ಪಾಟ್ನಾ(ಜ.28): ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ಭಾರತವನ್ನು ಪ್ರತ್ಯೇಕಗೊಳಿಸುವ ಕುರಿತು ಮಾತನಾಡಿದ್ದ ಜೆಎನ್’ಯು ಸಂಶೋಧನಾ ವಿದ್ಯಾರ್ಥಿ ಶ್ರಜಿಲ್ ಇಮಾನ್ ಅವರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ದೇಶವನ್ನು ಒಡೆಯುವ ಮಾತನಾಡಿದ್ದ ಶ್ರಜಿಲ್ ಇಮಾಮ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದ್ದು, ಬಿಹಾರದ ಜೆಹನಾಬಾದ್’ನಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡು ದಿನಗಳಿಂದ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ದೆಹಲಿ, ಮುಂಬೈ, ಪಾಟ್ನಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಶ್ರಜಿಲ್ ಇಮಾಮ್ ಅವರಿಗಾಗಿ ಹುಡುಕಾಟ ನಡೆಸಿದ್ದರು.

ಕೊನೆಗೆ ಶ್ರಜಿಲ್ ತಮ್ಮ ತವರು ಜೆಹನಾಬಾದ್’ನಲ್ಲಿ ಸೆರೆ ಸಿಕ್ಕಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ದೆಹಲಿಗೆ ಕರತರಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.  

ಟುಕ್ಡೆ ಗ್ಯಾಂಗ್ ಎಕ್ಸ್‌ಪೋಸ್: ಭಾರತದಿಂದ ಅಸ್ಸಾಂ ಬೇರ್ಪಡಿಸುವಂತೆ ಕರೆ!

ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಶ್ರಜಿಲ್, ತಮ್ಮೊಂದಿಗೆ 5 ಲಕ್ಷ ಜನ ಸೇರಿದರೆ ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಪ್ರತ್ಯೇಕಗೊಳಿಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.