ಶ್ರೀನಗರಕ್ಕೆ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಹೃದಯಾಘಾತದಿದಂ ಕುಸಿದು ಬಿದ್ದಿದ್ದಾರೆ. ತಕ್ಷಣವೇ CISF ಯೋಧ ನೆರವಿಗೆ ಧಾವಿಸಿ ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯ ತ್ವರಿತ ನೆರವಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ನವದೆಹಲಿ(ಆ.22) ಹೃದಯಾಘಾತದ ವೇಳೆ ನೀಡುವ ಸಿಪಿಆರ್ ವ್ಯಕ್ತಿಯ ಪ್ರಾಣ ಉಳಿಸಲಿದೆ. ಆದರೆ ಸಿಪಿಆರ್ ಸರಿಯಾಗಿ ನೀಡಲು ಗೊತ್ತಿರಬೇಕು ಅಷ್ಟೆ. ಇದೀಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಜವಾಬ್ದಾರಿ CISF ಯೋಧ ತಕ್ಷಣ ನೀಡಿದ ಸಿಪಿಆರ್‌ನಿಂದ ಹೃದಯಾಘಾತದಿಂದ ತುತ್ತಾದ ವ್ಯಕ್ತಿಯ ಪ್ರಾಣ ಉಳಿಸಿದ ಘಟನೆ ನಡೆದಿದೆ. ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರಕ್ಕೆ ಪ್ರಯಾಣಿಸಲು ಆಗಮಿಸಿದ ವ್ಯಕ್ತಿ ದಿಢೀರ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಈ ವೇಳೆ ತಕ್ಷಣವೇ ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ.

ಟರ್ಮಿನಲ್ 2ನಲ್ಲಿ ಈ ಘಟನೆ ನಡೆದಿದೆ. ಅರ್ಶೀದ್ ಅಯೂಬ್ ಅನ್ನೋ ಪ್ರಯಾಣಕರು ದೆಹಲಿ ಎರಡನೇ ಟರ್ಮಿನಲ್‌ನಲ್ಲಿ ತಮ್ಮ ಲಗೇಜ್ ಹಿಡಿದುಕೊಂಡು ನಿಂತಿದ್ದ ವೇಳೆ ಹೃದಯಾಘತವಾಗಿದೆ. ತೀವ್ರ ಹೃದಯಾಘಾತಕ್ಕೆ ಕುಸಿದು ಬಿದ್ದಿದ್ದಾರೆ. ಇದೇ ವೇಳೆ ಪಕ್ಕದಲ್ಲಿ ಕರ್ತವ್ಯದ್ದಲ್ಲಿದ್ದ CISF ಯೋಧರು ಆಗಮಿಸಿದ್ದಾರೆ. 

Viral Video: ರಸ್ತೆಯಲ್ಲೇ ಆರು ವರ್ಷದ ಮಗುವಿಗೆ ಸಿಪಿಆರ್‌ ನೀಡಿದ ವೈದ್ಯೆ, ಬದುಕಿಬಂದ ಹುಡುಗ!

ಯೋಧರು ಆಗಮಿಸಿ ಪರಿಶೀಲಿಸಿದಾಗ ಪರಿಸ್ಥಿತಿ ಗಂಭೀರತೆ ಅರಿವಾಗಿದೆ. ಒಂದು ಕ್ಷಣವೂ ತಡ ಮಾಡದೇ ತನ್ನ ಕೈಯಲ್ಲಿದ್ದ ಬಂದೂಕನ್ನು ಮತ್ತೊಬ್ಬ ಯೋಧನ ಕೈಗೆ ನೀಡಿ ನೆಲದ ಮೇಲೆ ಬಿದ್ದಿದ್ದ ಆರ್ಶಿದ್ ಆಯೂಬ್‌ಗೆ ಸಿಪಿಆರ್ ನೀಡಿದ್ದಾರೆ. ಕೆಲ ಹೊತ್ತಿನ ಪ್ರಯತ್ನದಿಂದ ಅರ್ಶಿದ್ ಅಯೂಬ್ ಚೇತರಿಸಿಕೊಂಡಿದ್ದಾರೆ. ಗೋಲ್ಡನ್ ಹವರ್‌ನಲ್ಲಿ ಸಿಪಿಆರ್ ನೀಡಿದ ಕಾರಣ ಅಯೂಬ್ ಬದಕಿ ಉಳಿದಿದ್ದಾರೆ. ಅಸ್ವಸ್ಥಗೊಂಡು ನೆಲೆದ ಮೇಲೆ ಬಿದ್ದಿದ್ದ ಅಯೂಬ್ ಸಿಪಿಆರ್ ಬಳಿಕ ನಿಧಾನವಾಗಿ ಚೇತರಿಸಿಕೊಂಡಿದ್ದಾರೆ. ಚಲನವಲನ ಆರಂಭಗೊಂಡಿದೆ. ಬಳಿಕ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆ ದಾಖಲಿಸಲಾಗಿದೆ.

Scroll to load tweet…

ಆಯೂಬ್ ಉಸಿರಾಟ ನಿಂತಿತ್ತು. ಆದರೆ ಸಿಪಿಆರ್‌ನಿಂದ ಚೇತರಿಸಿಕೊಂಡಿದ್ದಾರೆ. ಇದೀಗ CISF ಯೋಧರ ಹೀರೋ ನಡೆದೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 60 ವರ್ಷದ ಆಯೂಬ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸೂಕ್ತ ಸಮಯದಲ್ಲಿ ಸಿಪಿಆರ್ ಸೇರಿದಂತೆ ಪ್ರಾಥಮಿಕ ಚಿಕಿತ್ಸೆ ನೀಡಿದರೆ ಹಲವು ಜೀವಗಳು ಉಳಿಯಳಿದೆ. ನಮ್ಮ ಪ್ರಯತ್ನ ಮಾಡಿದ್ದೇವೆ. ಉಳಿದಿದ್ದೆಲ್ಲವೂ ದೇವರ ಇತ್ತೆ ಎಂದು ಯೋಧರು ಅಭಿಪ್ರಾಯಪಟ್ಟಿದ್ದಾರೆ. 

ದಾರಿಯಲ್ಲಿ ನಾಯಿಗೆ ಹೃದಯಾಘಾತ, ಉಸಿರು ನೀಡಿ ಜೀವ ಉಳಿಸಿದ ವ್ಯಕ್ತಿಗೆ ನೆಟ್ಟಿಗರ ಪ್ರಶಂಸೆ!

ವಿಮಾನ ಪ್ರಯಾಣದ ವೇಳೆಯೂ ಈ ರೀತಿಯ ಘಟನೆಗಳು ನಡೆದಿರುವ ವರದಿಯಾಗಿದೆ. ವಿಮಾನ ಹಾರಟದ ವೇಲೆ ಸಮಸ್ಯೆಗೆ ಸಿಲುಕಿದ ವೇಳೆ ಪ್ರಯಾಣದಲ್ಲಿದ್ದ ವೈದ್ಯರು ನೆರವು ನೀಡಿ ಬದುಕಿಸಿದ ಘಟನೆಗಳು ನಡೆದಿದೆ.