Asianet Suvarna News Asianet Suvarna News

ದಾವಣಗೆರೆ: ಕಾರು, ಮಿನಿ ಬಸ್, ಟಾಟಾ ಏಸ್ ಮಧ್ಯೆ ಸರಣಿ ಅಪಘಾತ, ಓರ್ವ ವ್ಯಕ್ತಿ ಸಾವು

ದಾವಣಗೆರೆಯ ತಾಲೂಕಿನ ಕೊಕ್ಕನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದ ಘಟನೆ  

58 Year Old Person Dies Due to Serial Accident in Davanagere grg
Author
First Published Nov 30, 2022, 8:52 AM IST

ದಾವಣಗೆರೆ(ನ.30):  ಕಾರು, ಮಿನಿ ಬಸ್, ಟಾಟಾ ಏಸ್ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ದಾವಣಗೆರೆಯ ತಾಲೂಕಿನ ಕೊಕ್ಕನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಇಂದು(ಬುಧವಾರ) ನಡೆದಿದೆ. 

ಸರಣಿ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಗುತ್ತಲ ಗ್ರಾಮದ ಹನುಮಂತಪ್ಪ (58) ಎಂಬುವರಯ ಮೃತಪಟ್ಟಿದ್ದಾರೆ. ಮೂರು ಗಾಡಿಗಳಲ್ಲಿದ್ದ 9 ಜನರಿಗೆ ಗಂಭೀರವಾದ ಗಾಯಗಳಾಗಿದ್ದು 5 ಜನರ ಮುರಿದ ಕಾಲು ಮುರಿದಿದೆ ಅಂತ ತಿಳಿದು ಬಂದಿದೆ. 

ಬೆಂಗಳೂರು: ಟೋಲ್‌ ತಪ್ಪಿಸಲು ಹೋಗಿ ರಸ್ತೆ ತಡೆಗೋಡೆಗೆ ಡಿಕ್ಕಿ, ಕ್ಯಾಬ್‌ ಪಲ್ಟಿ

ರೇಷ್ಮೆ ಬೆಳೆ ಮಾರಾಟ ಮಾಡಲು ರೈತರು ರಾಮನಗರಕ್ಕೆ ಹೊರಟಿದ್ದ ಅಂತ ತಿಳಿದು ಬಂದಿದೆ. ಗಾಯಗೊಂಡವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. 
 

Follow Us:
Download App:
  • android
  • ios