Asianet Suvarna News Asianet Suvarna News

ಸ್ವೀಡನ್‌ನಲ್ಲಿ ಜಾಗತೀಕರಣದ ಪ್ರಶ್ನೆಗೆ ನಿಮ್ಮ ಬಾಯಿಗೆ ತುಪ್ಪ, ಸಕ್ಕರೆ ಹಾಕಾ ಎಂದ ಜೈಶಂಕರ್‌: ವಿಡಿಯೋ ವೈರಲ್‌

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ‘ನಿಮ್ಮ ಬಾಯಿಗೆ ತುಪ್ಪ - ಸಕ್ಕರೆ ಹಾಕಾ’ ಎಂದು ಹೇಳಿದ್ದು, ಇದನ್ನು ಕೇಳಿದ ಸಭಿಕರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

aapke muh mein ghee shakkar jaishankar s reply to query on pani puri replacing hamburger in west goes viral ash
Author
First Published May 16, 2023, 11:31 AM IST

ಸ್ಟಾಕ್‌ಹೋಮ್ (ಮೇ 16, 2023): ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇಲ್ಲಿನ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದದ ವೇಳೆ ಭಾರತೀಯ ಸಂಸ್ಕೃತಿಯ ಜಾಗತೀಕರಣದ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಜನಪ್ರಿಯ ಹಿಂದಿ ನುಡಿಗಟ್ಟು ಬಳಸಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ ಜನರೆಲ್ಲ ನಗೆಗಡಲಲ್ಲಿ ತೇಲಾಡಿದ್ದಾರೆ. 

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ‘ನಿಮ್ಮ ಬಾಯಿಗೆ ತುಪ್ಪ - ಸಕ್ಕರೆ ಹಾಕಾ’ ಎಂದು ಹೇಳಿದ್ದು, ಇದನ್ನು ಕೇಳಿದ ಸಭಿಕರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಯುರೋಪ್‌ ಒಕ್ಕೂಟದ ಇಂಡೋ-ಪೆಸಿಫಿಕ್ ಮಿನಿಸ್ಟ್ರಿಯಲ್ ಫೋರಮ್ (ಇಐಪಿಎಂಎಫ್) ನಲ್ಲಿ ಭಾಗವಹಿಸಲು ಮೂರು ದಿನಗಳ ಸ್ವೀಡನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್‌ ಅವರು ಭಾನುವಾರ ಸಂಜೆ ಸ್ವೀಡನ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು ಮತ್ತು ದ್ವಿಪಕ್ಷೀಯ ಸಂಬಂಧದ ಪ್ರಗತಿಯನ್ನು ಅವರಿಗೆ ತಿಳಿಸಿದರು. ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆಗಳು ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅದು ಸೃಷ್ಟಿಸಿದ ಅವಕಾಶಗಳ ಕುರಿತು ಜೈಶಂಕರ್‌ ಮಾತನಾಡಿದ್ದಾರೆ.

ಇದನ್ನು ಓದಿ: ಸನ್‌ಗ್ಲಾಸ್‌ ಹಾಕಿಕೊಂಡ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಫೋಟೋ ವೈರಲ್‌: ರಿಯಲ್‌ ಜೇಮ್ಸ್‌ ಬಾಂಡ್‌ ಎಂದ ನೆಟ್ಟಿಗರು

ಜಾಗತೀಕರಣದ ಈ ಯುಗದಲ್ಲಿ, ಪಾಶ್ಚಿಮಾತ್ಯರು ಹ್ಯಾಂಬರ್ಗರ್ ಬದಲಿಗೆ ಪಾನಿ ಪುರಿ ತಿನ್ನಲು ಪ್ರಾರಂಭಿಸುತ್ತಾರೆಯೇ ಮತ್ತು ನ್ಯೂಯಾರ್ಕ್ ಬದಲಿಗೆ H&M ಟಿ-ಶರ್ಟ್‌ಗಳ ಮೇಲೆ ನವ ದೆಹಲಿ ಎಂದು ಪ್ರಿಂಟ್‌ ಮಾಡಲಾಗುತ್ತದೆಯೇ ಎಂದು ವಿದೇಶಾಂಗ ಸಚಿವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್‌. ಜೈಶಂಕರ್‌, "ಒಂದು ಪದವಿದೆ, ನಿಮ್ಮ ಬಾಯಿಗೆ ತುಪ್ಪ - ಸಕ್ಕರೆ ಹಾಕಾ’ ಎಂದು ಹಿಂದಿಯಲ್ಲಿ ಹೇಳಿದ್ದಾರೆ. ಅಂದರೆ, ನೀವು ಹೇಳುತ್ತಿರುವುದು ನಿಜವಾಗಲಿ ಎಂದು ಭಾವಿಸುತ್ತೇನೆ ಎಂದಿದ್ದು, ಇದಕ್ಕೆ ಅಲ್ಲಿದ್ದ ಪ್ರೇಕ್ಷಕರು ನಕ್ಕಿದ್ದು ಮತ್ತು ಚಪ್ಪಾಳೆ ತಟ್ಟಿದ್ದಾರೆ.

"ಭಾರತೀಯ ಸಂಸ್ಕೃತಿಯ ಈ ಜಾಗತೀಕರಣವು ನಿಜವಾಗಿ ನಡೆಯುತ್ತಿದೆ ಎಂದು ನಾನು ನೋಡುತ್ತೇನೆ. ಮತ್ತು ಇದು ವಿವಿಧ ಅಂಶಗಳಿಂದ ನಡೆಯುತ್ತಿದೆ. ಒಂದು, ಸಹಜವಾಗಿ, 
ಭಾರತೀಯ ಮೂಲದ ವಲಸೆಗಾರರ ಹರಡುವಿಕೆಯಿಂದಾಗಿ. ಎರಡನೆಯದು, ನಾವೇ ಅದನ್ನು ಹೆಚ್ಚು ಆತ್ಮವಿಶ್ವಾಸದಿಂದ ವ್ಯಕ್ತಪಡಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ.
ನಾವು ಅದನ್ನು (ಭಾರತೀಯ ಸಂಸ್ಕೃತಿಯ ಜಾಗತೀಕರಣ) ಹೆಚ್ಚು ಸಾರ್ವತ್ರಿಕವಾಗಿಸುವ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುವುದು ಮುಖ್ಯ’’ ಎಂದೂ ಜೈಶಂಕರ್ ಹೇಳಿದರು.

ಇದನ್ನೂ ಓದಿ: ಭುಟ್ಟೋ ಉಗ್ರರ ವಕ್ತಾರ; ಬಲಿಪಶುಗಳು, ಅಪರಾಧಿಗಳ ಜತೆ ಕೂರಲಾಗುವುದಿಲ್ಲ: ಜೈಶಂಕರ್‌ ಪ್ರಹಾರ

ಮತ್ತು ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ 2015 ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ರಾರಂಭಿಸಲಾಗಿರುವುದು. ಅಮೆರಿಕದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಪರಿಚಯಿಸಿದರು ಎಂದೂ ವಿದೇಶಾಂಗ ಸಚಿವರು ಹೇಳಿದ್ದಾರೆ. ಜತೆಗೆ, "ನಾನು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಯೋಗ ಇಷ್ಟು ಮಟ್ಟದಲ್ಲಿ ಯಶಸ್ವಿಯಾಗುತ್ತೆಂದು ಎಂದು ನಮ್ಮಲ್ಲಿ ಯಾರೂ ಊಹಿಸಲೂ ಸಾಧ್ಯವಿರಲಿಲ್ಲ. ಯೋಗದ ಬಗ್ಗೆ ಈಗ ಉತ್ಸಾಹ ಹೊಂದದ ದೇಶ ಜಗತ್ತಿನಲ್ಲಿಯೇ ಇಲ್ಲ..." ಎಂದೂ ವಿದೇಶಾಂಗ ಸಚಿವರು ಹೇಳಿದ್ದಾರೆ.

"ಆದರೆ ನಿಮಗೆ ತಿಳಿದಿರುವ ಇತರ ಕ್ಷೇತ್ರಗಳಿವೆ, ಅದು ಸಂಗೀತವಾಗಿರಬಹುದು, ಸಿನಿಮಾ ಆಗಿರಬಹುದು, ಅಂದರೆ, ಸಂಸ್ಕೃತಿಯ ಶಕ್ತಿ. ಮತ್ತು ಅದು ಭಾರತದ ಶಕ್ತಿ ಎಂದು ನಾನು ಭಾವಿಸುತ್ತೇನೆ. ಇದು ಭಾರತದ ಶಕ್ತಿಯಾಗಿದೆ, ನಾವು ಮಾಡಬಹುದಾದ ರೀತಿಯಲ್ಲಿ, ನಾವು ಮಾಡಬೇಕು ಮತ್ತು ನಿಮ್ಮಂತಹ ಜನರು ತುಂಬಾ ಉತ್ಸಾಹದಿಂದ ಇರಬಹುದೆಂದು ನಾನು ಭಾವಿಸುತ್ತೇನೆ. ಎಲ್ಲರೂ ನಿಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಕ್ರಿಕೆಟ್‌ ಟೀಂ ಸ್ಟೈಲಲ್ಲಿ ಕ್ಯಾಪ್ಟನ್‌ ಮೋದಿ ಕೆಲಸ: ವಿದೇಶಾಂಗ ಸಚಿವ ಜೈಶಂಕರ್‌ ವಿವರಿಸಿದ್ದು ಹೀಗೆ..

ಜೈಶಂಕರ್ ಅವರು ಸ್ವೀಡನ್‌ಗೆ ಭೇಟಿ ನೀಡಿದ್ದು, ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಇದು ಅವರ ಮೊದಲ ಭೇಟಿಯಾಗಿದೆ. ಭಾರತ ಮತ್ತು ಸ್ವೀಡನ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವರ್ಷವನ್ನು ಆಚರಿಸುತ್ತಿರುವ ಸಮಯದಲ್ಲಿ ಬೇಟಿ ನೀಡಿದ್ದಾರೆ. ಸ್ವೀಡನ್ ಪ್ರಸ್ತುತ ಯುರೋಪಿಯನ್ ಒಕ್ಕೂಟದ ಕೌನ್ಸಿಲ್‌ನ ಅಧ್ಯಕ್ಷ ಸ್ಥಾನವನ್ನು ಹೊಂದಿದೆ.

ಇದನ್ನೂ ಓದಿ: ನಾನು ಭಾರತದ ದೊಡ್ಡ ಅಭಿಮಾನಿ ಎಂದ China ಉನ್ನತ ಅಧಿಕಾರಿ..!

Latest Videos
Follow Us:
Download App:
  • android
  • ios