ಭಾರತ ವಿರೋಧಿ ಚಟುವಟಿಕೆಗೆ ಅಫ್ಘಾನ್ ಬಳಕೆಯಾಗಬಾರದು: ಜೈಶಂಕರ್!
ಭಯೋತ್ಪಾದನೆ ಚಟುವಟಿಕೆ, ಭಾರತ ವಿರೋಧಿ ಚಟುವಟಿಕೆ ಹತ್ತಿಕ್ಕಲು ಭಾರತ ನಿರಂತರ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವ ಸಂಸ್ಥೆಯ ಶಾಂತಿ ಹಾಗೂ ಸಂಸ್ಕ್ರತಿ ವೇದಿಕೆಯಲ್ಲಿ ಭಾರತ ಉಗ್ರ ಚಟುವಟಿಕೆ ವಿರುದ್ಧ ಬಹುದೊಡ್ಡ ಮಟ್ಟದಲ್ಲಿ ದನಿ ಎತ್ತಿದೆ. ಇದೀಗ ಅಫ್ಘಾನಿಸ್ತಾನ ಶಾಂತಿ ಮಾತುಕತೆಯಲ್ಲಿ ಆಫ್ಘಾನ್ ಮಣ್ಣಿಲ್ಲಿ ಭಾರತ ವಿರೋಧಿ ಚಟುವಟಿಕೆಗೆ ಆಸ್ಪದ ನೀಡಬಾರದು ಎಂದು ಒತ್ತಾಯಿಸಿದೆ.
ನವದೆಹಲಿ(ಸೆ.12): ಆಫ್ಘಾನಿಸ್ತಾನ ನೆಲದಲ್ಲಿ ಯಾವುದೇ ರೀತಿ ಭಾರತ ವಿರೋಧಿ ಚಟುವಟಿಕೆಗೆ ಆಸ್ಪದ ನೀಡಬಾರದು ಎಂಬುದು ಆಫ್ಘಾನ್ ಮೇಲೆ ನಮ್ಮ ನಿರೀಕ್ಷೆಯಾಗಿದೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದಾರೆ. ದೋಹಾದಲ್ಲಿ ನಡೆದ ಆಫ್ಘಾನಿಸ್ತಾನ ಶಾಂತಿ ಮಾತುಕತೆಯಲ್ಲಿ ವಿಡಿಯೋ ಕಾನ್ಪೆರನ್ಸ್ ಮೂಲಕ ಪಾಲ್ಗೊಂಡ ಜೈಶಂಕರ್ ಭಯೋತ್ಪಾದನೆ ವಿರುದ್ಧ ಆಫ್ಘಾನಿಸ್ತಾನ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.
ಲಡಾಖ್ ಬಿಕ್ಕಟ್ಟಿಗೆ ನಾಡಿದ್ದು ಪರಿಹಾರ? ಚೀನಾದೊಂದಿಗೆ ಮಾತುಕತೆ
ಆಫ್ಘಾನಿಸ್ತಾನ ಹಾಗೂ ಭಾರತ ನಡುವಿನ ನಾಗರೀಕ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ. ಭಾರತ ಹಾಗೂ ಆಫ್ಘಾನ್ ರಾಜತಾಂತ್ರಿಕ ಸಂಬಂಧಕ್ಕಿಂತ ಮೊದಲೇ ಇತಿಹಾಸದಲ್ಲೂ ನಮ್ಮ ಸಂಬಂಧ ಗಟ್ಟಿಯಾಗಿತ್ತು ಎಂದು ಜೈಶಂಕರ್ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಶಾಂತಿಸ್ಥಾಪನೆಗೆ ಆಫ್ಘಾನ್ ಜನತೆಯ, ಆಫ್ಘಾನ್ ಮುಂದಾಳತ್ವದ, ಆಫ್ಘಾನ್ ನಿಯಂತ್ರಿತ ಪ್ರದೇಶವಾಗಿರಬೇಕು. ಇದರಲ್ಲಿ ಇತರ ಸಂಘಟನೆಗಳ ಕೈವಾಡವಿರಬಾರದು. ಇದೇ ವೇಳೆ ಅಲ್ಪಸಂಖ್ಯಾತರು, ಮಹಿಳೆಯರಿಗೆ ಮೂಲಭೂತ ಹಕ್ಕು, ಸ್ವಾತಂತ್ರ್ಯ ನೀಡಬೇಕು ಎಂದು ಜೈಶಂಕರ್ ಹೇಳಿದ್ದಾರೆ.