ಗೆಲ್ಲೋ ತನಕ ಅವನು 'ಜನ ಸೇನಾನಿ' ಗೆದ್ದ ಬಳಿಕ 'ಭಜನ್ ಸೇನಾನಿ' ಪವನ್ ವಿರುದ್ಧ ಪ್ರಕಾಶ್ ರಾಜ್ ಪೋಸ್ಟ್ ವೈರಲ್!

Prakash Raj vs Pawan kalyan: ನಟ ಪ್ರಕಾಶ್ ರಾಜ್ ಮತ್ತು ಪವನ್ ಕಲ್ಯಾಣ್ ನಡುವೆ ಟ್ವಿಟ್ಟರ್ ವಾರ್ ನಡೆದಿದೆ. ಸನಾತನ ಧರ್ಮ ಮತ್ತು ತಮಿಳು ಭಾಷಾ ವಿಷಯದ ಬಗ್ಗೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿವೆ.

actor Prakash raj slams pawan kalyan over movie dub jab

Prakash Raj vs Pawan kalyan: ಸಿನಿಮಾ ನಟ ಪ್ರಕಾಶ್ ಮತ್ತೆ ಸುದ್ದಿಯಾಗಿದ್ದಾರೆ. ಇದೀಗ ಜನಸೇನಾನಿ ಮುಖ್ಯಸ್ಥ, ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಟ್ವಿಟ್ ದಾಳಿ ಮಾಡಿದ್ದು ಪರಸ್ಪರ ಆರೋಪ ಪ್ರತ್ಯಾರೋಪಗಳಿಂದ  ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ಪ್ರಕಾಶ್ ರಾಜ್ ಇಲ್ಲಿವರೆಗೆ ನೇರ ರಾಜಕೀಯದಲ್ಲಿ ತೊಡಗಿಸಿಕೊಂಡಿಲ್ಲ. ಆದರೆ  ಕೇಂದ್ರದ ವಿರುದ್ಧ ಜಸ್ಟ್ ಅಸ್ಕಿಂಗ್ ಹ್ಯಾಷ್ ಟ್ಯಾಗ್ ಮೂಲಕ ಪ್ರಶ್ನಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ತಿರುಮಲ ಲಡ್ಡು ವಿವಾದ ನಂತರ ಪವನ್ ಇತ್ತೀಚೆಗೆ ಎತ್ತಿಕೊಂಡ ಸನಾತನ ಧರ್ಮದ ವಿಷಯವು ಇಬ್ಬರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಇದೀಗ ತಮಿಳು ಭಾಷಾ ವಿಷಯದ ಬಗ್ಗೆ ಪವನ್ ಅವರ ಹೇಳಿಕೆಗೆ ಪ್ರಕಾಶ್ ರಾಜ್ ತೀವ್ರವಾಗಿ ಟ್ವೀಟ್ ದಾಳಿ ನಡೆಸಿದ್ದಾರೆ. 

ಗೆಲ್ಲುವ ಮೊದಲು ಅವನು ಜನಸೇನಾ, ಗೆದ್ದಮೇಲೆ ಭಜನಾ ಸೇನಾ:

ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪವನ್ ಗೆ ಒಂದು ಪ್ರಶ್ನೆ ಕೇಳಿದ್ದರು. ಈ ಪೋಸ್ಟ್‌ನಲ್ಲಿ ಗೆಲ್ಲುವ ಮೊದಲು 'ಜನ ಸೇನಾ' ಗೆದ್ದ ಬಳಿಕ 'ಭಜನಾ ಸೇನಾ' ಇದೆಯೇ ನಿಮ್ಮ ನಡೆ ಎಂಬಂತೆ ಪ್ರಶ್ನಿಸಿದ್ದರು. ಇಂಥ ಪ್ರಶ್ನೆಗಳು ಇದೇ ಮೊದಲೇನಲ್ಲ.ಈ ಹಿಂದೆ, ಪ್ರಕಾಶ್ ರಾಜ್ ಅವರು ಹಿಂದಿ ಭಾಷೆಯನ್ನು ಹೇರುವ ಬಗ್ಗೆ ಪವನ್ ಅವರ ಸಿದ್ಧಾಂತಗಳನ್ನು ಪುರಾವೆಯಾಗಿ ಪೋಸ್ಟ್ ಮಾಡಿದ್ದರು.  ಇದಕ್ಕೂ ಮೊದಲು, 'ಯಾರಾದ್ರೂ ಪವನ್ ಕಲ್ಯಾಣ್‌ಗೆ ಬುದ್ಧಿ ಹೇಳಿ ದಯವಿಟ್ಟು' ಎಂದು ಸಂದೇಶ ಪೋಸ್ಟ್ ಮಾಡಿದರು. 

ಇದನ್ನೂ ಓದಿ: 'ಬಾಲಿವುಡ್‌ನಿಂದ ಹಣ ಬೇಕು, ಹಿಂದಿ ಬೇಡ' ತಮಿಳುನಾಡು ನಾಯಕರ ವಿರುದ್ಧ ಪವನ್‌ ಕಲ್ಯಾಣ್‌ ಕಿಡಿ

ಪ್ರಕಾಶ್ ರಾಜ್ ಅವರ ಈ ಎರಡು ಪೋಸ್ಟ್‌ಗಳು ವೈರಲ್ ಆಗಿವೆ. ಪ್ರತಿಯೊಬ್ಬ ಭಾರತೀಯರಿಗೂ ತಮ್ಮ ಭಾಷೆಯ ಮೇಲೆ ಆಯ್ಕೆಯ ಸ್ವಾತಂತ್ರ್ಯವಿರಬೇಕು ಎಂದು ಜನ ಸೇನಾ ನಂಬುತ್ತದೆ ಎಂದು ಹಿಂದಿ ಭಾಷಾ ವಿಷಯದ ಬಗ್ಗೆ ಪವನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಬಿಡದ ಪ್ರಕಾಶ್ ರಾಜ್: 

ಈ ವಿಷಯವನ್ನು ಇಲ್ಲಿಗೆ ಬಿಡಲು ಪ್ರಕಾಶ್ ರಾಜ್‌ಗೆ ಮನಸಿಲ್ಲ. ಪವನ್ ಹೇಳಿಕೆ ವಿರುದ್ಧವಾಗಿ ಸರಣಿ ಟ್ವಿಟ್ ಮಾಡಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ವಾಸ್ತವವಾಗಿ ಪವನ್ ಕಲ್ಯಾಣ್ ಮತ್ತು ಪ್ರಕಾಶ್ ರಾಜ್ ನಡುವೆ ಉತ್ತಮ ವೈಯಕ್ತಿಕ ಸಂಬಂಧವಿದೆ. ಅವರು ಇನ್ನೂ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಮುಂಬರುವ ಚಿತ್ರಗಳಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಆದಾಗ್ಯೂ, ಅವರಿಬ್ಬರೂ ತಮ್ಮ ರಾಜಕೀಯ ವಿವಾದಗಳನ್ನು ವೃತ್ತಿಪರವಾಗಿ ತೆಗೆದುಕೊಳ್ಳುವುದಿಲ್ಲ. ರಾಜಕೀಯವಾಗಿ ವಾದ ಪ್ರತಿವಾದಗಳು ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗಿವೆ ಎಂದೇ ಹೇಳಬಹುದು.  

 

Latest Videos
Follow Us:
Download App:
  • android
  • ios