Asianet Suvarna News Asianet Suvarna News

ದಿಲ್ಲಿ ಮಾನ್ಸೂನ್‌ ಇಷ್ಟುತಡ: 15 ವರ್ಷದಲ್ಲಿ ಇದೇ ಮೊದಲು

  • ದೇಶದ ಹಲವು ಭಾಗ​ಗ​ಳಲ್ಲಿ ಮುಂಗಾರು ಪ್ರವೇ​ಶ​
  • ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಜನ ಬಿರುಬಿಸಿಲಿನಿಂದ ತಲ್ಲಣ
  • ದಿಲ್ಲಿಯಲ್ಲಿ 15 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಇಷ್ಟೊಂದು ವಿಳಂಬ
After 15 years Monsoon appear delayed in delhi snr
Author
Bengaluru, First Published Jul 3, 2021, 10:04 AM IST

ನವ​ದೆ​ಹ​ಲಿ (ಜು.03): ದೇಶದ ಹಲವು ಭಾಗ​ಗ​ಳಲ್ಲಿ ಮುಂಗಾರು ಪ್ರವೇ​ಶ​ವಾ​ಗಿ​ದ್ದಾಗ್ಯೂ, ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಜನ ಬಿರುಬಿಸಿಲಿನಿಂದ ತಲ್ಲಣಗೊಂಡಿದ್ದಾರೆ. ದಿಲ್ಲಿಯಲ್ಲಿ 15 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಇಷ್ಟೊಂದು ವಿಳಂಬವಾಗಿದೆ.

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌! ...

ಪಾಕಿಸ್ತಾನದಿಂದ ಬರುತ್ತಿರುವ ಬಿಸಿಗಾಳಿ ಹಾಗೂ ಉತ್ತರ ಭಾರತದಲ್ಲಿ ಮಳೆಗೆ ಪೂರಕ ವಾತಾವರಣ ಇಲ್ಲದಿರುವುದೇ ಇದಕ್ಕೆ ಈ ಭಾಗದಲ್ಲಿ ಉಷ್ಣತೆ ಹೆಚ್ಚಲು ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ರಾಜ್ಯದಲ್ಲಿ ವರುಣನ ಅಬ್ಬರ: ಡ್ಯಾಂಗಳಿಗೆ ಭಾರೀ ನೀರು ...

ವಿಶ್ವ​ದಲ್ಲೇ ಅತಿ​ಹೆಚ್ಚು ಜನ​ಸಂಖ್ಯೆ ಹೊಂದಿದ 2ನೇ ದೇಶ​ವಾದ ಭಾರ​ತ​ದಲ್ಲಿ 2010 ಈವ​ರೆಗೆ 6500 ಮಂದಿ ಬಿಸಿಗಾಳಿಗೆ ಬಲಿಯಾಗಿದ್ದಾರೆ.

ನವ​ದೆ​ಹಲಿ, ರಾಜ​ಸ್ಥಾನ ಮತ್ತು ಹರಾರ‍ಯಣ ರಾಜ್ಯ​ಗ​ಳಲ್ಲಿ ಸತತ 4ನೇ ದಿನ​ವಾದ ಶುಕ್ರ​ವಾರ 40 ಡಿಗ್ರಿ​ ಸೆಲ್ಸಿ​ಯ​ಸ್‌​ಗಿಂತ ಹೆಚ್ಚು ತಾಪ​ಮಾನ ದಾಖ​ಲಾ​ಗಿದೆ. ಇನ್ನು ಬಿಸಿ​ಲಿನ ಬೇಗೆಗೆ ಪಂಜಾಬ್‌, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯ​ಗಳು ಸಹ ತತ್ತರಿಸಿ ಹೋಗಿವೆ.

Follow Us:
Download App:
  • android
  • ios