ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ಪೂರ್ಣವಾದ ಹಿನ್ನೆಲೆ ಇಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಟ ಸಲ್ಮಾನ್‌ ಖಾನ್‌ ಭಾಗಿಯಾಗಿದ್ದರು. ಈ ವೇಳೆ ಸಂಘದ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಅವರ ಭಾಷಣವನ್ನು ನಟ ಸಲ್ಮಾನ್‌ ಖಾನ್‌ ತೀವ್ರ ಗಮನವಿಟ್ಟು ಕೇಳಿಸಿಕೊಂಡಿದ್ದು ಗಮನ ಸೆಳೆಯಿತು.

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) 100 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಇಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಭಾಗಿಯಾಗಿದ್ದರು. ಈ ವೇಳೆ ಸಂಘದ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಅವರ ಭಾಷಣವನ್ನು ನಟ ಸಲ್ಮಾನ್‌ ಖಾನ್‌ ತೀವ್ರ ಗಮನವಿಟ್ಟು ಕೇಳಿಸಿಕೊಂಡಿದ್ದು ಗಮನ ಸೆಳೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರ್‌ಎಸ್‌ಎಸ್‌ ಶತಾಬ್ದಿ ವರ್ಷ

ಆರ್‌ಎಸ್‌ಎಸ್‌ ಶತಾಬ್ದಿ ವರ್ಷದ ನಿಮಿತ್ತ ಮುಂಬೈನ ನೆಹರೂ ಕೇಂದ್ರ ಸಭಾಂಗಣದಲ್ಲಿ 2 ದಿನದ ‘100 ವರ್ಷದ ಸಂಘ ಪಯಣ: ಹೊಸ ಭರವಸೆ’ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶನಿವಾರ ಸಲ್ಮಾನ್‌ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಆ ಬಳಿಕ ಕಾರ್ಯಕ್ರಮ ಪ್ರವೇಶಿಸಿದ ನಟ, ಭಾಗ್ವತ್‌ ಅವರ ಭಾಷಣವನ್ನು ತೀವ್ರ ಲಕ್ಷ್ಯಗೊಟ್ಟು ಕೇಳಿಸಿಕೊಂಡರು.

ಸುಭಾಷ್‌ ಘೈ, ಕವಿ, ಲೇಖಕ ಪ್ರಸೂದ್‌ ಜೋಶಿ ಉಪಸ್ಥಿತರಿದ್ದರು

ಈ ವೇಳೆ ಖ್ಯಾತ ಚಿತ್ರ ನಿರ್ಮಾಪಕ ಸುಭಾಷ್‌ ಘೈ, ಕವಿ, ಲೇಖಕ ಪ್ರಸೂದ್‌ ಜೋಶಿ ಉಪಸ್ಥಿತರಿದ್ದರು. ಚರ್ಚೆಗಾಗಿ ಸಮಾಜದ ವಿವಿಧ ಗಣ್ಯರು ಮತ್ತು ಆರ್‌ಎಸ್‌ಎಸ್‌ ನಾಯಕರನ್ನು ಆಹ್ವಾನಿಸಲಾಗಿತ್ತು.