Asianet Suvarna News Asianet Suvarna News

ಟೈರ್ ಬಸ್ಟ್: ಬಸ್‌ಸ್ಟ್ಯಾಂಡ್‌ನಲ್ಲಿ ನಿಂತವರಿಗೆ ಗುದ್ದಿದ್ದ ಟ್ರಕ್: ಆರು ಜನರ ಬಲಿ

ಬಸ್‌ ನಿಲ್ದಾಣದ ಬಳಿ ನಿಂತಿರುವ ಜನರ ಮೇಲೆ ವೇಗವಾಗಿ ಬಂದ ಟ್ರಕ್‌ ಹಾಯ್ದು 6 ಜನರು ಮೃತಪಟ್ಟ ಭೀಕರ ಘಟನೆ ಭಾನುವಾರ ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ನಡೆದಿದೆ.

Accident in Madhya Pradesh 6 killed after truck tire bust and ramed to people who standing near Busstand akb
Author
First Published Dec 5, 2022, 9:51 AM IST

ರತ್ಲಾಂ: ಬಸ್‌ ನಿಲ್ದಾಣದ ಬಳಿ ನಿಂತಿರುವ ಜನರ ಮೇಲೆ ವೇಗವಾಗಿ ಬಂದ ಟ್ರಕ್‌ ಹಾಯ್ದು 6 ಜನರು ಮೃತಪಟ್ಟ ಭೀಕರ ಘಟನೆ ಭಾನುವಾರ ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಸುಮಾರು 10 ಜನರಿಗೆ ಗಂಭೀರ ಗಾಯಗಳಾಗಿವೆ. ಇಲ್ಲಿನ ಸಾತ್ರುಂಡಾ ಗ್ರಾಮದಲ್ಲಿ ರತ್‌ಲಾಮ್‌-ಲೆಬಾಡ್‌ ರಸ್ತೆಯ ಮೇಲೆ ಈ ಅಪಘಾತ ನಡೆದಿದ್ದು, ವೇಗವಾಗಿ ಬಂದ ಟ್ರಕ್‌ 20ಕ್ಕೂ ಹೆಚ್ಚು ಜನರಿಗೆ ಡಿಕ್ಕಿ ಹೊಡೆದಿದೆ. ಈ ಪೈಕಿ 6 ಮಂದಿ ಮೃತಪಟ್ಟರೆ, 8 ಜನರ ಸ್ಥಿತಿ ಗಂಭೀರವಾಗಿದೆ. ಟ್ರಕ್‌ ಡ್ರೈವರ್‌ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಟ್ರಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಟ್ರಕ್ ರತ್ಲಮ್‌ನಿಂದ ಬಡ್ನಾವರ್‌ಗೆ ತೆರಳುತ್ತಿತ್ತು. ಟ್ರಕ್‌ನ ಟೈರ್ ಬಸ್ಟ್ ಆಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರು ಹಾಗೂ ಗಾಯಾಳುಗಳು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. 

Viral Video: ಪೊಲೀಸರು ಎಸೆದ ತರಕಾರಿ ಎತ್ತಿಕೊಳ್ಳಲು ಹೋಗಿ ರೈಲು ಅಪಘಾತದಲ್ಲಿ 2 ಕಾಲು ಕಳೆದುಕೊಂಡ ವ್ಯಾಪಾರಿ..!

ಉಡುಪಿ: ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ರೂ ಸಹಾಯಕ್ಕೆ ಬಾರದ ಜನ..!

ದಾವಣಗೆರೆ: ಕಾರು, ಮಿನಿ ಬಸ್, ಟಾಟಾ ಏಸ್ ಮಧ್ಯೆ ಸರಣಿ ಅಪಘಾತ, ಓರ್ವ ವ್ಯಕ್ತಿ ಸಾವು

 

Follow Us:
Download App:
  • android
  • ios