ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ. ರಾಮಚಂದ್ರನ್‌ ಅವರು ಜನಸೇವೆ ಮಾಡುವ ತಮ್ಮ ಗುರಿಯನ್ನು ಸಾಧಿಸಲು ಶಾಸಕರಾಗಿ ಇದ್ದುಕೊಂಡೇ ಸಿನಿಮಾದಲ್ಲಿ ನಟಿಸಿದ್ದರು| ರಾಜಕೀಯಕ್ಕೆ ಅಡ್ಡಿಯಾದರೆ ಸಿನಿಮಾರಂಗ ತ್ಯಜಿಸಲು ಸಿದ್ಧ!

ಕೊಯಮತ್ತೂರು(ಏ.05): ಒಂದು ವೇಳೆ ತಾವು ಸಿನಿಮಾದಲ್ಲಿ ನಟಿಸುವುದರಿಂದ ರಾಜಕೀಯ ವೃತ್ತಿ ಬದುಕಿಗೆ ತೊಂದರೆ ಆಗುವುದಾದರೆ ನಟನೆಯನ್ನು ತ್ಯಜಿಸಲು ಸಿದ್ಧವಿದ್ದೇನೆ ಎಂದು ನಟ ಕಮಲ್‌ ಹಾಸನ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ. ರಾಮಚಂದ್ರನ್‌ ಅವರು ಜನಸೇವೆ ಮಾಡುವ ತಮ್ಮ ಗುರಿಯನ್ನು ಸಾಧಿಸಲು ಶಾಸಕರಾಗಿ ಇದ್ದುಕೊಂಡೇ ಸಿನಿಮಾದಲ್ಲಿ ನಟಿಸಿದ್ದರು. ರಾಜಕೀಯದಿಂದ ತಟಸ್ಥರಾಗಿ ಉಳಿದ ನಟರ ಪೈಕಿ ನಟರ ಪೈಕಿ ನಾನೂ ಒಬ್ಬನಾಗಿದ್ದೆ.

ಆದರೆ, ಅನಿವಾರ್ಯವಾಗಿ ರಾಜಕೀಯಕ್ಕೆ ಪ್ರವೇಶಿಸಬೇಕಾಗಿ ಬಂತು. ರಾಜಕೀಯ ಎನ್ನುವುದು ಜನಸೇವೆಗಾಗಿ ಇರುವಂಥದ್ದು. ಒಂದು ವೇಳೆ ಸಿನಿಮಾದಲ್ಲಿನ ನಟನೆಯಿಂದ ರಾಜಕೀಯ ವೃತ್ತಿ ಬದುಕಿಗೆ ತೊಂದರೆ ಆದರೆ ಅದನ್ನು ತ್ಯಜಿಸಲು ಸಿದ್ಧನಿದ್ದೇನೆ. ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ತಿಗೊಳಿಸಿದ ಬಳಿಕ ಮತ್ತೆ ಬಣ್ಣ ಹಚ್ಚುವುದಿಲ್ಲ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ