ಪಂಜಾಬ್‌ನಲ್ಲಿ ಯಾವುದೇ ಮೈತ್ರಿ ಎಲ್ಲ ಎಂದಿದ್ದ ಆಮ್ ಆದ್ಮಿ ಪಾರ್ಟಿ ಇದೀಗ ದೆಹಲಿಯಲ್ಲೂ ಇಂಡಿಯಾ ಮೈತ್ರಿಗೆ ಶಾಕ್ ನೀಡಿದೆ. ದೆಹಲಿಯ ಎಲ್ಲಾ 7 ಕ್ಷೇತ್ರದಲ್ಲಿ ಆಪ್ ಸ್ಪರ್ಧಿಸುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇದೀಗ ಇಂಡಿಯಾ ಒಕ್ಕೂಟದ ಮೈತ್ರಿ ಕೆಲವೇ ರಾಜ್ಯಕ್ಕೆ ಕೆಲವೇ ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ.

ದಹೆಲಿ(ಫೆ.11) ಇಂಡಿಯಾ ಮೈತ್ರಿ ಒಕ್ಕೂಟ ಇದೀಗ ಕೆಲವು ರಾಜ್ಯ, ಕೆಲವು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ ಇಂಡಿಯಾ ಒಕ್ಕೂಟಕ್ಕೆ 2ನೇ ಶಾಕ್ ನೀಡಿದೆ. ಪಂಜಾಬ್‌ನಲ್ಲಿ ಸ್ವತಂತ್ರ ಸ್ಪರ್ಧೆ ಘೋಷಿಸಿದ ಆಮ್ ಆದ್ಮಿ ಪಾರ್ಟಿ ಇದೀಗ ದೆಹಲಿಯಲ್ಲಿ ಏಕಾಂಗಿ ಸ್ಪರ್ಧೆ ಘೋಷಿಸಿದೆ. ಇಂಡಿಯಾ ಒಕ್ಕೂಟದ ಜೊತೆ ಯಾವುದೇ ಮೈತ್ರಿ ಇಲ್ಲ, ದೆಹಲಿಯ ಎಲ್ಲಾ 7 ಕ್ಷೇತ್ರಗಳಲ್ಲಿ ಆಪ್ ಸ್ಪರ್ಧೆ ಮಾಡಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ನಮ್ಮನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಈ ಕುತಂತ್ರ ರಾಜಕಾರಣವನ್ನು ದೆಹಲಿಯ ಜನ ನೋಡುತ್ತಲೇ ಇದ್ದಾರೆ. ಇಷ್ಟು ದಿನ ಸಹಿಸಿಕೊಂಡಿದ್ದಾರೆ. ಆದರೆ ಈ ಬಾರಿ ದೆಹಲಿ ಜನ ನಿರ್ಧರಿಸಿದ್ದಾರೆ, ದೆಹಲಿಯ ಎಲ್ಲಾ 7 ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ ಮಾಡಲಿದೆ. ಎಲ್ಲಾ 7 ಕ್ಷೇತ್ರದಲ್ಲಿ ಆಪ್ ಗೆಲುವು ದಾಖಲಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 10 ರಿಂದ 15 ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ಮೈತ್ರಿ ನೆರವು ನಿರೀಕ್ಷಿಸುತ್ತಾ ಲೋಕಸಭೆಗೆ 3 ಅಭ್ಯರ್ಥಿಗಳ ಹೆಸರು ಘೋಷಿಸಿದ ಆಪ್, ಗೊಂದಲ ಡಬಲ್!

ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ತಾನು ಪ್ರಬಲವಾಗಿರುವ ಪಂಜಾಬ್‌ನಲ್ಲಿ ಎಲ್ಲ 13 ಮತ್ತು ಚಂಡೀಗಢದ 1 ಸ್ಥಾನಗಳಲ್ಲಿ ಕಣಕ್ಕಿಳಿಯುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿಯ ಸಾಧ್ಯತೆಯನ್ನು ಸ್ಥಳೀಯ ಆಪ್‌ ನಾಯಕರು ಆರಂಭದಿಂದಲೇ ತಿರಸ್ಕರಿಸುತ್ತಲೇ ಬಂದಿದ್ದರಾದರೂ, ಈ ಬಗ್ಗೆ ಕೇಜ್ರಿವಾಲ್‌ ಅವರಿಂದ ಹೇಳಿಕೆ ಬಂದಿರಲಿಲ್ಲ. ಆದರೆ ಕೇಜ್ರಿವಾಲ್ ಘೋಷಣೆ ಬೆನ್ನಲ್ಲೇ ಇಂಡಿಯಾ ಮೈತ್ರಿಗೆ ಶಾಕ್ ಎದುರಾಗಿತ್ತು. ಇದೀಗ ದೆಹಲಿಯಲ್ಲೂ ಇಂಡಿಯಾ ಮೈತ್ರಿ ಕೆಲವೇ ಪಕ್ಷಕ್ಕೆ ಸೀಮಿತವಾಗಿದೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು ಎಲ್ಲ ಕ್ಷೇತ್ರಗಳಲ್ಲಿ ಪ್ರಕಟಿಸುವುದಾಗಿ ಘೋಷಿಸಿತ್ತು. ಹಾಗೆಯೇ ಮಹಾರಾಷ್ಟ್ರದಲ್ಲಿ ಶಿವಸೇನೆ ಕೂಡಾ ಕಳೆದ ವರ್ಷ ತಾನು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಈ ಬಾರಿ ಕಣಕ್ಕೆ ಇಳಿಯಲಿದ್ದು, ಕಾಂಗ್ರೆಸ್‌ ಬೇಕಿದ್ದರೆ ಎನ್‌ಸಿಪಿಯೊಂದಿಗೆ ಸೀಟು ಹಂಚಿಕೆ ಮಾತುಕತೆ ನಡೆಸಲಿ ಎಂದು ಸ್ಪಷ್ಟಪಡಿಸಿದೆ. ಇನ್ನು ಬಿಹಾರದಲ್ಲೂ ಜೆಡಿಯು ಇತ್ತೀಚೆಗೆ ಕಾಂಗ್ರೆಸ್‌- ಆರ್‌ಜೆಡಿ ಜೊತೆಗಿನ ಮೈತ್ರಿ ಮುರಿದುಕೊಂಡಿತ್ತು. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಈಗಾಗಲೇ 16 ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ಅಭ್ಯರ್ಥಿಗಳ ಘೋಷಣೆ ಮಾಡಿದೆ.

ಆಪ್‌ ಶಾಸಕರ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌: ಸಿಎಂ ಕೇಜ್ರಿವಾಲ್ ಆರೋಪ