Asianet Suvarna News Asianet Suvarna News

ಉಕ್ರೇನ್‌ನಿಂದ ಮರಳಿದ್ದ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಉಜ್ಬೇಕ್‌ನಲ್ಲಿ ಶಿಕ್ಷಣ

2021ರಲ್ಲಿ  ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಸಮಯದಲ್ಲಿ ಉಕ್ರೇನ್‌ ಬಿಟ್ಟು ಬಂದಿದ್ದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 1,000ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಜ್ಬೇಕಿಸ್ತಾನ್‌ ನೆರವಾಗಿದೆ.

Admission in Uzbek for MBBS students who have returned from Ukraine akb
Author
First Published Nov 17, 2023, 9:48 AM IST

ಸಮರ್ಕಂಡ್‌: 2021ರಲ್ಲಿ  ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಸಮಯದಲ್ಲಿ ಉಕ್ರೇನ್‌ ಬಿಟ್ಟು ಬಂದಿದ್ದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 1,000ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಜ್ಬೇಕಿಸ್ತಾನ್‌ ನೆರವಾಗಿದೆ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು, ಮುಂದುವರೆಸಲಾಗದ ಸ್ಥಿತಿಯಲ್ಲಿದ್ದ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಉಜ್ಬೇಕಿಸ್ತಾನ್‌ನ ಸಮರ್ಕಂಡ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯವು ಶಿಕ್ಷಣ ಮುಂದುವರೆಸಲು ಪ್ರವೇಶಾತಿ ನೀಡಿ ಅವಕಾಶ ಕಲ್ಪಿಸಿಕೊಟ್ಟಿದೆ.

ಉಕ್ರೇನ್‌ನಲ್ಲಿರುವ (Ukraine) ಭಾರತೀಯ ರಾಯಭಾರ (Indian Embassy) ಕಚೇರಿಯು ವಿದ್ಯಾರ್ಥಿಗಳ ಶಿಕ್ಷಣ (Education) ಮುಂದುವರೆಸುವ ಅವಕಾಶದ ಬಗ್ಗೆ ಕೇಳಿದಾಗ ವಿವಿಯು ಸಕಾರಾತ್ಮಕವಾಗಿ ಸ್ಪಂದಿಸಿದೆ. ಉಕ್ರೇನ್‌ ವಿವಿಯು, ವಿದ್ಯಾರ್ಥಿಗಳಿಗೆ ವರ್ಗಾವಣೆ ನೀಡಿದೆ. ರಷ್ಯಾದ ಯುದ್ಧದಿಂದ ನಲುಗಿದ್ದ ಉಕ್ರೇನ್‌ನಲ್ಲಿದ್ದ ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಆರಂಭಿಸಿದ್ದ 'ಆಪರೇಷನ್‌ ಗಂಗಾ' (Operation Ganga)ಯೋಜನೆಯಡಿ 18,282 ಭಾರತೀಯ ಪ್ರಜೆಗಳನ್ನು ಕರೆತರಲಾಗಿತ್ತು. ಈ ಪೈಕಿ ಬಹುತೇಕರು ವಿದ್ಯಾರ್ಥಿಗಳೇ ಆಗಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಮೂಲದ ದೀಪಿಕಾ ಕೈದಾಳ ಜಯರಾಮಯ್ಯ, 'ಇತಿಹಾಸದ ಪುಟಗಳಲ್ಲಷ್ಟೇ ಓದಿದ್ದ ಯುದ್ಧ ನಮ್ಮ ಕಣ್ಣ ಮುಂದೆಯೇ ನಡೆದಿದ್ದನ್ನು ನಾವು ಉಕ್ರೇನ್‌ನಲ್ಲಿ ನೋಡಿದ್ದೆವು. ಸದ್ಯಕ್ಕೆ ಅಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದು ಸಾಧ್ಯವಿಲ್ಲ ಎಂದು ಖಚಿತವಾದ ಹಿನ್ನೆಲೆಯಲ್ಲಿ ನಾವು ಉಜ್ಬೇಕಿಸ್ತಾನ ಆಯ್ಕೆ ಮಾಡಿಕೊಂಡಿದ್ದೇವೆ. ಯುದ್ಧ ನಡೆಯುತ್ತಿರುವ ದೇಶದಿಂದ ಶಾಂತಿಯುತ ದೇಶಕ್ಕೆ ತೆರಳುವುದು ನಮ್ಮ ಆದ್ಯತೆಯಾಗಿತ್ತು' ಎಂದು ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ನಿಜವಾಗಿಯೂ ಮೃತಪಟ್ಟಿದ್ದಾರಾ? ಸಾವು ಘೋಷಿಸಿದ್ದ ವೈದ್ಯರಿಗೆ ಗೃಹ ಬಂಧನ?

ಇನ್ನು ಕಲೆ ವಿದ್ಯಾರ್ಥಿಗಳು ಉಕ್ರೇನ್‌ಗಿಂತ ಉಜ್ಬೇಕಿಸ್ತಾನ್‌ನಲ್ಲಿ (Uzbekistan) ಖರ್ಚು ವೆಚ್ಚಗಳು ಹೆಚ್ಚಾಗಿವೆಯೆಯಾದರೂ ಅರ್ಧಕ್ಕೆ ನಿಂತ ನಮ್ಮ ಶಿಕ್ಷಣ ಮುಂದುರೆಯುತ್ತಿರುವುದೇ ನಮಗೆ ಖುಷಿ' ಎಂದಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕ್ಷೇಮ, ಕ್ರೆಮ್ಲಿನ್‌ ವಕ್ತಾರರ ಮಾಹಿತಿ!

Follow Us:
Download App:
  • android
  • ios