ಜೈಶ್ರೀ ರಾಮ್ ಎಂದು ಮಾತು ಆರಂಭಿಸಿದ ವಿದ್ಯಾರ್ಥಿಗೆ ಗೇಟ್‌ಪಾಸ್, ABES ಕಾಲೇಜು ವೆಬ್‌ಸೈಟ್ ಹ್ಯಾಕ್!
ಕಾಲೇಜು ಫೆಸ್ಟ್ ಅದ್ಧೂರಿ ಕಾರ್ಯಕ್ರಮದಲ್ಲಿ ಜೈ ಶ್ರೀ ರಾಮ್ ಎಂದು ಮಾತು ಆರಂಭಿಸಿದ ವಿದ್ಯಾರ್ಥಿಯನ್ನು ಪ್ರೊಫೆಸರ್ ವೇದಿಕೆಯಿಂದಲೇ ಹೊರಕ್ಕೆ ಕಳುಹಿಸಿದ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕಾಲೇಜು ವೆಬ್‌ಸೈಟ್ ಹ್ಯಾಕ್ ಮಾಡಲಾಗಿದ್ದು, ಜೈ ಶ್ರೀ ರಾಂ ಎಂದು ಬರೆಯಲಾಗಿದೆ. ಇಷ್ಟೇ ಪ್ರೊಫೆಸರ್‌ನ್ನು ಶೂರ್ಪನಖಿಗೆ ಹೋಲಿಕೆ ಮಾಡಲಾಗಿದೆ.

ಘಾಜಿಯಾಬಾದ್(ಅ.21) ಎಬಿಇಎಸ್ ಎಂಜಿನೀಯರಿಂಗ್ ಕಾಲೇಜು ಘಾಜಿಯಾಬಾದ್ ಭಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಕಾಲೇಜು ಫೆಸ್ಟ್ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಜೈ ಶ್ರೀ ರಾಮ್ ಎಂದು ಮಾತು ಆರಂಭಿಸಿದ ವಿದ್ಯಾರ್ಥಿಯನ್ನು ಕಾಲೇಜಿನ ಪ್ರೋಫೆಸರ್ ಮಮತಾ ಗೌತಮ್ ವೇದಿಕೆಯಿಂದಲೇ ಹೊರಕ್ಕೆ ಕಳುಹಿಸಿದ ಘಟನೆ ವಿರುದ್ದ ಪ್ರತಿಭಟನೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಕಾಲೇಜಿನ ಅಧಿಕೃತ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಲಾಗಿದೆ. ವೆಬ್‌ಸೈಟ್‌ನ ಮುಖಪುಟಜಲ್ಲಿ ಜೈಶ್ರೀರಾಮ್ ಎಂದು ಬರೆದು ಶ್ರೀರಾಮ ಗ್ರಾಫಿಕ್ ಇಮೇಜ್ ಹಾಕಲಾಗಿದೆ. ಇಷ್ಟೇ ಅಲ್ಲ ಪ್ರೊಫೆಸರ್ ಮಮತಾರನ್ನು ಶೂರ್ಪನಖಿಗೆ ಹೋಲಿಕೆ ಮಾಡಿರುವ ಫೋಟೋವನ್ನು ಹಾಕಲಾಗಿದೆ. ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಪ್ರೊಫೆಸರ್ ಹಾಗೂ ಕಾಲೇಜು ವಿರುದ್ಧ ಪ್ರತಿಭಟನೆಗಳು ಜೋರಾಗುತ್ತಿದೆ. ಇಂದು(ಅ.21) ಕಾಲೇಜಿನ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ. ಜೈಶ್ರೀರಾಮನ ಫೋಟೋ ಹಾಕಿ ಮೇಲ್ಬಾಗದಲ್ಲೇ ಜೈಶ್ರೀರಾಮ್ ಎಂದು ಬರೆಯಲಾಗಿದೆ. ಇನ್ನು ಕೆಳಭಾಗದಲ್ಲಿ ಪ್ರೊಫೆಸರ್ ಮಮತಾ ಫೋಟೋವನ್ನು ಶೂರ್ಪನಖಿಗೆ ಹೋಲಿಸಿ ಪೋಸ್ಟ್ ಮಾಡಲಾಗಿದೆ. ಇಷ್ಟೇ ಅಲ್ಲ ರಾಕ್ಷಸರಿಗೆ ಜೈಶ್ರೀರಾಮ್ ಪದದಲ್ಲಿ ಸಮಸ್ಯೆ ಕಾಣುತ್ತದೆ ಎಂದು ಬರೆಯಲಾಗಿದೆ.
ಪಾಕ್ ಕ್ರಿಕೆಟಿಗನ ಮುಂದೆ ಜೈಶ್ರೀರಾಮ್ ಘೋಷಣೆ ತಪ್ಪೆಂದ ಉದನಿಧಿ ಸ್ಟಾಲಿನ್, ಅಣ್ಣಾಮಲೈ ತಿರುಗೇಟು!
ಅಕ್ಟೋಬರ್ 20 ರಂದು ಎಬಿಇಎಸ್ ಕಾಲೇಜು ಫೆಸ್ಟ್ ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಲವು ವಿದ್ಯಾರ್ಥಿಳ ಸಾಂಸ್ಕೃತಿ ಕಾರ್ಯಕ್ರಮ, ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಜ್ಜಾಗಿತ್ತು. ವೇದಿಕೆಗೆ ಆಗಮಿಸಿದ ವಿದ್ಯಾರ್ಥಿ ಮಾತು ಆರಂಭಿಸುವ ಮೊದಲು ಜೈ ಶ್ರೀರಾಂ ಎಂದಿದ್ದಾನೆ. ಇತ್ತ ನೆರೆದಿದ್ದ ಅಷ್ಟೂ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಜೈಶ್ರೀರಾಂ ಎಂದು ಕೂಗಿದ್ದಾರೆ.
ಇದು ವೇದಿಕೆ ಕೆಳಗೆ ಕುಳಿತಿದ್ದ ಪ್ರೊಫೆಸರ್ ಮಮತಾ ಗೌತಮ್ ಕೆರಳಿಸಿದೆ. ತಕ್ಷಣವೇ ಎದ್ದು ವೇದಿಕೆ ಬಳಿ ಬಂದ ಮಮತಾ, ಈ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವಂತಿಲ್ಲ. ಹೊರನಡೆಯಲು ಸೂಚಿಸಿದ್ದಾರೆ. ನಾನು ಘೋಷಣೆ ಕೂಗಿಲ್ಲ, ಮಾತು ಆರಂಭಿಸುವಾಗ ಜೈಶ್ರೀರಾಮ್ ಹೇಳಿದ್ದೇನೆ ಅಷ್ಟೇ. ಎಲ್ಲಾ ವಿದ್ಯಾರ್ಥಿಗಳು ಹೇಳಿದ್ದಾರೆ ಎಂದು ವಿವರಿಸಿದ್ದಾನೆ. ಆದರೆ ಇದಕ್ಕೆ ಒಪ್ಪದ ಮಮತಾ, ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಕಳುಹಿಸಿದ್ದಾರೆ.
ಜೈಶ್ರೀರಾಮ್ ಬರೆದ ವಿದ್ಯಾರ್ಥಿಗೆ ಹಿಗ್ಗಾ ಮುಗ್ಗಾ ಥಳಿಸಿದ ಟೀಚರ್, ಬಾಲಕನ ಸ್ಥಿತಿ ಗಂಭೀರ!
ಈ ವಿಡಿಯೋ ಸಾಮಾಜಿಕ ಮಾದ್ಯಮದಲ್ಲಿ ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪ್ರೊಫೆಸರ್ ಹಾಗೂ ಕಾಲೇಜು ವಿರುದ್ಧ ಪ್ರತಿಭಟನೆಗಳು ಹೆಚ್ಚಾಗಿದೆ. ಪ್ರೊಫೆಸರ್ ಮಮತಾ ಕ್ಷಮೆ ಕೇಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಬೆಳವಣಿಗೆ ನಡುವೇ ಇದೀಗ ಕಾಲೇಜಿನ ವೆಬ್‌ಸೈಟ್ ಹ್ಯಾಕ್ ಮಾಡಿ ಸೇಡು ತೀರಿಸಿಕೊಳ್ಳಲು ಜೈಶ್ರೀರಾಂ ಎಂದು ಬರೆದು ಶ್ರೀರಾಮನ ಫೋಟೋಗಳನ್ನು ಹಾಕಲಾಗಿದೆ.