- Home
- Entertainment
- Sandalwood
- OMG! ಕೇರಳದ ನಟ ಮೋಹನ್ ಲಾಲ್ ಮನೇಲಿ ರಾಗಿಣಿ ದ್ವಿವೇದಿಗೋಸ್ಕರ ಇಷ್ಟು ಅಡುಗೆ ಮಾಡಿಸಿದ್ರಾ?
OMG! ಕೇರಳದ ನಟ ಮೋಹನ್ ಲಾಲ್ ಮನೇಲಿ ರಾಗಿಣಿ ದ್ವಿವೇದಿಗೋಸ್ಕರ ಇಷ್ಟು ಅಡುಗೆ ಮಾಡಿಸಿದ್ರಾ?
ಚಿತ್ರರಂಗದಲ್ಲಿ ಬ್ಯುಸಿ ಆಗುತ್ತಲಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಈ ವರ್ಷ ಬಲು ಜೋರಾಗಿದೆ ಎಂದು ಕಾಣುತ್ತದೆ. ನಟಿ ರಾಗಿಣಿ ದ್ವಿವೇದಿ ಅವರು ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಿದ್ದಾರೆ. ಇದರ ಜೊತೆಗೆ ಅವರು ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಈಗ ಅವರು ಮೋಹನ್‌ಲಾಲ್ ಮನೆಯಲ್ಲಿ ಊಟ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
15

ಕೇರಳದ ಮೋಹನ್‌ಲಾಲ್ ಅವರ ಮನೆಗೆ ರಾಗಿಣಿ ದ್ವಿವೇದಿ ಭೇಟಿ ಕೊಟ್ಟಿದ್ದರು. ಅಲ್ಲಿ ಅವರು ಭರ್ಜರಿ ಊಟ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
25
ರಾಗಿಣಿ ದ್ವಿವೇದಿ ಅವರ ಟೀಂ ಬರಲಿದೆ ಎಂದು ಮೋಹನ್‌ಲಾಲ್ ಮನೆಯಲ್ಲಿ ಇಷ್ಟೊಂದು ಅಡುಗೆ ಮಾಡಲಾಯ್ತಾ? ಅಬ್ಬಬ್ಬಾ? ಇದರಲ್ಲಿ ನಿಮ್ಮ ಫೇವರಿಟ್ ಅಡುಗೆ ಯಾವುದು?
35
“ಮೋಹನ್‌ಲಾಲ್ ಸರ್, ನೀವು ನನಗೆ ಪ್ರತಿನಿತ್ಯ ಸ್ಪೂರ್ತಿ ತುಂಬುತ್ತೀರಾ, ಆದಷ್ಟು ಬೇಗ ನಾನು, ಮೋಹನ್ ಲಾಲ್ ಅವರ ಜೊತೆ ಸಿನಿಮಾ ಮಾಡ್ತೀನಿ" ಎಂದು ರಾಗಿಣಿ ದ್ವಿವೇದಿ ಅವರು ಹೇಳಿದ್ದಾರೆ.
45
"ನೀವು ನಮಗೆ ಕೊಟ್ಟ ಆತಿಥ್ಯ, ಆಹಾರ ಎಲ್ಲವೂ ಚೆನ್ನಾಗಿತ್ತು. ಕೇರಳ ಆಹಾರ ಮಸ್ತ್ ಆಗಿತ್ತು” ಎಂದು ರಾಗಿಣಿ ದ್ವಿವೇದಿ ಅವರು ಹೇಳಿಕೊಂಡಿದ್ದಾರೆ.
55
ಮೋಹನ್‌ಲಾಲ್ ಹಾಗೂ ರಾಗಿಣಿ ದ್ವಿವೇದಿ ಅವರ ಸಿನಿಮಾ ಯಾವಾಗ ಬರಲಿದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಕಾಂಬಿನೇಶನ್ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಶುರುವಾಗಿದೆ.
Latest Videos