Malayalam Legend Mohanlal's Mother Shanthakumari Passes Away at 90 ನಟ ಮೋಹನ್ ಲಾಲ್ ಅವರ ತಾಯಿ ಶಾಂತಕುಮಾರಿ (90) ಕೊಚ್ಚಿಯ ಎಲಮಕ್ಕರದಲ್ಲಿ ನಿಧನರಾದರು. ಕಳೆದ ಹತ್ತು ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಕೊಚ್ಚಿ (ಡಿ.30): ಮಲಯಾಳಂ ಚಿತ್ರರಂಗಕ್ಕೆ ಮಹಾನ್ ಪ್ರತಿಭೆ ಮೋಹನ್ ಲಾಲ್ ಅವರನ್ನು ನೀಡಿದ ತಾಯಿ ಶಾಂತಕುಮಾರಿ ನಿಧನರಾಗಿದ್ದಾರೆ. ಮೋಹನ್ ಲಾಲ್ ಅವರ ತಾಯಿ ಕೊಚ್ಚಿಯ ಎಲಮಕ್ಕರದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೋಹನ್ ಲಾಲ್ ಅವರನ್ನು ಅವರ ತಾಯಿ ಲಾಲು ಎಂದು ಕರೆಯುತ್ತಿದ್ದರು. ಇನ್ನು ಮೋಹನ್‌ಲಾಲ್ ಕೂಡ ತಾಯಿಗೆ ತಕ್ಕ ಮಗ. ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಲು ಅನೇಕ ಜನರು ಎಲಮಕ್ಕರದ ಮನೆಗೆ ಬಂದಿದ್ದಾರೆ.
ಅವರ ಮಗ ಮಲಯಾಳಂ ಸಿನಿಮಾ ಮಾತ್ರವಲ್ಲದೆ ಭಾರತೀಯ ಸಿನಿಮಾಗಳ ದಿಗ್ಗಜನಾಗಿ ಮೆರೆದರೂ, ಶಾಂತಕುಮಾರಿ ತಮ್ಮ ಮಗನ ಮೂರು ಸಿನಿಮಾಗಳನ್ನು ನೋಡಲು ಕೊನೆಗಾಲದವರೆಗೂ ನೋಡಲು ಸಿದ್ದರಿರಲಿಲ್ಲ. ವರ್ಷಗಳ ಹಿಂದೆ ಅವರೇ ಒಂದು ಸಂದರ್ಶನದಲ್ಲಿ ಇದನ್ನು ಬಹಿರಂಗವಾಗಿ ಹೇಳಿದ್ದರು. ಆ ಸಿನಿಮಾಗಳೆಂದರೆ, ಕಿರೀಡಂ, ಚೆಂಕೋಲ್ ಮತ್ತು ತಲವತ್ತಂ.
"ನಾನು ಕಿರೀಡಂ ಮತ್ತು ಚೆಂಕೋಲ್ ಸಿನಿಮಾವನ್ನು ನೋಡಿಲ್ಲ. ಅದು ಭಯಾನಕ ನೋವು. ಅದು ಕೆನೆಗೆ ಹೊಡೆಯುವಂಥ ಸಿನಿಮಾ. ನಾನು ಅದನ್ನು ನೋಡಲು ಬಯಸುವುದಿಲ್ಲ. ನಾನು ಚೆಂಕೋಲ್ ನೋಡಿಲ್ಲ. ಅದಕ್ಕೂ ಮುನ್ನ ಕಿರೀಡಂ ಸಿನಿಮಾವನ್ನು ಸ್ವಲ್ಪವಷ್ಟೇ ನೋಡಿದ್ದೆ. ಆ ಬಳಿಕ ಆ ಸಿನಿಮಾ ನೋಡಲು ನನಗೆ ಮನಸ್ಸಾಗಲಿಲ್ಲ. ಕೊನೆಗೆ ತಲವತ್ತಂ ಸಿನಿಮಾವನ್ನು ಕೂಡ ನೋಡಿಲ್ಲ. ಇದರಲ್ಲಿ ಯಾವುದೇ ಸಿನಿಮಾವನ್ನು ನೋಡಲು ನನಗೆ ಇಷ್ಟವಿಲ್ಲ. ಕಿಲುಕ್ಕಂ ನಂತಹ ಚಲನಚಿತ್ರಗಳನ್ನು ನೋಡುವುದು ನನಗೆ ಇಷ್ಟ. ಚಿತ್ರದ ಕೊನೆಯ ಭಾಗ ಬಂದಾಗ, ನಾನು ಎದ್ದು ಹೊರಟೆ" ಎಂದು ಶಾಂತ ಕುಮಾರಿ ಆ ಸಮಯದಲ್ಲಿ ಖಾಸಗಿ ಚಾನೆಲ್‌ಗೆ ತಿಳಿಸಿದ್ದರು.
ತಾಯಿಗಾಗಿ ಸಂಗೀತ ಪ್ರದರ್ಶನ ನೀಡಿದ್ದ ಮೋಹನ್ ಲಾಲ್
ಕಳೆದ 10 ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಶಾಂತುಮರಿ ಮಂಗಳವಾರ ನಿಧನರಾದರು. ಅವರು ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೋಹನ್ ಲಾಲ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ತಾಯಿಯ ಬಗ್ಗೆ ಮಾತನಾಡುತ್ತಿದ್ದ ಮೋಹನ್ ಲಾಲ್ ಅವರನ್ನು ಮಲಯಾಳಿಗಳು ಹಲವು ಬಾರಿ ನೋಡಿದ್ದಾರೆ. ಮೋಹನ್ ಲಾಲ್ ಅವರ 89 ನೇ ಹುಟ್ಟುಹಬ್ಬದಂದು ಎಲಮಕ್ಕರದಲ್ಲಿರುವ ಅವರ ಮನೆಯಲ್ಲಿ ತಮ್ಮ ತಾಯಿಗಾಗಿ ಸಂಗೀತ ಪ್ರದರ್ಶನ ನೀಡಿದ್ದರು. ಇದರ ವಿಡಿಯೋ ಆ ಸಮಯದಲ್ಲಿ ವೈರಲ್ ಆಗಿತ್ತು.


