ಕಾಂಗ್ರೆಸ್‌ ಪಕ್ಷವು ಉತ್ತರ ಪ್ರದೇಶದ ಹಸ್ತಿನಾಪುರದಿಂದ ‘ಮಿಸ್‌ ಬಿಕಿನಿ ಇಂಡಿಯಾ’ ಆಗಿದ್ದ ಅರ್ಚನಾ ಗೌತಮ್‌ ಅವರಿಗೆ ಟಿಕೆಟ್‌ ನೀಡಿದ್ದು ವಿವಾದ ಸೃಷ್ಟಿಸಿದೆ. ಕಾಂಗ್ರೆಸ್‌ ನಡೆಗೆ ಬಿಜೆಪಿ ಹಾಗೂ ಹಿಂದೂ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಮೇರಠ್‌ (ಜ. 16): ಕಾಂಗ್ರೆಸ್‌ ಪಕ್ಷವು (Congress) ಉತ್ತರ ಪ್ರದೇಶದ ಹಸ್ತಿನಾಪುರದಿಂದ (Hastinapur) ‘ಮಿಸ್‌ ಬಿಕಿನಿ ಇಂಡಿಯಾ’ (Miss Bikini India) ಆಗಿದ್ದ ಅರ್ಚನಾ ಗೌತಮ್‌ (Archana Gautam) ಅವರಿಗೆ ಟಿಕೆಟ್‌ (Ticket) ನೀಡಿದ್ದು ವಿವಾದ (Controversy) ಸೃಷ್ಟಿಸಿದೆ. ಕಾಂಗ್ರೆಸ್‌ ನಡೆಗೆ ಬಿಜೆಪಿ (BJP) ಹಾಗೂ ಹಿಂದೂ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಟಿಕೆಟ್‌ ನೀಡಿಕೆಯನ್ನು ಅರ್ಚನಾ ಹಾಗೂ ಕಾಂಗ್ರೆಸ್ಸಿಗರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆಯೇ ಮಮತಾ ಬಿಕಿನಿ ಧರಿಸಿರುವ ಫೋಟೋ ವೈರಲ್‌ (Viral) ಆಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಾಗೂ ಹಿಂದೂ ಮಹಾಸಭಾ, ‘ಕಾಂಗ್ರೆಸ್ಸಿಗರಿಗೆ ಅಭ್ಯರ್ಥಿಗಳು ಸಿಗುತ್ತಿಲ್ಲ. ಹೀಗಾಗಿ ಅದು ಚೀಪ್‌ ಗಿಮಿಕ್‌ ಮಾಡುತ್ತಿದೆ. ಹಸ್ತಿನಾಪುರದಂಥ ಕ್ಷೇತ್ರದಲ್ಲಿ ಸಂಸ್ಕೃತಿಯ ಬಗ್ಗೆ ಗೌರವ ಇರುವವರಿಕೆ ಟಿಕೆಟ್‌ ನೀಡದೇ ಕೇವಲ ಮತಗಳಿಕೆಯ ಉದ್ದೇಶದಿಂದ ಅರ್ಚನಾಗೆ ಟಿಕೆಟ್‌ ನೀಡಲಾಗಿದೆ. ರಾಜಕೀಯದ ಗಂಧಗಾಳ ಕೂಡ ಆಕೆಗೆ ಗೊತ್ತಿಲ್ಲ’ ಎಂದು ಕಿಡಿಕಾರಿವೆ.

ಆದರೆ, ‘2014ರಲ್ಲಿ ನಾನು ಮಿಸ್‌ ಉತ್ತರಪ್ರದೇಶ ಆಗಿದ್ದೆ. 2018ರಲ್ಲಿ ಮಿಸ್‌ ಬಿಕಿನಿ ಇಂಡಿಯಾ ಆದೆ. 2018ರಲ್ಲಿ ಮಿಸ್‌ ಕಾಸ್ಮೋ ವರ್ಲ್ಡ್ ಅದೆ. ಆದರೆ ಈಗ ಸಮಾಜಸೇವೆ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಕಲಾವಿದರು ರಾಜಕೀಯಕ್ಕೆ ಬರಬಾರದೇ? ಕೇಂದ್ರದಲ್ಲಿ ನಟಿಯರು ಸಚಿವರಾಗಿಲ್ಲವೇ? ವೃತ್ತಿಗೂ ರಾಜಕೀಯಕ್ಕೂ ತಳಕು ಹಾಕಬಾರದು’ ಎಂದು ಅರ್ಚನಾ ಪ್ರಶ್ನಿಸಿದ್ದಾರೆ.

UP Elections: ಇದು ಡಿಜಿಟಲ್ ಯುಗದ ಚುನಾವಣೆ, ಪ್ರಚಾರದ ವೈಖರಿಯೇ ಬದಲು!

125 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಉನ್ನಾವೋ ಸಂತ್ರಸ್ತೆ ತಾಯಿ ಹಲವರಿಗೆ ಕಾಂಗ್ರೆಸ್ ಟಿಕೆಟ್!: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 125 ಅಭ್ಯರ್ಥಿಗಳನ್ನು ಹೆರಸು ಘೋಷಿಸಲಾಗುತ್ತಿದ್ದು, ಈ ಪೈಕಿ 50 ಮಂದಿ ಮಹಿಳೆಯರಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಪಂಖೂರಿ ಪಾಠಕ್ ನೋಯ್ಡಾದಿಂದ ಟಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ ಕಾಂಗ್ರೆಸ್ ತನ್ನ ಪಟ್ಟಿಯಲ್ಲಿ ನಟಿ ಮತ್ತು ಕೆಲವು ಮಹಿಳಾ ಪತ್ರಕರ್ತರಿಗೆ ಅವಕಾಶ ನೀಡಿದೆ.

40ರಷ್ಟು ಮಹಿಳೆಯರಿಗೆ ಟಿಕೆಟ್: ಮೊದಲ ಪಟ್ಟಿಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಮಹಿಳೆಯರ ಹೆಸರನ್ನು ಘೋಷಿಸಿದ ಪ್ರಿಯಾಂಕಾ ಗಾಂಧಿ, ಈ ಎಲ್ಲಾ ಮಹಿಳೆಯರು ಸ್ಪರ್ಧಿಸುತ್ತಿದ್ದಾರೆಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಲ್ಲದೆ 125 ಅಭ್ಯರ್ಥಿಗಳ ಪಟ್ಟಿಯಲ್ಲಿ 50 ಮಂದಿ ಮಹಿಳೆಯರಿದ್ದಾರೆ. ಇಡೀ ರಾಜ್ಯದಲ್ಲಿ ಹೆಣಗಾಡುವ ಮತ್ತು ಹೊಸ ರಾಜಕೀಯಕ್ಕೆ ನಾಂದಿ ಹಾಡುವ ಅಭ್ಯರ್ಥಿಗಳು ಇರಬೇಕು ಎಂದು ನಾವು ಪ್ರಯತ್ನಿಸಿದ್ದೇವೆ ಎಂದೂ ಈ ವೇಳೆ ತಿಳಿಸಿದ್ದಾರೆ.

UP assembly election 2022: ಕಾಂಗ್ರೆಸ್‌ಗೆ ಸೊನ್ನೆ, ದೀದಿ ಮೈತ್ರಿಗೆ ಬಹಿರಂಗ ಆಹ್ವಾನವಿತ್ತ ಅಖಿಲೇಶ್

ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಅವಕಾಶ: ನಮ್ಮ ಉನ್ನಾವೋ ಅಭ್ಯರ್ಥಿಯು ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಅವರ ಹೋರಾಟ ಮುಂದುವರಿಸಲು ಅವಕಾಶ ನೀಡಿದ್ದೇವೆ. ಯಾವ ಅಧಿಕಾರದ ಮೂಲಕ ತನ್ನ ಮಗಳನ್ನು ದಬ್ಬಾಳಿಕೆಗೆ ಒಳಪಡಿಸಿತ್ತೋ, ಅವಳ ಸಂಸಾರ ಹಾಳಾಯಿತು, ಅವರಿಗೂ ಅದೇ ಅಧಿಕಾರ ಸಿಗಬೇಕು.

ಸೋನಭದ್ರ ಹತ್ಯಾಕಾಂಡದ ಸಂತ್ರಸ್ತರಲ್ಲಿ ಒಬ್ಬರಾದ ರಾಮರಾಜ್ ಗೊಂಡ ಅವರಿಗೂ ಟಿಕೆಟ್ ನೀಡಿದ್ದೇವೆ. ಅಂತೆಯೇ, ಕೊರೋನಾ ಹೋರಾಟದಲ್ಲಿ ಶ್ರಮಪಟ್ಟ ಆಶಾ ಕಾರ್ಯಕರ್ತರನ್ನು ಹೀನಾಯವಾಗಿ ನೋಡಲಾಯ್ತು, ಥಳಿಸಲಾಯ್ತು. ಇವರಲ್ಲಿ ಒಬ್ಬರಾದ ಪೂನಂ ಪಾಂಡೆಗೂ ಟಿಕೆಟ್ ನೀಡಿದ್ದೇವೆ ಎಂದು ಘೋಷಿಸಲಾಗಿದೆ.