒಂದೇ ದಿನ ಜಗನ್‌ ಚಾಲನೆ

1088 ಆ್ಯಂಬುಲೆನ್ಸ್‌ಗಳಿಗೆ ಒಂದೇ ದಿನ ಜಗನ್‌ ಚಾಲನೆ|ಕರೆ ಮಾಡಿದ 20 ನಿಮಿಷದಲ್ಲಿ ಸೇವೆ| ಪ್ರತಿ 75000 ಜನರಿಗೆ ಒಂದು ವಾಹನ

Andhra CM Jagan flags off 1088 new ambulances to strengthen AP healthcare facilities
Author
Bangalore, First Published Jul 5, 2020, 8:08 AM IST
  • Facebook
  • Twitter
  • Whatsapp

ವಿಜಯವಾಡ(ಜು.05): ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ ಸಿಗದೆ ನವಜಾತ ಶಿಶುಗಳು ಮತ್ತು ರೋಗಿಗಳ ಸಾವು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಸರ್ಕಾರ, ಏಕಕಾಲದಲ್ಲಿ 1088 ಆ್ಯಂಬುಲೆನ್ಸ್‌ಗಳನ್ನು ಸೇವೆಗೆ ಮುಕ್ತಗೊಳಿಸಿದೆ.

‘108’ ಮತ್ತು ‘104’ ತುರ್ತು ವಾಹನಗಳ ಸೇವೆಯ ಮೂಲಕ ನಗರ ಪ್ರದೇಶದಲ್ಲಿ ಕರೆ ಬಂದ 15 ನಿಮಿಷದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರೆ ಬಂದ 20 ನಿಮಿಷಗಳಲ್ಲಿ ಸೇವೆ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಯೋಜನೆ ಜಾರಿ ಬಳಿಕ ಪ್ರತಿ 75000 ಜನರಿಗೆ ಒಂದು ಆ್ಯಂಬುಲೆನ್ಸ್‌ ಲಭ್ಯವಾಗಲಿದೆ. ಈ ಯೋಜನೆಗೆ 200 ಕೋಟಿ ರು. ವೆಚ್ಚ ಮಾಡಲಾಗಿದೆ.

Andhra CM Jagan flags off 1088 new ambulances to strengthen AP healthcare facilities

‘108’ ಸಂಖ್ಯೆಯ 412 ಆ್ಯಂಬುಲೆನ್ಸ್‌ಗಳಲ್ಲಿ 26 ಅನ್ನು ವಿಶೇಷವಾಗಿ ನವಜಾತ ಶಿಶುಗಳಿಗೆಂದೇ ಮೀಸಲಿಟ್ಟಿದ್ದು, ಅದಕ್ಕೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಈ ಪೈಕಿ 102 ಆ್ಯಂಬುಲೆನ್ಸ್‌ಗಳಲ್ಲಿ ಅತ್ಯಾಧುನಿಕ ಜೀವರಕ್ಷಣಾ ವ್ಯವಸ್ಥೆ, 282ರಲ್ಲಿ ಸಾಮಾನ್ಯ ಜೀವರಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ. ಇನ್ನು ‘104’ ಸಂಖ್ಯೆಯ 676 ಮೊಬೈಲ್‌ ಮೆಡಿಕಲ್‌ ಯುನಿಟ್ಸ್‌ಗಳಲ್ಲಿ ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಆ್ಯಂಬುಲೆನ್ಸ್‌ಗಳ ಮೂಲಕ ವೈದ್ಯ ಸಿಬ್ಬಂದಿ ತಿಂಗಳಿಗೆ ಒಂದು ಬಾರಿ ಕುಗ್ರಾಮಗಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ಈ ಯೋಜನೆಯಡಿ ಆ್ಯಂಬುಲೆನ್ಸ್‌ ಚಾಲಕರ ವೇತನವನ್ನು ಪ್ರಸಕ್ತ ಇದ್ದ 10000 ರು.ನಿಂದ 18000-28000 ರು.ಗೆ, ತುರ್ತು ಆರೋಗ್ಯ ತಂತ್ರಜ್ಞರ ವೇತನವನ್ನ 12000 ರು.ನಿಂದ 20000-30000 ರು.ಗೆ ಹೆಚ್ಚಿಸಲಾಗಿದೆ.

Follow Us:
Download App:
  • android
  • ios