Asianet Suvarna News Asianet Suvarna News

ಜೈಶ್ರೀರಾಮ್ ಬರೆದ ವಿದ್ಯಾರ್ಥಿಗೆ ಹಿಗ್ಗಾ ಮುಗ್ಗಾ ಥಳಿಸಿದ ಟೀಚರ್, ಬಾಲಕನ ಸ್ಥಿತಿ ಗಂಭೀರ!

ವಿದ್ಯಾರ್ಥಿ ಶಾಲಾ ಬೋರ್ಡ್‌ನಲ್ಲಿ ಜೈ ಶ್ರೀರಾಮ್ ಎಂದು ಬರೆದಿದ್ದಾನೆ. ಇದನ್ನು ನೋಡಿ ಟೀಚರ್ ಪಿತ್ತ ನೆತ್ತಗೇರಿದೆ. ವಿದ್ಯಾರ್ಥಿಗೆ ಹಿಗ್ಗಾ ಮುಗ್ಗಾ ಥಳಿಸಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

Student hospitalized after Teacher Thrash for writing Jai shri ram on school board in Jammu and Kashmir ckm
Author
First Published Aug 26, 2023, 7:44 PM IST

ಶ್ರೀನಗರ(ಆ.26) ಮುಸ್ಲಿಂ ವಿದ್ಯಾರ್ಥಿ ನಿಂದಿಸಿ ಇತರ ಮಕ್ಕಳಿಂದ ಕೆನ್ನಗೆ ಬಾರಿಸುವಂತೆ ಮಾಡಿದ ಶಿಕ್ಷಕಿ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಮತ್ತೊಂದು ಭೀಕರ ಘಟನೆ ವರದಿಯಾಗಿದೆ. ಶಾಲಾ ಬೋರ್ಡ್‌ನಲ್ಲಿ ಜೈಶ್ರೀರಾಂ ಬರೆದ ವಿದ್ಯಾರ್ಥಿಯನ್ನು ಟೀಚರ್ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ತೀವ್ರ ಅಸ್ವಸ್ಥಗೊಂಡ ಬಾಲಕನ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಾಹಿತಿ ತಿಳಿದ ಸ್ಥಳೀಯರು ಶಾಲೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಾಲಾ ಬೋರ್ಡ್‌ನ ಮೇಲ್ಬಾಗದಲ್ಲಿ ಜೈಶ್ರೀರಾಂ ಎಂದು ಬಾಲಕನೊಬ್ಬ ಬರೆದಿದ್ದಾನೆ. ಆದರೆ ಈ ನಡೆ ಟೀಚರ್ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕನ ಪತ್ತೆ ಹಚ್ಚಿದ ಟೀಚರ್, ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದಾನೆ. ಆದರೆ ಟೀಚರ್ ಮಾತ್ರ ಥಳಿಸುವುದು ನಿಲ್ಲಿಸಿಲ್ಲ. ಅಸ್ವಸ್ಥಗೊಂಡ ಬಾಲಕ ಕುಸಿದು ಬಿದ್ದಿದ್ದಾನೆ.

ಮುಸ್ಲಿಂ ವಿದ್ಯಾರ್ಥಿಗೆ ನಿಂದಿಸಿ ಇತರ ಮಕ್ಕಳಿಂದ ಕೆನ್ನೆಗೆ ಹೊಡೆಸಿದ ಶಿಕ್ಷಕಿ!

ಬಾಲಕ ಕುಸಿದು ಬೀಳುತ್ತಿದ್ದಂತೆ ಇತರ ವಿದ್ಯಾರ್ಥಿಗಳು ಚೀರಾಡಿದ್ದಾರೆ. ಇತ್ತ ಶಾಲಾ ಸಿಬ್ಬಂದಿಗಳು ಓಡೋಡಿ ಬಂದು ಬಾಲಕನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ಸಿಬ್ಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಬಾಲಕ ಆಸ್ಪತ್ರೆ ದಾಖಲಾಗಿರುವ ವಿಚಾರ ಪೋಷರಿಗೂ ತಿಳಿದಿದೆ. ಆಸ್ಪತ್ರೆಗೆ ದೌಡಾಯಿಸಿದ ಪೋಷಕರು ಬಾಲಕನ ಚೇತರಿಕಗಾಗಿ ಪಾರ್ಥಿಸುತ್ತಿದ್ದಾರೆ.

ಇತ್ತ ಬಾಲಕನ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟೀಚರ್ ಹಾಗೂ ಪ್ರಿನ್ಸಿಪಾಲ್ ವಿರುದ್ಧ ದೂರು ದಾಖಲಾಗಿದೆ. ಇತ್ತ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸಿ ಮೂವರು ತಂಡ ರಚಿಸಿದ್ದಾರೆ. ಜಿಲ್ಲಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮತ್ತೊಂದು ಸರ್ಕಾರಿ ಶಾಲೆಯ ಹಿರಿಯ ಪ್ರಿನ್ಸಿಪಾಲ್ ಅವರನ್ನೊಳಗೊಂಡ ಸಮಿತಿ ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡಲಿದೆ.

ಮುಸ್ಲಿಂ ವಿದ್ಯಾರ್ಥಿ ಅಪಹರಿಸಿ ಹಲ್ಲೆ: ಎಸ್‌ಡಿಪಿಐ ಮುಖಂಡನ ಪುತ್ರ ಸಹಿತ 7 ಜನರ ಬಂಧನ

ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಘಟನೆಗೂ ಮೊದಲು ಉತ್ತರ ಪ್ರದೇಶದ ಮುಜಾಫರ್ ನಗರದ ಶಾಲೆಯಲ್ಲಿನ ಘಟನೆ ಬೆಳಕಿಗೆ ಬಂದಿತ್ತು. ಮುಸ್ಲಿಂ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳಿಂದ ಕೆನ್ನಗೆ ಬಾರಿಸಲು ಸೂಚಿಸಿದ್ದಾರೆ. ಶಿಕ್ಷಕಿ ಸೂಚನೆಯಂತೆ ಇತರ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿ ಕೆನ್ನಗೆ ಭಾರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಶಿಕ್ಷಕಿ ಹಾಗೂ ಪ್ರಿನ್ಸಿಪಾಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಇದೀಗ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣಾಗಿದೆ. ಹಲವು ಸೆಲೆಬ್ರೆಟಿಗಳು ಈ ಕುರಿತು ಮಾತನಾಡಿದ್ದಾರೆ. ಇನ್ನು ಕಾಂಗ್ರೆಸ್ ನೇರವಾಗಿ ಯುಪಿ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಾರ್ಟಿ ವಿರುದ್ದ ಆರೋಪ ಮಾಡಿದೆ.

Follow Us:
Download App:
  • android
  • ios