ರಾವಣ ದಹನದ ವೇಳೆ ಹಾರ್ಟ್ ಅಟ್ಯಾಕ್‌: ಸಿಪಿಆರ್ ಮಾಡಿ ವ್ಯಕ್ತಿ ಜೀವ ಉಳಿಸಿದ ಎಸಿಪಿ

ವಿಜಯದಶಮಿ ದಿನ ರಾವಣ ದಹನ ವೇಳೆ ಹೃದಯಾಘಾತಕ್ಕೀಡಾದ ವ್ಯಕ್ತಿಯೊಬ್ಬರನ್ನು ಎಸಿಪಿಯೊಬ್ಬರು ರಕ್ಷಿಸಿದ ಘಟನೆ ನಡೆದಿದೆ. 

ACPs Swift Action Saves Heart Attack Victim in Bhopal

ವಿಜಯದಶಮಿ ದಿನ ರಾವಣ ದಹನ ವೇಳೆ ಹೃದಯಾಘಾತಕ್ಕೀಡಾದ ವ್ಯಕ್ತಿಯೊಬ್ಬರನ್ನು ಎಸಿಪಿಯೊಬ್ಬರು ರಕ್ಷಿಸಿದ ಘಟನೆ ನಡೆದಿದೆ. ರಾವಣ ದಹನ ನೋಡುತ್ತಿದ್ದ ವ್ಯಕ್ತಿ ಇದ್ದಕ್ಕಿದಂತೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲದೇ ಇದ್ದ ಎಸಿಪಿ ಸುನೀಲ್ ತಿವಾರಿ ಕೂಡಲೇ ಆ ವ್ಯಕ್ತಿಯ ಸಹಾಯ್ಕೆ ಧಾವಿಸಿ ಬಂದಿದ್ದು, ಸಿಪಿಆರ್ ಮಾಡುವ ಮೂಲಕ ಆ ವ್ಯಕ್ತಿಯ ಜೀವ ಉಳಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಘಟನೆ ನಡೆದಿದ್ದು, ಎಸಿಪಿಯ ಈ ಸಮಯಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. 

ವಿಜಯದಶಮಿಯಂದು ಶನಿವಾರ ರಾತ್ರಿ ಭೋಪಾಲ್‌ನ ಛೋಳ ಪ್ರದೇಶದಲ್ಲಿ ರಾವಣ ದಹನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನು ನೋಡುತ್ತಾ ನಿಂತಿದ್ದ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರಿಗೆ ಹಠಾತ್ ಹೃದಯಾಘಾತವಾಗಿದೆ. ಕೂಡಲೇ ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಸುನೀಲ್ ತಿವಾರಿ ಅವರ ಗಮನಕ್ಕೆ ಈ ವಿಚಾರ ಬಂದಿದ್ದು, ತಕ್ಷಣವೇ ವ್ಯಕ್ತಿಯ ಸಹಾಯಕ್ಕೆ ಅವರು ಧಾವಿಸಿ ಬಂದಿದ್ದಾರೆ. ಬಳಿಕ ಸಿಪಿಆರ್ ಮಾಡಿ ವ್ಯಕ್ತಿಯ ಜೀವ ಉಳಿಸಿದ್ದಾರೆ. 

ದೆಹಲಿ ಏರ್‌ಪೋರ್ಟ್‌ನಲ್ಲಿ ಹೃದಯಾಘದಿಂದ ಕುಸಿದ ವ್ಯಕ್ತಿಗೆ ಸಿಪಿಆರ್ ನೀಡಿ ಬದುಕಿಸಿದ ಯೋಧ!

ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಮಾತನಾಡಿದ ಭೋಪಾಲ್‌ನ ಕಾನೂನು ಹಾಗೂ ಅಪರಾಧ ದಳದ ಕಮೀಷನರ್ ಅವಧೇಶ್‌ ಗೋಸ್ವಾಮಿ, ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ. ಆ ವ್ಯಕ್ತಿ ಛೋಳಾ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ರಾವಣ ದಹನದ ವೀಕ್ಷಿಸುತ್ತಿದ್ದಾಗ ಹೃದಯಾಘಾತವಾಗಿತ್ತು. ಈ ವೇಳೆ ಅವರ ಸಹಾಯಕ್ಕೆ ಎಸಿಪಿ ಸುನೀಲ್ ತಿವಾರಿ ಧಾವಿಸಿದರು. ಅವರಿಗೆ ಸಿಪಿಆರ್ ಮಾಡಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಅವರು ಎದ್ದು ಕುಳಿತರು. ಅವರಿಗೆ ಆರೋಗ್ಯ ಪವಾಡದಂತೆ ಮರುಕಳಿಸಿತು. ನಂತರ ಅವರನ್ನು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರು ಎಂದು ಅವಧೇಶ್ ಗೋಸ್ವಾಮಿ ಹೇಳಿದ್ದಾರೆ.

Viral Video: ರಸ್ತೆಯಲ್ಲೇ ಆರು ವರ್ಷದ ಮಗುವಿಗೆ ಸಿಪಿಆರ್‌ ನೀಡಿದ ವೈದ್ಯೆ, ಬದುಕಿಬಂದ ಹುಡುಗ!

 

Latest Videos
Follow Us:
Download App:
  • android
  • ios