ಮನೆಯ ಕೆಲಸಗಳನ್ನು ವೇತನವಿರುವ ವೃತ್ತಿಯಾಗಿ ಗುರುತಿಸಲು ನಟ-ರಾಜಕಾರಣಿ ಕಮಲ್ ಹಾಸನ್ ನೀಡಿದ ಪ್ರಸ್ತಾಪವನ್ನು ನಟಿ ಕಂಗನಾ ರಣಾವತ್ ವಿರೋಧಿಸಿದ್ದಾರೆ. ಇದು ಮನೆಯ ಮಾಲೀಕರನ್ನು ಉದ್ಯೋಗಿಯಾಗಿ ಕೆಳಗಿಳಿಸುವುದು ಮತ್ತು ಅವರ ಸೃಷ್ಟಿಗೆ ದೇವರಿಗೆ ಪೇಮೆಂಟ್ ಮಾಡಲು ಪ್ರಯತ್ನಿಸುವಂತಿದೆ ಎಂದು ಕಂಗನಾ ಟೀಕಿಸಿದ್ದಾರೆ.

ಹೌಸ್‌ ವೈಫ್‌ಗಳಿಗೂ ಸಂಬಳ ನೀಡಬೇಕೆಂದ ಕಮಲ ಹಾಸನ್ ಪ್ರಸ್ತಾಪಕ್ಕೆ ಬಾಲಿವುಡ್ ಕ್ವೀನ್ ಫುಲ್ ಸಿಟ್ಟಾಗಿದ್ದಾರೆ. ನಮ್ಮ ಪ್ರೀತಿಯೊಂದಿಗೆ ನಾವು ಹೊಂದಿರುವ ಲೈಂಗಿಕತೆಗೆ ಬೆಲೆ ನಿಗದಿಪಡಿಸಬೇಡಿ, ನಮ್ಮ ತಾಯ್ತನಕ್ಕೆ ನಮಗೆ ಹಣ ನೀಡಬೇಡಿ, ನಮ್ಮ ಸ್ವಂತ ಪುಟ್ಟ ಸಾಮ್ರಾಜ್ಯ ನಮ್ಮ ಮನೆಯ ರಾಣಿಯಾಗಲು ನಮಗೆ ಸಂಬಳ ಅಗತ್ಯವಿಲ್ಲ, ಎಲ್ಲವನ್ನೂ ವ್ಯವಹಾರವಾಗಿ ನೋಡುವುದನ್ನು ನಿಲ್ಲಿಸಿ. ನಿಮ್ಮ ಮಹಿಳೆಗೆ ಶರಣಾಗಿ. ನಿಮ್ಮ ಪ್ರೀತಿ / ಗೌರವ / ಸಂಬಳ ಮಾತ್ರವಲ್ಲದೆ ನಿಮ್ಮದೆಲ್ಲವೂ ಆಕೆಗೆ ಬೇಕು ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

 

ಸಂಸದ ಶಶಿ ತರೂರ್  "ಮನೆಕೆಲಸವನ್ನು ಸಂಬಳದ ವೃತ್ತಿಯೆಂದು ಗುರುತಿಸುವ ಕಮಲ್ ಹಾಸನ್ ಅವರ ಕಲ್ಪನೆಯನ್ನು ನಾನು ಸ್ವಾಗತಿಸುತ್ತೇನೆ, ಗೃಹಿಣಿಯರಿಗೆ ಮಾಸಿಕ ವೇತನವನ್ನು ನೀಡುವ ರಾಜ್ಯ ಸರ್ಕಾರ ಮಹಿಳಾ ಸೇವೆಗಳನ್ನು ಗುರುತಿಸುತ್ತದೆ. ಸಮಾಜದಲ್ಲಿ ಗೃಹಿಣಿಯರು, ಅವರ ಶಕ್ತಿ ಮತ್ತು ಸ್ವಾಯತ್ತತೆಯನ್ನು ಹೆಚ್ಚಿಸಿ ಮತ್ತು ಸಾರ್ವತ್ರಿಕ ಮೂಲ ಆದಾಯವನ್ನು ಸೃಷ್ಟಿಸುತ್ತಾರೆ ಎಂದು ಟ್ವೀಟ್ ಮಾಡಿದ್ದರು.

ಈ ವಿಚಾರದ ವಿರುದ್ಧ ಕಂಗನಾ ಪ್ರತ್ಯೇಕ ಟ್ವೀಟ್‌ ಮಾಡಿ ಮನೆ ಮಾಲೀಕರನ್ನು ಮನೆ ಉದ್ಯೋಗಕ್ಕೆ ಇಳಿಸುವುದು ಕೆಟ್ಟದಾಗಿದೆ, ತಾಯಂದಿರ ತ್ಯಾಗ ಮತ್ತು ಜೀವಮಾನದ ಅಚಲವಾದ ಬದ್ಧತೆಗೆ ಬೆಲೆ ನಿಗದಿಪಡಿಸುವುದು ಅತ್ಯಂತ ಕೆಟ್ಟದ್ದು. ಈ ಸೃಷ್ಟಿಗಾಗಿ ನೀವು ದೇವರಿಗೇ ಪಾವತಿಸಲು ಬಯಸಿದಂತಾಗುತ್ತದೆ ಎಂದಿದ್ದಾರೆ.