ಚೀನಾಗೆ ಭಾರತದ ಕೋವಿಡ್ ಲಸಿಕೆ ಮಾರಾಟಕ್ಕೆ ಚಿಂತನೆ
ಇಂಥದ್ದರ ನಡುವೆ ಚೀನಾಗೆ ಸಹಾಯಹಸ್ತ ಚಾಚಲು ಮುಂದಾಗಿರುವ ಭಾರತದ ಸೀರಂ ಇನ್ಸ್‌ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ(Adar Poonawala), ತಮ್ಮ ಯಶಸ್ವಿ ಕೋವಿಡ್ ಲಸಿಕೆಯಾದ ‘ಕೋವಿಶೀಲ್ಡ್’ ಅಥವಾ ‘ಕೋವೋವ್ಯಾಕ್ಸ್’ ಅನ್ನು ಚೀನಾಗೆ ನೀಡುವ ಆಫರ್ ಮುಂದಿಟ್ಟಿದ್ದಾರೆ.
ದಾವೋಸ್: ಚೀನಾ ದೇಶವು ಹೊಸ ಕೋವಿಡ್ ಅಲೆಯಿಂದ ತತ್ತರಿಸುತ್ತಿದ್ದು, ನಿತ್ಯ ಸಾವಿರಾರು ಜನರು ಸೋಂಕಿತರಾಗಿ ಸಾವನ್ನಪ್ಪುತ್ತಿದ್ದಾರೆ. ಚೀನಾ ಲಸಿಕೆಗಳೂ ಪರಿಣಾಮಕಾರಿ ಆಗಿಲ್ಲ. ಇಂಥದ್ದರ ನಡುವೆ ಚೀನಾಗೆ ಸಹಾಯಹಸ್ತ ಚಾಚಲು ಮುಂದಾಗಿರುವ ಭಾರತದ ಸೀರಂ ಇನ್ಸ್‌ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ(Adar Poonawala), ತಮ್ಮ ಯಶಸ್ವಿ ಕೋವಿಡ್ ಲಸಿಕೆಯಾದ ‘ಕೋವಿಶೀಲ್ಡ್’ ಅಥವಾ ‘ಕೋವೋವ್ಯಾಕ್ಸ್’ ಅನ್ನು ಚೀನಾಗೆ ನೀಡುವ ಆಫರ್ ಮುಂದಿಟ್ಟಿದ್ದಾರೆ.
ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪೂನಾವಾಲಾ, ಈ ಬಗ್ಗೆ ಚೀನಾ ಜತೆ ಮಾತುಕತೆ ನಡೆಸಿ ಆಫರ್ ಇರಿಸಿದ್ದಾಗಿ ಹೇಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಹಾಗೂ ತಪ್ಪು ಕಲ್ಪನೆ ಮರೆತು ವಿದೇಶಿ ಲಸಿಕೆಗಳನ್ನು ಬೂಸ್ಟರ್ ಡೋಸ್ ಆಗಿ ಕೊಂಡುಕೊಳ್ಳಿ ಎಂದು ಚೀನಾಗೆ ನಾವು ಮನವಿ ಮಾಡಿದ್ದು, ಮಾತುಕತೆ ನಡೆಸಿದ್ದೇವೆ. ಇಂದು ಚೀನಾ ಕೋವಿಡ್ ಅಲೆಗೆ ತುತ್ತಾಗಿದ್ದು, ಚೀನಾ ಇದರಿಂದ ಹೊರಬರುವುದು ವಿಶ್ವದ ಪಾಲಿಗೂ ಒಳ್ಳೆಯದು. ಜಗತ್ತು ಈ ಹಿಂದಿನಂತೆ ವಸ್ತುಗಳ ವಿನಿಮಯಕ್ಕೆ ಮುಂದಾಗಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜನಸಂಖ್ಯೆ 70 ವರ್ಷದಲ್ಲೇ ಮೊದಲ ಬಾರಿ ಚೀನಾದಲ್ಲಿ ಇಳಿಕೆ
ಇದಕ್ಕೆ ಚೀನಾ ಪ್ರತಿಕ್ರಿಯೆ ಏನು?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಈ ಬಗ್ಗೆ ಚಿಂತಿಸುತ್ತಿದ್ದು, ಉತ್ತಮ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ’ ಎಂದರು. ಅಲ್ಲದೆ, ‘ಒಮಿಕ್ರೋನ್ ವಿರುದ್ಧ ನಮ್ಮದೇ ಸಹಭಾಗಿತ್ವದ ಉತ್ಪಾದನೆಯಾದ ಅಮೆರಿಕ ಲಸಿಕೆ ಕೋವೊವ್ಯಾಕ್ಸ್ (Covovax) ಉತ್ತಮ ಫಲಿತಾಂಶ ನೀಡಿದೆ. ಕೋವಿಶೀಲ್ಡ್‌ಗಿಂತ 2-3 ಪಟ್ಟು ಉತ್ತಮ ಫಲಿತಾಂಶ ನೀಡಿದೆ. ಶೀಘ್ರ ಭಾರತದಲ್ಲೂ ಕೋವೋವ್ಯಾಕ್ಸ್ 200-300 ರು.ಗೆ ಲಭ್ಯ ಇರಲಿದೆ’ ಎಂದರು.
35 ದಿನದಲ್ಲಿ 60,000 ಸಾವು, ಈ ತಿಂಗಳಲ್ಲಿ ಬೀಜಿಂಗ್ ಸಂಪೂರ್ಣ ನಿವಾಸಿಗಳಿಗೆ ಕೋವಿಡ್ ಸೋಂಕು!
ದೇಶದಲ್ಲಿ ಕೇವಲ 89 ಕೋವಿಡ್ ಕೇಸು
ನೆರೆಯ ಚೀನಾದಲ್ಲಿ ಕೋವಿಡ್ ಅಬ್ಬರಿಸುತ್ತಿದ್ದರೂ ಭಾರತದಲ್ಲಿ ಕೊರೋನಾ ಪ್ರಕರಣಗಳ ಇಳಿಕೆ ಹಾದಿ ಮುಂದುವರಿದಿದೆ. ದೇಶದಲ್ಲಿ ಸುಮಾರು 3 ವರ್ಷಗಳ ಬಳಿಕ ಅತಿ ಕನಿಷ್ಠ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಯಲ್ಲಿ ಒಟ್ಟು 89 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು 2020ರ ಮಾರ್ಚ್ 27ರ ಬಳಿಕ ದಾಖಲಾದ ಅತಿ ಕಡಿಮೆ ಪ್ರಮಾಣವಾಗಿದೆ. ಇದೇ ವೇಳೆ ಯಾವುದೇ ಸೋಂಕಿತರ ಸಾವು ದಾಖಲಾಗಿಲ್ಲ.
ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,035ಕ್ಕೆ ಇಳಿಕೆಯಾಗಿದ್ದು ಚೇತರಿಕೆಯ ಪ್ರಮಾಣ 98.80% ರಷ್ಟುದಾಖಲಾಗಿದೆ. ಹಾಗೂ ದೈನಂದಿನ ಮತ್ತು ವಾರದ ಪಾಸಿಟಿವಿಟಿ ದರವು ಕ್ರಮವಾಗಿ 0.05% ಹಾಗೂ 0.09% ರಷ್ಟುದಾಖಲಾಗಿವೆ. ಈವರೆಗೆ ದೇಶದಲ್ಲಿ ಒಟ್ಟು 4.46 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಒಟ್ಟು 220.17 ಕೋಟಿ ಕೋವಿಡ್ ಡೋಸ್ ಲಸಿಕೆಗಳ ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.